More

    ಸರ್ಕಾರದ ನೆರವಿನಿಂದ ಸ್ವುದ್ಯೋಗ ಆರಂಭಿಸಿ; ಜಿಲ್ಲಾ ಉದ್ಯಮಶೀಲ ಅಭಿಯಾನ ವ್ಯವಸ್ಥಾಪಕ ಸಂಜಯ ಕೋರೆ ಸಲಹೆ

    ಹಾವೇರಿ: ಯುವ ಸಮೂಹ ಸರ್ಕಾರದ ಸಾಲ ಸೌಲಭ್ಯವನ್ನು ಪಡೆದುಕೊಂಡು ಸ್ವಉದ್ಯೋಗ ಮಾಡುವ ಮೂಲಕ ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರಬೇಕು ಎಂದು ಜಿಲ್ಲಾ ಉದ್ಯಮಶೀಲ ಅಭಿಯಾನ ವ್ಯವಸ್ಥಾಪಕ ಸಂಜಯ ಕೋರೆ ಸಲಹೆ ನೀಡಿದರು.
    ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಬೆಂಗಳೂರು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಧಾರವಾಡದ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್)ದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಮೂರು ದಿನಗಳ ಉದ್ಯಮಶೀಲತಾ ತಿಳುವಳಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ದೇಶದ ಆರ್ಥಿಕತೆಯಲ್ಲಿ ಉದ್ಯಮದಾರರ ಪಾತ್ರ ತುಂಬಾ ದೊಡ್ಡದು. ಶಿಕ್ಷಣದ ಜತೆಗೆ ಇಂತಹ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡು ಸ್ವಉದ್ಯೋಗವನ್ನು ಮಾಡಬೇಕು. ಅಂದಾಗ ಮಾತ್ರ ನೀರುದ್ಯೋಗ ಸಮಸ್ಯೆ ಹೋಲಾಡಿಸಲು ಸಾಧ್ಯ ಎಂದರು.
    ಸಿಡಾಕ್ ಜಂಟಿ ನಿರ್ದೇಶಕ ಆರ್.ಪಿ.ಪಾಟೀಲ ಮಾತನಾಡಿ, ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಸರ್ಕಾರಿ ಉದ್ಯೋಗಗಳಲ್ಲದೆ ಖಾಸಗಿ ವಲಯದಲ್ಲಿ ಸ್ವಂತ ಉದ್ಯಮವನ್ನು ಮಾಡಿ ತಮ್ಮ ಜೀವನ ರೂಪಿಸಿಕೊಳ್ಳಬೇಕು. ಇತರರಿಗೂ ಉದ್ಯೋಗ ಸೃಷ್ಟಿಸಬೇಕು ಎಂದು ಸಲಹೆ ನೀಡಿದರು.
    ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹಾಗೂ ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲ ಡಿ.ಟಿ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಕಾರ್ಯಕ್ರಮದಲ್ಲಿ ಉದ್ಯೋಗಕೋಶ ಸಂಯೋಜಕ ಮಾಂತೇಶ ನಾಗಾಲಾಪೂರ, ಸಂಪನ್ಮೂಲ ವ್ಯಕ್ತಿಗಳಾದ ಮುಕುಂದಪ್ಪ ಬಿ., ಬಾಬು ಪಾಟೀಲ, ಶಿವಾನಂದ ತಳವಾರ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts