More

    ಪತ್ರಿಕಾ ವಿತರಕರ ಇ-ಶ್ರಮ ನೋಂದಣಿಗೆ ಚಾಲನೆ; ವಿಜಯವಾಣಿ, ಪತ್ರಿಕಾ ವಿತರಕರ ಸಂಘ, ಕಾರ್ಮಿಕ ಇಲಾಖೆ ಸಹಯೋಗ

    ಹಾವೇರಿ: ನಗರದ ಪಿಬಿ ರಸ್ತೆಯ ಲಕ್ಷ್ಮೀ ಕಾಂಪ್ಲೆಕ್ಸ್‌ನಲ್ಲಿರುವ ವಿಜಯವಾಣಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ ವಿತರಕರ ಇ-ಶ್ರಮ ಯೋಜನೆಯ ನೋಂದಣಿ ಅಭಿಯಾನಕ್ಕೆ ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ ಚಾಲನೆ ನೀಡಿದರು. ಕನ್ನಡದ ನಂಬರ್ ಒನ್ ದಿನಪತ್ರಿಕೆ ವಿಜಯವಾಣಿ, ರಾಜ್ಯ ಪತ್ರಿಕಾ ವಿತರಕರ ಸಂಘದ ತಾಲೂಕು ಘಟಕ ಹಾಗೂ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ ಅವರು ಪತ್ರಿಕಾ ವಿತರಕರಿಗೆ ಇ-ಶ್ರಮ ಕಾರ್ಡ್ ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
    ನಂತರ ಮಾತನಾಡಿದ ಅವರು, ಇ-ಶ್ರಮ ಯೋಜನೆಯಲ್ಲಿ ನೋಂದಾಯಿಸಿದ ಪತ್ರಿಕಾ ವಿತರಕರಿಗೆ ಒಂದು ವೇಳೆ ಅಪಘಾತ ಸಂಭವಿಸಿ ಗಾಯಗೊಂಡರೆ ಅವರ ಕುಟುಂಬಕ್ಕೆ ಒಂದು ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚ ಹಾಗೂ ಅಪಘಾತದಲ್ಲಿ ಮೃತಪಟ್ಟರೆ ಎರಡು ಲಕ್ಷ ರೂ.ವರೆಗೆ ಪರಿಹಾರ ನೀಡುವ ಯೋಜನೆ ಇದಾಗಿದೆ. ಡಿಸೆಂಬರ್‌ನಲ್ಲಿ ಯೋಜನೆ ಜಾರಿಯಾಗಿದ್ದು, ಭವಿಷ್ಯದಲ್ಲಿ ಮತ್ತಷ್ಟು ಯೋಜನೆಗಳು ಇದರಿಂದ ದೊರೆಯುವ ಸಾಧ್ಯತೆ ಇದೆ. ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.
    ಸಮಾರಂಭದಲ್ಲಿ ಪತ್ರಿಕಾ ವಿತರಕರ ಸಂಘದ ತಾಲೂಕು ಅಧ್ಯಕ್ಷ ಕರಬಸಪ್ಪ ಹಳದೂರ, ಕಾರ್ಯದರ್ಶಿ ಜಯಪ್ಪ ಬಣಕಾರ, ವಿಜಯವಾಣಿ ಪ್ರಸರಣ ವಿಭಾಗದ ಪ್ರತಿನಿಧಿ ಕೊಟ್ರೇಶ ಅದ್ವಾನಿಮಠ, ಕಾರ್ಮಿಕ ಇಲಾಖೆ ಸಿಬ್ಬಂದಿ ಶಶಿಧರ ಚೊಗಚಿಕೊಪ್ಪ, ಪತ್ರಿಕಾ ವಿತರಕರಾದ ಅಶೋಕ ಇಂಗಳಹಳ್ಳಿ, ನಿಂಗಪ್ಪ ಮಡಿವಾಳರ, ಗದಿಗೇಶ ಹಿರೇಮಠ, ಇತರರಿದ್ದರು.

    ನೀವೂ ನೋಂದಾಯಿಸಿ
    ನೋಂದಣಿ ಮಾಡಿಸಲು ಬಾಕಿ ಇರುವ ಜಿಲ್ಲೆಯ ಪತ್ರಿಕಾ ವಿತರಕರು ಆನ್‌ಲೈನ್ ಮೂಲಕ ದಾಖಲಿಸಬಹುದು. ಅಥವಾ ಆಧಾರ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಆಧಾರ್‌ನಲ್ಲಿ ನೋಂದಾಯಿಸಿದ ಮೊಬೈಲ್‌ನೊಂದಿಗೆ ಡಿಸಿ ಕಚೇರಿಯಲ್ಲಿರುವ ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿಗೆ ಭೇಟಿ ನೀಡಿ ನೋಂದಾಯಿಸಬಹುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts