More

    ಎಲ್ಲೆಡೆ ಕನ್ನಡದ ಕಿಚ್ಚು ಹೆಚ್ಚಿಸಬೇಕಿದೆ… 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

    ಹಾವೇರಿ: ಏಲಕ್ಕಿ ನಾಡು ಹಾವೇರಿಯಲ್ಲಿ ಆಯೋಜನೆಗೊಂಡಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು (ಜ.6) ಚಾಲನೆ ನೀಡಿದರು. ಇಂದಿನಿಂದ ಮೂರು ದಿನಗಳ ಕಾಲ ಹಾವೇರಿ ಹೊರವಲಯದ ಹುಬ್ಬಳ್ಳಿ ರಸ್ತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

    ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಹಾವೇರಿಯಲ್ಲಿ ಸಮ್ಮೇಳನ ಆಗುತ್ತಿರುವುದು ಅತ್ಯಂತ ಔಚಿತ್ಯಪೂರ್ಣ. ಕನ್ನಡ, ಇಡೀ ಜಗತ್ತಿನಲ್ಲಿ ಅತ್ಯಂತ ಪ್ರಾಚೀನವಾದ ಭಾಷೆ. ಕನ್ನಡಿಗರ ಬದುಕು ಬಹಳ ಪುರಾತನ ಮತ್ತು ಶ್ರೇಷ್ಠವಾಗಿದೆ. ದೊಡ್ಡ ಚರಿತ್ರೆ ಇರುವ ಸಂಸ್ಕೃತಿ ಅಂದ್ರೆ ಅದು ಕನ್ನಡದ ಸಂಸ್ಕೃತಿ. ಕನ್ನಡದ ಸಂಸ್ಕೃತಿಯಲ್ಲಿ ಸಾಹಿತ್ಯದ ಪಾತ್ರ ದೊಡ್ಡದಿದೆ. ಕನ್ನಡದ ಸಂಸ್ಕೃತಿ‌ ಉಳಿಸಿಕೊಂಡು ಹೋಗುವ ಜವಾಬ್ದಾರಿ ಸಮ್ಮೇಳನದ ಮೇಲಿದೆ. ಎಲ್ಲೆಡೆ ಕನ್ನಡದ ಕಿಚ್ಚು ಹೆಚ್ಚಿಸಬೇಕಿದೆ. ಕನ್ನಡವನ್ನು ಭಾರತ ದೇಶದಲ್ಲಿ ಆಳವಾಗಿ ಬಿತ್ತಬೇಕಿದೆ. ಈ ಎಲ್ಲ ನಿಟ್ಟಿನಲ್ಲಿ ಅಖಿಲ ಭಾರತ ಸಮ್ಮೇಳನ ನಡೆಯುತ್ತಿದೆ ಎಂದರು.

    ಸಮ್ಮೇಳನದ ಅಧ್ಯಕ್ಷರು ದೊಡ್ಡರಂಗೇಗೌಡರು. ಅವರ ಹೆಸರಿನಷ್ಟೇ ಅವರು ದೊಡ್ಡ ಸಾಹಿತಿಗಳು ಹಾಗೂ ಪರಿಪೂರ್ಣ ಸಾಹಿತಿಗಳು. ಜನಸಾಮಾನ್ಯರಿಗೆ ಸಾಮಾನ್ಯ ಭಾಷೆಯಲ್ಲಿ ಮಾರ್ಮಿಕವಾಗಿ ತಿಳಿಸಿದ್ದಾರೆ. ಅವರಲ್ಲಿ ಎರಡು ಹೆಸರು ಇದೆ. ಒಂದು ದೊಡ್ಡದು, ಮತ್ತೊಂದು ರಂಗೇಗೌಡ. ಎಲ್ಲ ರಂಗದಲ್ಲಿ ಖ್ಯಾತಿ ಪಡೆದವರು ದೊಡ್ಡ ಹೃದಯದ ದೊಡ್ಡರಂಗೇಗೌಡರು ಎಂದು ಸಮ್ಮೇಳಾನಾಧ್ಯಕ್ಷರನ್ನು ಹೊಗಳಿದರು.

    ಇದು ಯೋಗಾ ಯೋಗಾ ಸಮ್ಮೇಳನ. ನಮ್ಮವರೇ ಕಸಾಪ ಅಧ್ಯಕ್ಷರು ಆಗಿದ್ದಾರೆ. ಹೊಸ ಚಿಂತನೆಗಳ ಪ್ರಯತ್ನ ಮಾಡುತ್ತಿದ್ದಾರೆ. ಅಧ್ಯಕ್ಷರಾದ ಮಹೇಶ ಜೋಶಿ ಕನ್ನಡಕ್ಕೆ ಹೊಸ ಚೈತನ್ಯ ತುಂಬುತ್ತಿದ್ದಾರೆ ಎಂದು ಪ್ರಶಂಸಿಸಿದರು. ಕನ್ನಡಕ್ಕಾಗಿ ಕೆಲಸ ಮಾಡುವ ಸಮಯ ಇದು. ಭಾಷೆ, ಸಂಸ್ಕೃತಿ ಬೆಳೆಯಲು ನಡೆದು ಬಂದು ದಾರಿ ಸಿಂಹಾವಲೋಕನ ಮಾಡಿಕೊಳ್ಳಬೇಕು. ನಮ್ಮ ಪಾತ್ರ ಏನು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕನ್ನಡ ಅತ್ಯಂತ ಸಿರಿವಂತ ಭಾಷೆ. ಕನ್ನಡ ಭಾಷೆ ಯಾವುದರಲ್ಲಿಯೂ ಬಡವಾಗಿಲ್ಲ. ಸೂರ್ಯ-ಚಂದ್ರ ಇರೋವರೆಗೂ ಕನ್ನಡ ಬೆಳೆಯುತ್ತದೆ. ಕನ್ನಡಕ್ಕೆ ಆಪತ್ತು ಎನ್ನುವ ಭಾವನೆ ಅನೇಕರಲ್ಲಿದೆ. ಆದರೆ, ಕನ್ನಡಕ್ಕೆ ಆಪತ್ತು ತರುವ ಭಾವನೆ ಜಗತ್ತಿನಲ್ಲಿ ಹುಟ್ಟಿಲ್ಲ ಮತ್ತು ಹುಟ್ಟುವುದೂ ಇಲ್ಲ. ಆದ್ದರಿಂದ ಆ ಆತಂಕದಿಂದ ಎಲ್ಲರೂ ಹೊರಗೆ ಬರಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

    ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡವನ್ನು ಶ್ರೀಮಂತಗೊಳಿಸಿವೆ ಹಾಗೂ ಕನ್ನಡದ ಅಂತಃಸತ್ವ ಹೆಚ್ಚಿಸಿವೆ. ಕನ್ನಡದ ಭಾಷೆಯಲ್ಲಿ ವಿವಿಧತೆಯಲ್ಲಿ ಏಕತೆ ಇದೆ. ವಿವಿಧ ಆಯಾಮಗಳಲ್ಲಿಯೂ ಕನ್ನಡ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ. ಹರಿದು ಹೋದ ಹೃದಯಗಳನ್ನು ಒಂದಾಗಿಸಿದ್ದು ನಮ್ಮ ಕನ್ನಡ. ಏಕೀಕರಣದ ಬಳಿಕ ನಮ್ಮದೇಯಾದ ರಾಜ್ಯ ಜೋಡಣೆಯಾಗಿದೆ. ಕರ್ನಾಟಕ ಏಕೀಕರಣ ಹೋರಾಟ ನಿರಂತರವಾಗಿ ನಡೆದಿತ್ತು. ಮೊದಲು ಉತ್ತರ ಕರ್ನಾಟಕದವರು ಏಕೀಕರಣ ಹೋರಾಟ ಶುರು ಮಾಡಿದರು. ಸ್ವಲ್ಪ ತಡವಾದರೂ ಕುವೆಂಪು ಅಂಥವರೂ ಹೋರಾಟಕ್ಕೆ ಬಂದರು. ಆಗ ಕನ್ನಡ ನಾಡು ಒಂದಾಗಿದೆ. ಮೊದಲು ಮೈಸೂರು ರಾಜ್ಯ ಇತ್ತು. ದೇವರಾಜ್ ಅರಸರು ಕರ್ನಾಟಕ ಅಂತಾ ಮಾಡಿದರು. ಅವರನ್ನು ಇಂದು ನೆನಪಿಸಬೇಕಿದೆ. ಕನ್ನಡಿಗರಿಗೆ ಕರ್ನಾಟಕ ಮಾಡಿದವರು ದೇವರಾಜ್ ಅರಸರು ಎಂದರು.

    ಕಣ್ಣಿಗೊಂದು ಸವಾಲ್​: ತೀಕ್ಷ್ಣ ದೃಷ್ಟಿಯುಳ್ಳುವರು ಮಾತ್ರ ಝೀಬ್ರಾ ಹಿಂಡಿನ ಮಧ್ಯೆ ಇರುವ ಹುಲಿ ಪತ್ತೆಹಚ್ಚಬಲ್ಲರು!

    ಬರೋಬ್ಬರಿ 100 ಕೋಟಿ ರೂ. ವಂಚನೆ! ಖತರ್ನಾಕ್​ ದಂಪತಿಯ ಲಕ್ಷುರಿ ಜೀವನ ಕಂಡು ದಂಗಾದ ಪೊಲೀಸರು

    ವೇಲ್​ನಿಂದ ಕುತ್ತಿಗೆ ಬಿಗಿದು ಯುವತಿಯ ಮೃತದೇಹವನ್ನು ಡ್ರಮ್​ನೊಳಗೆ ತುಂಬಿಸಿದ ಹಂತಕರು! ಏನಿದು ಪ್ರಕರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts