More

    ಬಡ್ಡಿ ವಸೂಲಿಗೆ ಪೀಡಿಸಿದರೆ ಕಾನೂನು ಕ್ರಮ; ಶೇ.16ಕ್ಕಿಂತ ಹೆಚ್ಚಿನ ಬಡ್ಡಿ ಆಕರಿಸುವಂತಿಲ್ಲ

    ಹಾವೇರಿ: ಲೇವಾದೇವಿಗಾರರು, ಗಿರವಿದಾರರು ಹಾಗೂ ಹಣಕಾಸು ಸಂಸ್ಥೆಗಳು ತಾವು ನೀಡಿದ ಭದ್ರತಾ ಸಾಲದ ಮೇಲೆ ಶೇ.14 ಹಾಗೂ ಭದ್ರತೆ ಇಲ್ಲದ ಸಾಲಕ್ಕೆ ಶೇ.16ಕ್ಕಿಂತ ಹೆಚ್ಚಿನ ಬಡ್ಡಿ ಆಕರಣೆ ಮಾಡುವಂತಿಲ್ಲ. ಸಾಲಗಾರರನ್ನು ಪೀಡಿಸಿ ಬಲವಂತವಾಗಿ ಹೆಚ್ಚಿನ ಬಡ್ಡಿ ವಸೂಲಿ ಮಾಡುವಂತಿಲ್ಲ. ಈ ಸೂಚನೆಗಳನ್ನು ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚೀಟಿ ನಿಧಿ ಉಪನಿಬಂಧಕರು ಹಾಗೂ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ತಿಳಿಸಿದೆ.
    ಈ ಕುರಿತು ಪತ್ರಿಕಾ ಪ್ರಕಟಣೆ ನೀಡುರುವ ಅವರು, ಹೆಚ್ಚಿನ ಬಡ್ಡಿ ಆಕರಣೆ, ದಿನದ, ವಾರದ, ತಿಂಗಳ ಬಡ್ಡಿ ವಿಧಿಸುವಿಕೆ, ಅಧಿಕೃತ ಪರವಾನಿಗೆ ಇಲ್ಲದೇ ಲೇವಾದೇವಿ ವ್ಯವಹಾರ ಮಾಡುತ್ತಿರುವುದು, ಲೇವಾದೇವಿಗಾರರಿಂದ ಶೋಷಣೆಗೆ ಒಳಗಾಗುವಿಕೆ ಇತ್ಯಾದಿ, ಚೀಟಿ ಗುಂಪು ರಚನೆಗೆ ಪರವಾನಿಗೆ ಪಡೆದುಕೊಳ್ಳದೆ ವ್ಯವಹಾರ ನಡೆಸುತ್ತಿರುವುದು ಸಾರ್ವಜನಿಕರಿಂದ ದೂರು ಸ್ವೀಕೃತವಾಗುತ್ತಿವೆ.
    ಜಿಲ್ಲೆಯಲ್ಲಿ ನೋಂದಣಿಯಾಗದ ಚೀಟಿ ಸಂಸ್ಥೆಗಳು ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಎಲ್ಲ ಚೀಟಿ ಸಂಸ್ಥೆಗಳು ಹೊಸ ಚೀಟಿ ಗುಂಪುಗಳ ವ್ಯವಹಾರ ಮಾಡುವ ಪೂರ್ವದಲ್ಲಿ ಚೀಟಿನಿಧಿ ಉಪನಿಬಂಧಕರು ಹಾಗೂ ಸಹಕಾರ ಸಂಘಗಳ ಉಪನಿಬಂಧಕರಿಂದ ಕಡ್ಡಾಯವಾಗಿ ಪಡೆಯಬೇಕು. ತಪ್ಪಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
    ಪರವಾನಿಗೆ ಪಡೆದುಕೊಂಡಿರುವುದನ್ನು ಖಚಿತಪಡಿಸಿಕೊಂಡು ಸಾರ್ವಜನಿಕರು ವ್ಯವಹಾರ ಮಾಡಬೇಕು. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಹಕಾರ ಸಂಘಗಳ ಉಪನಿಬಂಧಕರು, ಜಿಲ್ಲಾಡಳಿತ ಭವನ, ಹಾವೇರಿ ಇವರ ಗಮನಕ್ಕೆ ತರಬೇಕು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts