More

    ನಂದಿ ಲೇಔಟ್ ಬನ್ನಿ ಮಹಾಂಕಾಳಿ ಕಾರ್ತಿಕೋತ್ಸವ

    ಹಾವೇರಿ: ದಾನ, ಧರ್ಮ, ಪರೋಪಕಾರಗಳಿಂದ ವ್ಯಕ್ತಿಯು ಸಮಾಜದಲ್ಲಿ ಶ್ರೇಷ್ಠ ನಾಗರಿಕನಾಗುತ್ತಾನೆ. ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಬೆಳಕನ್ನು ಪಡೆದು ಆರೋಗ್ಯ ಮತ್ತು ಯಶಸ್ಸನ್ನು ತಂದು ತಂದು ಕೊಡುವದೇ ಕಾರ್ತಿಕ ಮಾಸದ ವಿಶೇಷ. ಈ ಆಚರಣೆಯಿಂದ ವ್ಯಕ್ತಿ ವಿಶೇಷ ಶಕ್ತಿಯನ್ನು ಪೆದುಕೊಳ್ಳುತ್ತಾನೆ ಎಂದು ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
    ನಗರದ ಇಜಾರಿಲಕಮಾಪುರದ ನಂದಿ ಲೇಔಟ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬನ್ನಿ ಮಹಾಂಕಾಳಿಯ ಕಾತೀಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
    ಭಾರತದ ಪ್ರತಿಯೊಂದು ಹಬ್ಬ, ಆಚರಣೆಗಳು ವೈಜ್ಞಾನಿಕ ಹಿನ್ನೆಲೆಯನ್ನು ಒಳಗೊಂಡಿವೆ. ಚಳಿಗಾಲದಲ್ಲಿ ಆರಂಭವಾಗುವ ಕಾರ್ತಿಕ ಮಾಸದಲ್ಲಿ ಗಾಳಿಯಲ್ಲಿ ತೇವಾಂಶ ಕಡಿಮೆಯಾಗಿ ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ಜತೆಗೆ ಬೇಗನೆ ಕತ್ತಲೆಯಾಗುತ್ತದೆ. ಆದ್ದರಿಂದ ಈ ಮಾಸದಲ್ಲಿ ದೀಪ ಬೆಳಗಿಸುವುದರಿಂದ ಪ್ರಕೃತಿಯೊಂದಿಗೆ ಮಾನವನ ಹೊಂದಾಣಿಕೆಯೂ ಆಗುತ್ತದೆ ಎಂದು ಹೇಳಿದರು.
    ಹಿರೇಲಿಂಗದಹಳ್ಳಿಯ ಹನುಮಂತಪ್ಪ ಕರವಾಳ ಅವರಿಂದ ಭಕ್ತಿಗೀತೆ ಮತ್ತು ಜನಪದ ಗೀತೆಗಳು ಜರುಗಿದವು.
    ಸಮಿತಿ ಅಧ್ಯಕ್ಷ ಕರಬಸಪ್ಪ ಗುಜ್ಜರಿ ಅಧ್ಯಕ್ಷತೆ ವಹಿಸಿದ್ದರು. ಸಿದ್ದಪ್ಪ ಸುತ್ತಕೋಟಿ, ಶಂಕ್ರಪ್ಪ ಹರಿಹರ, ಪರಶುರಾಮ ಸವಣೂರ, ರವಿ ಹೊಸಮನಿ, ಶಿವಪ್ಪ ಬಡಗೌಡರ, ಶರಣಪ್ಪ ಹೊಂಬಳ್ಳಿ, ಅಶೋಕ ದಂಡಣ್ಣನವರ, ನಂದಾ ನಾಗಭೂಷಣ, ಎಂ.ಎಂ. ನದಾಫ, ಮತ್ತಿತರರು ಉಪಸ್ಥಿತರಿದ್ದರು. ಸಿ.ಎಸ್.ಮರಳಿಹಳ್ಳಿ ಸ್ವಾಗತಿಸಿದರು. ಶಿವಯೋಗಿ ಅಂಗಡಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts