More

    ಬಿಎಂ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಗಮನ ಸೆಳೆದ ವಿಜ್ಞಾನ ವಸ್ತು ಪ್ರದರ್ಶನ

    ಹಾವೇರಿ: ತಾಲೂಕಿನ ದೇವಗಿರಿಯ ಬಿಎಂ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ವಿವಿಧ ಮಾದರಿಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.
    ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ನಾಗರಾಜ ಅವರು ಪ್ರದರ್ಶನಕ್ಕೆ ಚಾಲನೆ ನೀಡಿ ಮಕ್ಕಳ ಮಾದರಿಗಳನ್ನು ವೀಕ್ಷಿಸಿದರು. ಮಕ್ಕಳೊಂದಿಗೆ ಮಾದರಿ ಕುರಿತು ಚರ್ಚಿಸಿದರು.
    ಪ್ರದರ್ಶನದಲ್ಲಿ ಮಕ್ಕಳು ಅಣು ವಿದ್ಯುತ್ ಸ್ಥಾವರ, ಹನಿ ನೀರಾವರಿ ಪದ್ಧತಿ, ಸಾವಯವ ಗೊಬ್ಬರ ತಯಾರಿಕಾ ಘಟಕ, ಸೌರಶಕ್ತಿಯ ನಗರ, ಆರೋಗ್ಯ ಮತ್ತು ಸ್ವಚ್ಛತೆ, ಚಂದ್ರಯಾನ-3, ಪವನ ಶಕ್ತಿ, ಹೃದಯದ ಮಾದರಿ, ಸೇರಿದಂತೆ ಹತ್ತಾರು ಬಗೆಯ ಮಾದರಿಗಳು ವೀಕ್ಷಕರ ಬುದ್ದಿಮಟ್ಟಕ್ಕೆ ಸವಾಲು ಒಡ್ಡಿದವು.
    ಸಂಸ್ಥೆಯ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಪ್ರಾಂಶುಪಾಲ ಮ.ಗಣೇಶ, ನಿರ್ಣಾಯಕರಾದ ಕಾವ್ಯ ಶಿಂಧೆ, ಶಂಕರ ಕಾಟೇನಹಳ್ಳಿ, ಮತ್ತಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts