More

    ಧಾರ್ಮಿಕ ಆಚರಣೆಗಳಿಂದ ಬದುಕು ಸುಂದರ; ಹಾವೇರಿಯ ಶ್ರೀ ದಾನಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಹುಕ್ಕೇರಿ ಮಠದ ಶ್ರೀಗಳ ಹೇಳಿಕೆ

    ಹಾವೇರಿ: ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಧಾರ್ಮಿಕ ಕಾರ್ಯಗಳಿಂದ ವಿಮುಖವಾಗುತ್ತಿರುವ ಮಕ್ಕಳು ಮತ್ತು ಯುವ ಸಮುದಾಯವನ್ನು ಧಾರ್ಮಿಕ ಕಾರ್ಯಗಳಿಗೆ ತೊಡಗುವಂತೆ ಮಾಡುವ ಅಗತ್ಯವಿದೆ. ಧಾರ್ಮಿಕ ಆಚರಣೆಗಳಿಂದ ಬದುಕು ಸುಂದರವಾಗಲಿದೆ ಎಂಬುದನ್ನು ಅವರಿಗೆ ತಿಳಿಸಬೇಕಿದೆ ಎಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
    ಸೋಮವಾರ ಇಲ್ಲಿನ ಜಯದೇವ ನಗರದ ಶ್ರೀ ದಾನಮ್ಮದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಧರ್ಮದ ಹಾದಿಯಲ್ಲಿ ನಡೆದರೆ ಜೀವನ ಹಸನಾಗಲಿದೆ ಎಂದರು.
    ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, 12ನೇ ಶತಮಾನದ ಶರಣರು ಎಂದರೆ ಪರಿಪೂರ್ಣತೆಯ ಸಂಕೇತ. ಬಸವಣ್ಣನವರು ಸಮಸ್ತ ಶರಣ ಸಂಕುಲದ ಕೇಂದ್ರ ಬಿಂದು. ದಾನಮ್ಮನವರ ಮತ್ತು ಶರಣರ ಆಚಾರ ವಿಚಾರಗಳು ಆದರ್ಶ ಜೀವನಕ್ಕೆ ದಾರಿದೀಪವಾಗಿವೆ ಎಂದರು.
    ಹಾವೇರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ವಿಜಯಲಕ್ಷ್ಮೀ ಮಾತನಾಡಿ, ಅವಕಾಶ ಸಿಕ್ಕಾಗ ಸತ್ಕಾರ್ಯಗಳನ್ನು ಮಾಡಬೇಕು. ಜಾತ್ರೆ, ಹಬ್ಬ, ಹರಿದಿನಗಳು ನಮ್ಮ ಮೂಲ ಪರಂಪರೆಯಾಗಿದ್ದು, ಇಂದಿಗೂ ಅವುಗಳ ಆಚರಣೆ ಮಾಡುತ್ತಿರುವುದು ಅದರ ಮಹತ್ವವನ್ನು ತಿಳಿಸುತ್ತದೆ ಎಂದರು.
    ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಮಾತನಾಡಿ, ದಾನಮ್ಮ ಎಲ್ಲರೂ ಹೆಮ್ಮೆ ಪಡುವಂತಹ ಶರಣೆ ಆಗಿದ್ದು, ಅವರ ಜೀವನ ಆದರ್ಶಪ್ರಾಯವಾಗಿದೆ ಎಂದರು.
    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ದಂಪತಿಯನ್ನು ಸನ್ಮಾನಿಸಲಾಯಿತು. ದೇವಸ್ಥಾನ ಕಮೀಟಿ ಅಧ್ಯಕ್ಷೆ ಶೋಭಾತಾಯಿ ಮಾಗಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಇದ್ದರು. ಲಕ್ಕಣ್ಣ ಸಹೋದರಿಯರು ವಚನ ಪ್ರಾರ್ಥನೆ ಹಾಡಿದರು. ಮಲ್ಲಿಕಾರ್ಜುನ ಹಿಂಚಿಗೇರಿ ಕಾರ್ಯಕ್ರಮ ನಿರೂಪಿಸಿದರು.
    ಸಮಾರಂಭದಲ್ಲಿ ರಾಜಶೇಖರ ಮಾಗಾವಿ, ಶಿವಣ್ಣ ಕೋರಿಶೆಟ್ಟರ, ಮುರಿಗೆಪ್ಪ ಕಡೇಕೊಪ್ಪ, ಸಿ.ಜಿ.ತೋಟಣ್ಣನವರ, ಶಿವಯೋಗಪ್ಪ ಮುದ್ದಿ, ಚಂದ್ರಶೇಖರ ಹತ್ತಿ, ಸುರೇಶಬಾಬು ಯಳಮಲ್ಲಿ, ಸಂಜಯ ಮಾಗಾವಿ, ಶಿವಯೋಗೆಪ್ಪ ವಾಲಿಶೆಟ್ಟರ, ಗಂಗಣ್ಣ ಮಾಸೂರ, ಸಂದೀಪ ಮಾಗಾವಿ, ಶಿವಬಸಪ್ಪ ಮುದ್ದಿ, ಗುರಣ್ಣ ಸಿಮೀಕೆರೆ, ಮಲ್ಲಣ್ಣ ಸಾತೇನಹಳ್ಳಿ, ಮಾಹಾಂತಪ್ಪ ಹಲಗಣ್ಣವರ, ಶಿವಯೋಗಿ ಬೆನ್ನೂರ, ಬೆಳಗಾವೆಪ್ಪ ಬೆಳಗಾವಿ, ಶಿವಲಿಂಗಪ್ಪ ಕಲ್ಯಾಣಿ, ಚನ್ನಬಸವಣ್ಣ ರೊಡ್ಡನವರ, ಇಂದೂಧರ ಯರೇಸಿಮಿ, ಶಿವಯೋಗಿ ಅಂಗಡಿ, ನಾಗೇಂದ್ರಪ್ಪ ಮಂಡಕ್ಕಿ, ಮಾಲತೇಶ ಕರೆಮಣ್ಣವರ, ಗಿರಿಜಮ್ಮ ತಾಂಡೂರ, ಸುಂದರಕ್ಕ ತುಪ್ಪದ, ನೀಲವ್ವ ಯರೇಸಿಮಿ, ಗಂಗವ್ವ ನಂದಿವಾಡ, ವಿಜಯಲಕ್ಷ್ಮೀ ಮಾಸೂರ, ರಾಜೇಶ್ವರಿ ಯಳಮಲ್ಲಿ, ಇತರರಿದ್ದರು.
    ಕಾರ್ತಿಕೋತ್ಸವ, ಪಾಲಕಿ ಉತ್ಸವ
    ಮಂಗಳವಾರ ಸಂಜೆ ದಾನಮ್ಮದೇವಿಯ ಕಾರ್ತಿಕೋತ್ಸವ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಬುಧವಾರ ಬೆಳಗ್ಗೆ ದೇವಸ್ಥಾನದ ಆವರಣದಲ್ಲಿ ಹರಸೂರ ಬಣ್ಣದ ಮಠದ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ದಾನಮ್ಮ ದೇವಿಯ ಪಾಲಕಿ ಉತ್ಸವ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts