More

    ದೇಶ ವಿಭಜನೆ ಮಾತು ಸಮರ್ಥಿಸಿಕೊಳ್ಳಲ್ಲ; ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ

    ಹಾವೇರಿ: ದೇಶದಲ್ಲಿ ಒಗ್ಗಟ್ಟು ಇರಬೇಕು. ದೇಶ ವಿಭಜನೆ ಕುರಿತು ಯಾರೇ ಹೇಳಿಕೆ ನೀಡಿದರೂ ಖಂಡಿಸುತ್ತೇವೆ. ಅದನ್ನು ನಾವು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು.
    ತಾಲೂಕಿನ ಅಗಡಿ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಡಿದ ಅವರು, ದೇಶ ಒಗ್ಗೂಡಿಸುವುದಕ್ಕಾಗಿ ರಾಜೀವ ಗಾಂಧಿ ತ್ಯಾಗ ಮಾಡಿದರು. ಬ್ಲೂ ಸ್ಟಾರ್ ಆಪರೇಷನ್ ಮಾಡಿದ್ದವರು ಯಾರು? ಕಾಂಗ್ರೆಸ್‌ನವರ ತ್ಯಾಗ ಬಲಿದಾನದಿಂದ ದೇಶ ಉಳಿದಿದೆ. ದೇಶದ ಹೋರಾಟದಲ್ಲಿ ಭಾಗಿಯಾಗಲ್ಲವೆಂದು ಪತ್ರ ಬರೆದು ಕೊಟ್ಟಿದ್ದು ಬಿಜೆಪಿ ಸಂತತಿ. ದೇಶಕ್ಕೆ ಬಿಜೆಪಿ ಕೊಡುಗೆ ಏನು ಎಂದು ಅವರು ಪ್ರಶ್ನಿಸಿದರು.
    ಮಾಜಿ ಡಿಸಿಎಂ ಈಶ್ವರಪ್ಪ ಹಿರಿಯ ನಾಯಕರು. ಅವರು ಹೇಳಿದ್ದನ್ನು ಸಂತೋಷದಿಂದ ಸ್ವಾಗತಿಸುತ್ತೇವೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿದ ಹಾಗೆ ಅವರ ಮೆದುಳಿಗೂ ನಾಲಗೆಗೂ ಲಿಂಕ್ ಇಲ್ಲ. ಹೀಗೆ ಲಿಂಕ್ ಇಲ್ಲದಿದ್ದಾಗ ಕೆಲ ಹೇಳಿಕೆ ನೀಡಿದ್ದಾರೆ ಎಂದರು.
    ರಾಜ್ಯಕ್ಕೆ ಅನ್ಯಾಯವಾದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಪ್ರತಿಭಟಿಸಿದ್ದೇವೆ. ನಮ್ಮ ರಾಜ್ಯಕ್ಕೆ ಹಾಗೂ ರಾಜ್ಯದ ನಾಯಕರಿಗೆ ಅನ್ಯಾಯ ಆದರೆ ನೋಡಿಕೊಂಡು ಕೂರುವುದಿಲ್ಲ. ಇದಕ್ಕೆ ಯಡಿಯೂರಪ್ಪನವರದ್ದು ಬೆಂಬಲ ಇದೆಯಾ ಹಾಗಿದ್ದರೆ. ಸಿದ್ದರಾಮಯ್ಯನವರು ಅಂಕಿ- ಸಂಖ್ಯೆಯ ಮೂಲಕ ಅನ್ಯಾಯ ಆಗಿರುವ ಬಗ್ಗೆ ತಿಳಿಸಿದ್ದಾರೆ. ಅದನ್ನು ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತಿ ಆಗುವುದಾಗಿ ಹೇಳಿದ್ದಾರೆ. ಇದಕ್ಕಿಂತ ದೊಡ್ಡ ಸವಾಲು ಇಲ್ಲ. ಮೊದಲು ಇದಕ್ಕೆ ಉತ್ತರ ಕೊಡೋಕೆ ಹೇಳಿ ಎಂದರು.
    ತುರ್ತು ಕೆಲಸದ ಹಿನ್ನೆಲೆಯಲ್ಲಿ ಅಹಿಂದ ನಾಯಕರ ಸಭೆಗೆ ನಾನು ಹೋಗಿರಲಿಲ್ಲ. ಅಹಿಂದ ನಾಯಕ ಎಂದರೆ ಯಾರು ? ಕೇವಲ ಅಹಿಂದ ಜನರಿಂದ ನಾವು ಗೆದ್ದಿಲ್ಲ. ನಾವೆಲ್ಲ ಜನ ನಾಯಕರು. ಎಲ್ಲ ಜಾತಿಯ ಬಡವರ ಓಟಿನಿಂದ ಗೆದ್ದಿದ್ದೇವೆ. ಪಕ್ಷದ ಬಲವರ್ಧನೆ ಮಾಡುವುದಕ್ಕೆ ಸಭೆಯಲ್ಲಿ ಸೇರಿದ್ದೇವೆ. ಚುನಾವಣೆ ಇದೆ. ಆದ್ದರಿಂದ ಡಿಸಿಎಂ ವಿಚಾರ ಪ್ರಸ್ತಾವನೆ ಮಾಡಬಾರದು ಎಂದು ನಮ್ಮ ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಅವರ ಮಾತಿಗೆ ಮನ್ನಣೆ ನೀಡಿದ್ದೇವೆ. ಚುನಾವಣೆ ಬಳಿಕ ನೋಡೊಣ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts