More

    ಮತ ಚಲಾಯಿಸಿ ಹಳೆಯ ನೆನಪು ತೆರೆದಿಟ್ಟ ಮಾಜಿ ಪ್ರಧಾನಿ; ಎಚ್​ಡಿಡಿ ಹೇಳಿದ್ದೇನು?

    ಹಾಸನ: ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಪತ್ನಿ ಚೆನ್ನಮ್ಮ ಅವರೊಂದಿಗೆ ತೆರಳಿ ಮತ ಚಲಾಯಿಸಿದ್ದಾರೆ. ಪಡುವಲಹಿಪ್ಪೆ ಗ್ರಾಮ ಮತಗಟ್ಟೆ ಸಂಖ್ಯೆ 251ರಲ್ಲಿ ಹಕ್ಕು ಚಲಾವಣೆ ಮಾಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಾಜಿ ಪ್ರಧಾನಿ ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

    ಇದನ್ನೂ ಓದಿ: ಹುಟ್ಟೂರಿನಲ್ಲಿ ಮತ ಚಲಾಯಿಸಿದ ರಿಷಬ್ ಶೆಟ್ಟಿ; ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ ಫ್ಯಾನ್ಸ್!

    ಇಲ್ಲೇ ವ್ಯವಸಾಯ ಶುರು ಮಾಡಿದ್ದೆವು!

    ನನ್ನ ಹುಟ್ಟೂರು ಹರದನಹಳ್ಳಿಯಲ್ಲಿ ಇರುವ ಆಸ್ತಿಯನ್ನೆಲ್ಲಾ ನನ್ನ ತಮ್ಮಂದಿರಿಗೆ ಮತ್ತು ಚಿಕ್ಕಪ್ಪಂದಿರಿಗೆ ವಹಿಸಿಕೊಟ್ಟೆ. ಇಲ್ಲಿ ಜಮೀನು ಖರೀದಿಸಿ ವ್ಯವಸಾಯ ಶುರು ಮಾಡಿದ್ದೆವು. ಅಂದಿನಿಂದ ಇಲ್ಲಿಯವರೆಗೆ ಇದೇ ಗ್ರಾಮದಲ್ಲಿ ಮತದಾನ ಮಾಡುತ್ತಿದ್ದೇನೆ ಎನ್ನತ್ತಾ ಹಳೆಯ ದಿನಗಳನ್ನು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರು ನೆನಪಿಸಿಕೊಂಡರು.

    ಇದನ್ನೂ ಓದಿ: ಮತ ಚಲಾಯಿಸಲು ಬಂದ ಮಹಿಳೆಗೆ ಲಾಠಿ ಏಟು; ಪೊಲೀಸರಿಗೆ ಗ್ರಾಮಸ್ಥರಿಂದ ತರಾಟೆ

    ರೇವಣ್ಣ ಆಗಿನ್ನೂ ಚಿಕ್ಕವನು!

    ರೇವಣ್ಣ ಆಗಿನ್ನೂ ಚಿಕ್ಕವನು. ವಿದ್ಯಾಭ್ಯಾಸ ಮಾಡುತ್ತಿದ್ದ. ಐಟಿಐ ಮಾಡಿ ಕೈಗಾರಿಕೆ ಮಾಡಬೇಕೆಂಬ ಆಸೆ ಇತ್ತು. ಆದರೆ ಅವರ ಹಣೆ ಬರಹ ಬದಲಾಗಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾನು ಜೈಲಿನಲ್ಲಿ ಇದ್ದೆ. ಆಗ ರೇವಣ್ಣ ಐಟಿಐ ಬಿಟ್ಟು ವ್ಯವಸಾಯ ಶುರು ಮಾಡಿದರು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts