More

    ಆಧುನಿಕ ಸಾಹಿತ್ಯ ರಚನೆಗೆ ಜಾನಪದ ಸಾಹಿತ್ಯ ಪ್ರೇರಣೆ; ಸತೀಶ ಕುಲಕರ್ಣಿ

    ಹಾವೇರಿ: ಜಾನಪದರು ಜಾಣರಾಗಿದ್ದು, ಜೀವನದ ಅನುಭವಗಳನ್ನು ಅನುಭವಿಸಿ ಕಾವ್ಯ, ಕಥೆ, ಗಾದೆಗಳು, ನಾಟಕ ರಚನೆ ಮಾಡಿದ್ದಾರೆ. ಆಧುನಿಕ ಸಾಹಿತ್ಯ ರಚನೆಗೆ ಇಂತಹ ಜಾನಪದ ಸಾಹಿತ್ಯ ಪ್ರೇರಣೆಯಾಗಿದೆ ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅಭಿಪ್ರಾಯ ಪಟ್ಟರು.
    ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಜಾನಪದ ವಿದ್ಯಾ ಕಲಿಕಾ ಸಂಸ್ಥೆ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಜಾನಪದ ಸಾಹಿತ್ಯ ಮತ್ತು ಆಧುನಿಕ ಸಂದರ್ಭ’ ವಿಷಯ ಕುರಿತ ವಿಚಾರ ಸಂಕಿರಣ ಹಾಗೂ ಜಾನಪದ ಗೀತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿರು.
    ಜಾನಪದ ಸಂಗ್ರಹದ ನಿಟ್ಟಿನಲ್ಲಿ ದಿ.ಎ.ಕೆ.ರಾಮಾನುಜಂ ಅವರಂಥವರು ಕನ್ನಡನಾಡಿನ ಕೆಲ ಭಾಗಗಳಲ್ಲಿ ಸಂಚರಿಸಿ ಜಾನಪದ ಸಾಹಿತ್ಯ ಸಂಗ್ರಹಿಸಿ ಕೃತಿ ರಚನೆಯ ಮೂಲಕ ಜಾನಪದ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಿದ್ದಾರೆ. ರಾಮಾನುಜಂ ಅವರು ಅಮೆರಿಕದಲ್ಲಿ ಸಂದರ್ಭದಲ್ಲೂ ಆಗಾಗ ರಾಜ್ಯಕ್ಕೆ ಭೇಟಿ ನೀಡಿ ಜಾನಪದ ಸಂಗ್ರಹದಲ್ಲಿ ಕನ್ನಡ ಜನಪದ ಕಥೆಗಳ ಕೆಲವು ಭಿನ್ನರೂಪಗಳನ್ನು ಸಂಗ್ರಹಿಸಿದ್ದಾರೆ.
    ಜಾನಪದ ಸಾಹಿತ್ಯ ಜನಜೀವನದೊಡನೆ ಅತ್ಯಂತ ಹತ್ತಿರದ ಸಂಬಂಧವನ್ನು ಹೊಂದಿದ್ದು, ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಜಾನಪದದ ಬಗ್ಗೆ ಬೋಧನೆಯಾಗಬೇಕು. ನಮ್ಮ ಜಾನಪದ ಕಲ್ಪನೆಯ ದಿಗಂತ ಹೇಗೆ ವಿಸ್ತಾರಗೊಳ್ಳಬೇಕು. ಯಾವ ವೈಜ್ಞಾನಿಕ ತಳಹದಿಯ ಮೇಲೆ ಮುಂದಿನ ಅಧ್ಯಯನ ರೂಪುಗೊಳ್ಳಬೇಕು ಎನ್ನುವುದರ ತಿಳಿವಳಿಕೆ ನೀಡಿದಾಗ ಜಾನಪದದ ಉಳಿವು ಸಾಧ್ಯ ಎಂದು ಹೇಳಿದರು.
    ಎಸ್.ಎ.ಎ. ಫೌಂಡೇಶನ್ ಅಧ್ಯಕ್ಷ ಮೌಲಾಸಾಬ ಜಿಗರಿ ಮಾತನಾಡಿ, ಜಾನಪದವು ನಮ್ಮ ಜನರ ಜೀವನಾಡಿಯಾಗಿದೆ. ನಮಗೆ ತಿಳಿಯದ ಇತಿಹಾಸದ ಕಾಲಗರ್ಭದಲ್ಲಿ ಅಡಗಿದ ಅನೇಕ ಸಂಗತಿಗಳನ್ನು ತಿಳಿಸಿಕೊಡುತ್ತದೆ ಎಂದರು.
    ಸಂಸ್ಥೆಯ ಅಧ್ಯಕ್ಷ ಎನ್.ಎನ್.ಗಾಳೆಮ್ಮನವರ ಅಧ್ಯಕ್ಷತೆ ವಹಿಸಿದ್ದರು. ಮಾಲತೇಶ ಅಂಗೂರ ಪ್ರಸ್ಥಾವಿಕವಾಗಿ ಮಾತನಾಡಿದರು.
    ಕಾರ್ಯಕ್ರಮದಲ್ಲಿ ದಲಿತ ಮುಖಂಡ ರಮೇಶ ಜಾಲಿಹಾಳ, ಹಿರಿಯ ಜಾನಪದ ಕಲಾವಿದೆ ಈರಮ್ಮ ಮುಶೆಪ್ಪನವರ, ಚಂದ್ರಪ್ಪ ಸನದಿ, ಹನುಮಂರ ಯಂಟಮಾನ, ಅಕ್ಷತಾ ಬದ್ರಶೆಟ್ಟಿ, ಮತ್ತಿತರು ಪಾಲ್ಗೊಂಡಿದ್ದರು.
    ಸುಗ್ಗಿ, ತತ್ವಪದ ಗಾಯನ :
    ಜಾನಪದ ಗೀತೋತ್ಸವ ಕಾರ್ಯಕ್ರಮದಲ್ಲಿ ಕಲಾವಿದರಾದ ಧರ್ಮಣ್ಣ ಕಿವುಡನವರ ಸಂಗಡಿಗರು ಗೊರವರ ತ್ವಪದಗಳನ್ನು, ಗೌರಮ್ಮ ಕುರುಬರ ಸಂಗಡಿಗರು ಜಾನಪದ ಸುಗ್ಗಿ ಪದಗಳನ್ನು, ಗುರುನಾಥ ಹುಬ್ಬಳ್ಳಿ ಹಾಗೂ ಸಂಗಡಿಗರು ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts