More

    ಗುತ್ತಿಗೆದಾರರಿಂದ ಲಂಚ ಪಡೆಯುವಾಗ ಬಂಧನ * ಲೋಕಾಯುಕ್ತ ಬಲೆಗೆ ಬಿದ್ದ ಶಿಗ್ಗಾಂವಿ ಏತ ನೀರಾವರಿ ಉಪ ವಿಭಾಗದ ಅಧಿಕಾರಿಗಳು

    ಹಾವೇರಿ: ರಸ್ತೆ ಕಾಮಗಾರಿಗಳ ಬಿಲ್ ಪಾಸ್ ಮಾಡಲು ಫೋನ್ ಪೇ ಮೂಲಕ 83,000 ರೂ. ಪಡೆದು, ಮತ್ತೆ 1,00,000 ರೂ.ಗೆ ಲಂಚ ಪಡೆಯುತ್ತಿದ್ದ ಶಿಗ್ಗಾಂವಿ ಏತ ನೀರಾವರಿ ಉಪ ವಿಭಾಗ 1 ಮತ್ತು 2ರ ಧಾರವಾಡ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ ಬಿಂಗೆ. ಹಾಗೂ ಕಿರಿಯ ಇಂಜಿನಿಯರ್ ಪ್ರಕಾಶ ಹೊಸಮನಿ ಎಂಬುವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
    ಹೊನ್ನಾವರ ತಾಲೂಕು ಎಳ್ಳಿಮಕ್ಕಿ ಗ್ರಾಮದ ಒಂದನೇ ದರ್ಜೆ ಗುತ್ತಿಗೆದಾರ ಬಾಲಕೃಷ್ಣ ನಾಯ್ಕ ಎಂಬುವರು ಹಾವೇರಿ ಜಿಲ್ಲೆಯ ಹೊಟ್ಟೂರು-ಬಿಸನಳ್ಳಿ, ಶಡಗರವಳ್ಳಿ-ಸಿದ್ದರಾಮೇಶ್ವರಗುಡ್ಡ ಹಾಗೂ ತೋರೂರು-ಹನಕನಹಳ್ಳಿ ರಸ್ತೆ ಕಾಮಗಾರಿಗಳನ್ನು ನಿರ್ವಹಿಸಿದ್ದರು. ಈ ಕಾಮಗಾರಿಗಳ ಬಿಲ್‌ಗಳನ್ನು ಮೇಲಧಿಕಾರಿಗಳಿಗೆ ಕಳುಹಿಸಲು ಮಂಜುನಾಥ ಹಾಗೂ ಪ್ರಕಾಶ ಫೋನ್‌ಪೇ ಮೂಲಕ 83 ಸಾವಿರ ರೂ. ಪಡೆದಿದ್ದರು. ಸೆಕೆಂಡ್ ಮತ್ತು ಫೈನಲ್ ಬಿಲ್ ಪಾಸ್ ಮಾಡಲು ತಲಾ 50 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಬಾಲಕೃಷ್ಣ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಮಂಗಳವಾರ ಧಾರವಾಡ ಕಚೇರಿಯಲ್ಲಿ 1 ಲಕ್ಷ ರೂ. ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿದ್ದಾರೆ.
    ಲೋಕಾಯುಕ್ತ ಡಿವೈಎಸ್‌ಪಿ ಚಂದ್ರಶೇಖರ ಬಿ.ಪಿ., ತನಿಖಾಧಿಕಾರಿಗಳಾದ ಮಂಜುನಾಥ ಪಂಡಿತ, ಪೊಲೀಸ್ ನಿರೀಕ್ಷಕರಾದ ಮುಸ್ತಾಕ್ ಅಹ್ಮದ್ ಶೇಖ, ಆಂಜನೇಯ ಎನ್.ಎಚ್., ಸಿಬ್ಬಂದಿ ಸಿ.ಎಂ.ಬಾರ್ಕಿ, ಎಂ.ಕೆ.ನದಾಫ, ಎಂ.ಕೆ. ಲಕ್ಷ್ಮೇಶ್ವರ, ಆನಂದ ತಳಕಲ್ಲ, ಎಸ್.ಎನ್.ಕಡಕೋಳ, ಬಿ.ಎಸ್.ಸಂಕಣ್ಣವರ, ಎನ್.ಬಿ.ಪಾಟೀಲ, ಎ.ಜಿ.ಶೆಟ್ಟರ, ಎಂ.ಸಿ.ಅರಸಿಕೆರೆ, ಎಂ.ಎಸ್.ಕೊಂಬಳಿ, ರಮೇಶ ಗೆಜ್ಜಿಹಳ್ಳಿ ತಂಡದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts