More

  ಬೀದಿ ನಾಯಿಗಳ ದಾಳಿ, ಗ್ರಾಮಸ್ಥರ ಹರಸಾಹಸದ ನಡುವೆಯೂ ಪ್ರಾಣ ಬಿಟ್ಟ ಕೃಷ್ಣಮೃಗ 

  ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಬೆಂಗಳೂರು ಜೋಡಿ ರಸ್ತೆಯ ಕಿಶೋರ ವಿದ್ಯಾಭವನ ಸಮೀಪದಲ್ಲಿ ಕಾಣಿಸಿಕೊಂಡ ಕೃಷ್ಣಮೃಗದ ಮೇಲೆ ಐದಕ್ಕೂ ಹೆಚ್ಚು ನಾಯಿಗಳು ದಾಳಿ ನಡೆಸಿ, ಸಾಯಿಸಿವೆ.

  ರಸ್ತೆಯ ಬದಿಯಲ್ಲಿ ಕೃಷ್ಣಮೃಗವು ಗಂಭೀರ ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿ ಬಿದ್ದಿದ್ದು ತಕ್ಷಣ ಸ್ಥಳೀಯರಾದ ನಾಗರಾಜ್, ಸಲೀಂ, ಮುಕ್ತಿಯಾರ್ ಮತ್ತು ಷೇಕ್ ಬಾಬ್‌ಜಾನ್  ತಕ್ಷಣ ವೈದ್ಯರಿಂದ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಮೂಕ ಜೀವ ಬದುಕಿಲ್ಲ. ಇದರ ಬಗ್ಗೆ ಅರಣ್ಯ ಇಲಾಖೆಯ ಸಹಾಯಕ ಅರಣ್ಯಾಧಿಕಾರಿ ಧನಲಕ್ಷ್ಮೀಗೆ ಮಾಹಿತಿ ನೀಡಲಾಗಿದೆ. ಇನ್ನೂ ಪಶುವೈದ್ಯಾಧಿಕಾರಿಗಳಿಂದ ಮರಣೋ ತ್ತರ ಪರೀಕ್ಷೆ ನಡೆಸಿದ ಬಳಿಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮೃತಪಟ್ಟ ಕೃಷ್ಣಮೃಗದ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

  ಆಹಾರ, ನೀರನ್ನರಿಸಿ ನಗರದ ಕಡೆಗೆ ಬಂದು ಅರಣ್ಯ ಪ್ರದೇಶಕ್ಕೆ ಸಾಗುತ್ತಿದ್ದ ಸಂದರ್ಭದಲ್ಲಿ ಬೀದಿ ನಾಯಿಗಳು ಕೃಷ್ಣಮೃಗದ ಮೇಲೆ ದಾಳಿ ನಡೆಸಿವೆ. ಮನಸೋ ಇಚ್ಚೆ ಎಲ್ಲೆಂದರಲ್ಲಿ ಕಚ್ಚಿವೆ. ಇದರಿಂದ ಗಂಭೀರವಾಗಿ ಗಾಯಗೊಂಡು ಮೂಕಜೀವಿ ರಸ್ತೆಯ ಬದಿಯಲ್ಲಿ ಬಿದ್ದು ಒದ್ದಾಡುತ್ತಿತ್ತು. ಇದೇ ವೇಳೆ ನಾಯಿಗಳನ್ನು ಓಡಿಸಿ, ಪ್ರಾಣವನ್ನು ಉಳಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

  *ಮತ್ತೊಂದು ಜಿಂಕೆ ರಕ್ಷಣೆ

  ಚಿಂತಾಮಣಿ ತಾಲೂಕಿನ ಕೊಡದವಾಡಿಯಲ್ಲಿ ನಾಯಿಗಳ ದಾಳಿಗೆ ಸಿಲುಕಿದ್ದ  ಜಿಂಕೆಯೊಂದನ್ನು ಗ್ರಾಮಸ್ಥರು ರಕ್ಷಿಸಿ, ಅರಣ್ಯ ಇಲಾಖೆಯ ವಶಕ್ಕೆ ನೀಡಿದ್ದಾರೆ. ಜಿಂಕೆಯ ಎರಡು ಕಾಲುಗಳಿಗೆ ಗಾಯವಾಗಿದ್ದು ನಿಂತು ಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದೆ. ಹಾಗೆಯೇ ಅದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು ಬದುಕುಳಿಯುವುದು ಕಷ್ಟ ಎನ್ನುತ್ತಿದ್ದಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.

  ಚಿಂತಾಮಣಿ ತಾಲೂಕಿನಾದ್ಯಂತ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಕೈವಾರ ಬೆಟ್ಟ ಮತ್ತು ಕೈವಾರ ಅರಣ್ಯ ಪ್ರದೇಶ, ನಗರಕ್ಕೆ ಹೊಂದಿಕೊಂಡಿರುವ ಅಂಬಾಜಿದುರ್ಗ ಬೆಟ್ಟ ಮತ್ತು ನಗರಕ್ಕೆ ಸಮೀಪದಲ್ಲಿರುವ ಆಲಂಬಗಿರಿಯ ಅರಣ್ಯದಲ್ಲಿನ ಜಿಂಕೆಗಳು ನೀರಿಗಾಗಿ ನಗರದತ್ತ ಬರುತ್ತಿವೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts