More

    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾವುಕ

    ಬೆಂಗಳೂರು: ಕನ್ನಡಿಗರ ಕನ್ನಡ ಕೂಟ ವತಿಯಿಂದ ಭಾನುವಾರ ಚಾಮರಾಜಪೇಟೆಯ ಕರ್ನಾಟಕ ಕಲಾವಿದರ ಸಂಘದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರು ಭಾವುಕರಾದ ಪ್ರಸಂಗ ನಡೆಯಿತು.

    ನನಗೆ 91 ವರ್ಷವಾಗಿದೆ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ನೆನಪಿಸಿಕೊಂಡರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಇಳಿವಯಸ್ಸಿನಲ್ಲೂ ರಾಜ್ಯದ ಸಮಸ್ಯೆಗಳ ಬಗೆಹರಿಸಲು ಹೋರಾಡುವ ಪರಿಸ್ಥಿತಿ ಬಂದೊಗಿದೆ. ಹೀಗಾಗಿ, ಸೋಮವಾರ (ಆ.28) ಕರೆದಿರುವ ಸುದ್ದಿಗೋಷ್ಠಿಯಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ತೆರೆದಿಡುವುದಾಗಿ ಎಚ್‌ಡಿಡಿ ತಿಳಿಸಿದರು.
    ನಾನೊಬ್ಬ ಕನ್ನಡಿಗ, ಹಳೆಯ ವಿಚಾರಗಳನ್ನು ನಾನು ನೆನಸಿಕೊಳ್ಳುವುದಿಲ್ಲ. ಇಳಿವಯಸ್ಸಿನಲ್ಲಿಯೂ ರಾಜ್ಯದ ಸಮಸ್ಯೆ ಬಗ್ಗೆ ಗೊತ್ತಿದೆ. ಆ ಸಮಸ್ಯೆಗಳ ನೋಡಿದರೆ ಮನಸ್ಸಿಗೆ ನೋವಾಗತ್ತಿದೆ ಎಂದು ಹೇಳುತ್ತಿದ್ದ ವೇಳೆ ಎಚ್‌ಡಿಡಿ ಭಾವುಕರಾದರು.

    ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಎಚ್.ಡಿ. ದೇವೇಗೌಡರ ಭಾವುಕತೆ ಅವರ ಮನಸ್ಸಿನ ಹಿಂದೆ ಇರುವಂತಹ ವಿಚಾರಗಳನ್ನು ಮೌನವಾಗಿ ತಿಳಿಸುವ ಭಾವನೆ ಇದಾಗಿದೆ. ಗೌಡರು ತಮ್ಮ ಬದುಕಿನದ್ದಕ್ಕೂ ಆದರ್ಶವನ್ನು ಆಯ್ಕೆ ಮಾಡಿಕೊಂಡರು. ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಆದರ್ಶ ಜೀವನ ನಡೆಸಿದವರು.
    ಗೌಡರ ಶ್ರಮ ನಾವೆಲ್ಲರೂ ನೋಡಿದ್ದೇವೆ. ಅವರ ಜನಪರ ಕಾಳಜಿ ಅತ್ಯಂತ ವಿಶೇಷವಾದದ್ದು. ಅವರ ಬದುಕಿನ ಒಟ್ಟು ಲದ ತಪಸ್ಸು ಮುಂದಿನ ದಿನಗಳಲ್ಲಿ ಲ ಬಂದೇ ಬರಲಿದೆ ಎಂದರು.

    ದೇವೇಗೌಡರ ಕುರಿತು ‘ನೇಗಿಲ ಗೆರೆಗಳು’ ಪುಸ್ತಕವನ್ನು ಓದಿದರೆ ನಮಗೆಲ್ಲರಿಗೂ ಭಾವ ಸ್ಪರ್ಶವಾಗುವ ಮಹಾನ್ ಗ್ರಂಥ ಇದಾಗಿದೆ. ಸರಳ, ಸಜ್ಜನ ವ್ಯಕ್ತಿ ಹಾಗೂ ಪ್ರಾಮಾಣಿಕತೆ ಹೊಂದಿರುವ ಗೌಡರು, 11 ತಿಂಗಳು ಪ್ರಧಾನಮಂತ್ರಿ ಆಗಿದ್ದಾಗ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಅಪ್ರತಿಮ ಸಾಧನೆ ಮಾಡಿದ್ದಾರೆ. ಇವತ್ತಿನ ಸಮಾಜದಲ್ಲಿ ಆದರ್ಶ ಕೊರತೆ ಕಾಣುತ್ತಿರುವ ದಿನಮಾನಗಳಲ್ಲಿ ಇಂಥ ಕಾರ್ಯಕ್ರಮ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಶ್ರೀಗಳು ಹೇಳಿದರು.

    ಇದನ್ನೂ ಓದಿ: 10 ಸಾವಿರ ರಾಖಿಗಳಿಗೆ ಅಭಿಮಂತ್ರಣ

    ರಾಜಕಾರಣದಲ್ಲಿ ಬದ್ಧತೆ ಇದ್ದರೆ ಏನು ಬೇಕಾದರೂ ಸಾಧನೆ ಮಾಡುಬಹುದು ಎಂಬುದಕ್ಕೆ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರೇ ಸಾಕ್ಷಿ. ರಾಜ್ಯದ ಮುಖ್ಯಮಂತ್ರಿ ಆಗಿದ್ದ ವೇಳೆ ಎಚ್‌ಡಿಡಿ ಕೈಗೊಂಡಿದ್ದ ದೊಡ್ಡ ಯೋಜನೆಗಳು ನಮ್ಮ ಕಣ್ಣುಮುಂದೆಯೇ ಇವೆ. ಒಂದು ವೇಳೆ ಕೇಂದ್ರಕ್ಕೆ ಹೋಗದೆ ರಾಜ್ಯದಲ್ಲೇ ಮುಂದುವರಿದಿದ್ದರೆ ಇನ್ನೂ 10-15 ವರ್ಷಗಳ ಕಾಲ ಮುಖ್ಯಮಂತ್ರಿ ಆಗುವ ಸೌಭಾಗ್ಯವೂ ಅವರಿಗಿತ್ತು. ಅನಿವಾರ್ಯವಾಗಿ ಕೇಂದ್ರಕ್ಕೆ ಹೋಗಿದ್ದರಿಂದ ರಾಜ್ಯದ ಅಭಿವೃದ್ಧಿಗೆ ತುಸು ಹಿನ್ನೆಡೆಯಾಯಿತು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಜಯರಾಮ್ ರಾಯಪುರ ಹೇಳಿದರು.

    ಎಚ್‌ಡಿಡಿ ದಂಪತಿಗೆ ಸನ್ಮಾನ:
    ‘ಹುಟ್ಟೂರು ಸನ್ಮಾನ’ ಕಾರ್ಯಕ್ರಮದಲ್ಲಿ ಎಚ್.ಡಿ.ದೇವೇಗೌಡ ದಂಪತಿಗೆ ಸನ್ಮಾನಿಸಲಾಯಿತು. ಜೆಡಿಎಸ್ ಹಿರಿಯ ಮುಖಂಡ ಜ್ರುಲ್ಲಾ ಖಾನ್, ಅಭಿಮಾನಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ಟಿ.ವೆಂಕಟೇಶ್, ದುಬೈ ಕನ್ನಡಿಗರ ಕನ್ನಡ ಕೂಟದ ಅಧ್ಯಕ್ಷ ಸಾಧನ್ ದಾಸ್, ಅಮೆರಿಕ ಕನ್ನಡ ಕೂಟದ ಸಂಘದ ಮಾಜಿ ಅಧ್ಯಕ್ಷ ಡಾ.ಹಳೆಕೋಟೆ ವಿಶ್ವಾಮಿತ್ರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts