More

    ಜಿಲ್ಲೆಯ ಅಭಿವೃದ್ಧಿಗಾಗಿ ಡಾ.ಮಹೇಶ ನಾಲವಾಡ ಸಂಕಲ್ಪ; ಗಾಂಧಿ ಸ್ಮರಣೆಗಾಗಿ ಉಪವಾಸ

    ಹಾವೇರಿ: ಐತಿಹಾಸಿಕ ನಗರ ಹಾವೇರಿ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯಾಗಬೇಕು. ಯಾಲಕ್ಕಿ ಕಂಪು ಮತ್ತೆ ಸೂಸಬೇಕು. ಈ ನಿಟ್ಟಿನಲ್ಲಿ ವಿವಿಧ ಹೋರಾಟ, ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಉಪವಾಸ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಮಹೇಶ ನಾಲವಾಡ ಪ್ರತಿಷ್ಠಾನದ ಸಂಸ್ಥಾಪಕ, ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ.ಮಹೇಶ ನಾಲವಾಡ ಹೇಳಿದರು.
    ಇಲ್ಲಿನ ಎಂಜಿ ರಸ್ತೆಯ ಗಾಂಧಿ ಚೌಕದಲ್ಲಿ ಮಂಗಳವಾರ ಮಹಾತ್ಮ ಗಾಂಧಿಜಿ ಅವರ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಒಂದು ದಿನದ ‘ಉಪವಾಸ ಸಂಕಲ್ಪ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಐದು ನದಿಗಳು ಹರಿಯುವ ಜಿಲ್ಲೆ ಇದು. ಸಂಪತ್ಬರಿತ ಭೂಮಿ ಇದೆ. ಬ್ರಾಡಗೇಜ್ ಲೈನ್, ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. 453 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ದುರ್ದೈವ. ಇಲ್ಲಿನ ಸಂಪತ್ತು ಬಳಸಿಕೊಂಡು ಸಮಗ್ರ ಅಭಿವೃದ್ಧಿ ಹೊಂದುವಂತೆ ಮಾಡಬೇಕು ಎಂಬ ಸಂಕಲ್ಪ ಮಾಡಿದ್ದೇನೆ. ಅದಕ್ಕಾಗಿ ಗಾಂಧೀಜಿಯವರ ಉಪವಾಸ ಆಯುಧ ಬಳಸುತ್ತಿದ್ದೇನೆ ಎಂದರು.
    ಮಹಾತ್ಮ ಗಾಂಧಿಯವರ 76ನೇ ಪುಣ್ಯಸ್ಮರಣೆಯ ವರ್ಷ ಇದು. ಗಾಂಧೀಜಿ ನಮ್ಮ ದೇಶದ ಮಹಾನ್ ಕೊಡುಗೆ. ಹಲವು ರಾಷ್ಟ್ರಗಳು ಶಸ್ತ್ರ ಹಿಡಿದು ಸ್ವಾತಂತ್ರೃ ತಂದು ಕೊಟ್ಟಿದ್ದು ಇತಿಹಾಸ. ಅಹಿಂಸಾ ಮಾರ್ಗ ತೋರಿಸಿದ್ದು ಗಾಂಧೀಜಿ. 108 ದೇಶಗಳಲ್ಲಿ ಗಾಂಧಿ ಪ್ರತಿಮೆಗಳಿವೆ. ಅವರ ಮೇಲೆ 502 ಪುಸ್ತಕಗಳಿವೆ. ಜಗತ್ತಿನಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಹೊಂದಿರುವ ವ್ಯಕ್ತಿ ಗಾಂಧೀಜಿ. ಗಾಂಧಿ ಪ್ರತಿಮೆಗಳನ್ನು ರಾಷ್ಟ್ರೀಯ ಸ್ವಾರಕ ಎಂದು ಘೋಷಿಸಿ, ಸಂರಕ್ಷಿಸಬೇಕು ಎಂದರು.
    ಡಾ.ಸಂದೀಪ ಪಂಡಿತ, ನಗರಸಭೆ ಸದಸ್ಯರಾದ ಚನ್ನಮ್ಮ ಬ್ಯಾಡಗಿ, ಮಹಾಂತೇಶ ಗೌರಮ್ಮನವರ, ನಿರಂಜನ ಹೆರೂರ, ಬಸವರಾಜ ಬೆಳವಡಿ, ಗಿರೀಶ ತುಪ್ಪದ, ನಿಜಾರ್ ನದಾಫ್, ಜಗದೀಶ ಕನವಳ್ಳಿ, ಶಿವಯೋಗಿ ಹುಲಿಕಂತಿಮಠ, ಗುಳಗಣ್ಣ ಅರಳಿಕಟ್ಟಿ, ಸಂಗೂರ ಕರಿಯಪ್ಪನವರ ಕುಟುಂಬದವರು, ರೈತ ಸಂಘದ ಪದಾಧಿಕಾರಿಗಳು ಸಾಥ್ ನೀಡಿದರು.
    ಗಾಂಧಿ ಪ್ರತಿಮೆ ನಿರ್ಲಕ್ಷೃ
    ಗಾಂಧೀಜಿ ಎರಡು ಸಲ ಹಾವೇರಿ ಜಿಲ್ಲೆಗೆ ಬಂದು ಹೋಗಿದ್ದಾರೆ. ಜಿಲ್ಲೆಯ ಸುಮಾರು 10 ಸ್ವಾತಂತ್ರೃ ಹೋರಾಟಗಾರರು ಪ್ರಾಣತ್ಯಾಗ ಮಾಡಿದ್ದಾರೆ. ಗಾಂಧೀಜಿಯವರ ಚಿತಾಭಸ್ಮ ಸಂಗೂರಿನಲ್ಲಿದೆ. ಅದರ ಪರಿಸ್ಥಿತಿ ಕೇಳಿ ಬೇಸರವಾಗಿದೆ. ಜಿಲ್ಲೆಯಲ್ಲಿ ಹಾವೇರಿ ಗಾಂಧಿ ಚೌಕ ಹಾಗೂ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಇರುವ ಗಾಂಧೀ ಪ್ರತಿಮೆಗಳು ನಿರ್ಲಕ್ಷೃಕ್ಕೆ ಒಳಗಾಗಿವೆ. ಮುನ್ಸಿಪಲ್ ಶಾಲೆಯ ಗಾಂಧೀ ಪ್ರತಿಮೆ ಎದುರು ನಿತ್ಯ ಮದ್ಯಪಾನ ಮಾಡುತ್ತಿದ್ದಾರೆ. ಎರಡೂ ಪ್ರತಿಮೆಗಳಿಗೆ ಚಷ್ಮಾ ಹಾಕಲಾಗಿಲ್ಲ. ಕನಿಷ್ಠ ಸ್ವಚ್ಛತೆಯನ್ನೂ ನಗರಸಭೆಯವರು ಮಾಡಿಲ್ಲ. ಆ ಕೆಲಸವನ್ನು ನಾವು ಮಾಡಿದ್ದೇವೆ. ಚಷ್ಮಾ ತೊಡಿಸಿ ಅವರ ಸ್ಮರಣಾರ್ಥ ಭಜನೆ ಮತ್ತು ಸಂಕಲ್ಪದ ಉಪವಾಸ ಕೈಗೊಂಡಿದ್ದೇವೆ ಎಂದು ಡಾ.ಮಹೇಶ ನಾಲವಾಡ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts