More

    ನಮೂನೆ 12, ಎಪಿಕ್ ಕಾರ್ಡ್ ವಿತರಣೆಗೆ ಡಿಸಿ ಸೂಚನೆ

    ಹಾವೇರಿ: ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ಅಗತ್ಯ ಸೇವಾ ಮತದಾರರಿಗೆ ನಮೂನೆ 12ಡಿ ಹಾಗೂ ಅಂಚೆ ಮತದಾನ ಇತರ ಚುನಾವಣಾ ಕರ್ತವ್ಯ ನಿರತರಿಗೆ 12, 12ಎ ನಮೂನೆಗಳ ವಿತರಣೆ ಕಾರ್ಯವನ್ನು ಮೂರು ದಿನದೊಳಗಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚಿಸಿದ್ದಾರೆ.
    ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಸಭೆ ನಡೆಸಿದ ಅವರು, ಈಗಾಗಲೇ 70 ಸಾವಿರ ಎಪಿಕ್ ಕಾರ್ಡ್‌ಗಳು ಬಂದಿದ್ದು, ಈಗಾಗಲೇ ಅಂಚೆ ಮೂಲಕವೂ ರವಾನಿಸಲಾಗಿದೆ. ಅಲ್ಲದೆ ಬಿಎಲ್‌ಒಗಳ ಮೂಲಕ ವಿತರಣೆಗೆ ಕ್ರಮವಹಿಸಬೇಕು. ಹಾಗೂ ವೋಟರ್ ಸ್ಲಿಪ್‌ಗಳನ್ನು ವಿತರಿಸಲು ಯೋಜಿತ ಕಾರ್ಯಕ್ರಮ ರೂಪಿಸಿಕೊಳ್ಳುವಂತೆ ಸೂಚನೆ ನೀಡಿದರು.
    ಚುನಾವಣೆ ಸಭೆ-ಸಮಾರಂಭಗಳಿಗೆ ಮಾಹಿತಿ ನೀಡಲು ಎಲ್ಲ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏಕಗವಾಕ್ಷಿ ವ್ಯವಸ್ಥೆಯಡಿ ಅನುಮತಿ ನೀಡಬೇಕು. ಇದಕ್ಕಾಗಿ ಅಗತ್ಯ ಅಧಿಕಾರಿಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಕ್ರಮವಹಿಸಿ ಎಂದು ಸೂಚನೆ ನೀಡಿದರು.
    ಚೆಕ್‌ಪೋಸ್ಟ್ ಹಾಗೂ ಎಫ್.ಎಸ್.ಟಿ. ತಂಡಕ್ಕೆ ಹೆಚ್ಚುವರಿ ಸಿಬ್ಬಂದಿ ಅಗತ್ಯವಿದ್ದರೆ ಸಹಾಯಕ ಚುನಾವಣಾಧಿಕಾರಿಗಳ ಹಂತದಲ್ಲೇ ನಿಯೋಜಿಸಲು ಸೂಚನೆ ನೀಡಿದರು.
    ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಸಹಾಯಕ ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.
    ಎಲ್ಲೆಡೆ ತೀವ್ರ ನಿಗಾ:
    ಜಿಲ್ಲೆಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಆದರೆ ಕಡಿಮೆ ದೂರುಗಳು ದಾಖಲಾಗಿವೆ. ಚುನಾವಣಾ ನೀತಿಸಂಹಿತೆ ಉಲ್ಲಂಘನೆ, ಅಕ್ರಮಗಳ ಪತ್ತೆಗಾಗಿ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ತಹಶೀಲ್ದಾರರು, ಎಫ್.ಎಸ್.ಟಿ. ತಂಡ ಹಾಗೂ ಎಂ.ಸಿ.ಸಿ.ನೋಡಲ್ ಅಧಿಕಾರಿಗಳು ತೀವ್ರತರ ಕಾರ್ಯಾಚರಣೆ ಕೈಗೊಳ್ಳಬೇಕು. ತಮ್ಮ ವ್ಯಾಪ್ತಿಯಲ್ಲಿ ಹೆಚ್ಚು ಸುತ್ತಾಟ ನಡೆಸಬೇಕು. ಆಂತರಿಕ ಮಾಹಿತಿಯನ್ನು ಸಂಗ್ರಹಿಸಿ ಅಕ್ರಮಗಳ ತಡೆಗೆ ಕ್ರಮವಹಿಸುವಂತೆ ಡಿಸಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts