More

    ಬೈ-ಪಾಸ್ ರಸ್ತೆಯಿಲ್ಲದೆ ಸವಾರರಿಗೆ ತೊಂದರೆ

    ಹಟ್ಟಿಚಿನ್ನದಗಣಿ: ಹಟ್ಟಿ-ರಾಯಚೂರು ಸಂಪರ್ಕ ರಸ್ತೆಯಲ್ಲಿರುವ ಕಾಕಾನಗರ ಸೇತುವೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಬೈಪಾಸ್ ರಸ್ತೆಯಿಲ್ಲದೆ ವಾಹನ ಸವಾರರಿಗೆ, ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ.

    4.30 ಕೋಟಿ ರೂ.ವೆಚ್ಚದಲ್ಲಿ ಹಟ್ಟಿಚಿನ್ನದಗಣಿ ಕಂಪನಿಯ ಸಿಎಸ್‌ಆರ್ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ಮುಖಾಂತರ ಬೃಹತ್ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಹಟ್ಟಿಕ್ಯಾಂಪ್‌ನಿಂದ ಹಟ್ಟಿ ಪಟ್ಟಣವನ್ನು ಸಂಪರ್ಕಿಸುವ ಜನನಿಬಿಡ ಪ್ರದೇಶದಲ್ಲಿರುವ ಸೇತುವೆ ಮಾರ್ಗ ಬಂದ್ ಆಗಿರುವುದರಿಂದ ಸಾರ್ವಜನಿಕರು ಪರದಾಡುತ್ತಿದ್ದಾರೆ.

    25 ಲಕ್ಷ ರೂ. ವೆಚ್ಚದಲ್ಲಿ ಪ್ರತ್ಯೇಕ ಬೈಪಾಸ್ ರಸ್ತೆಯನ್ನು ಸೇತುವೆ ಕಾಮಗಾರಿ ನಡೆಯುವ ಪಕ್ಕದಲ್ಲಿ ನಿಯಮಾವಳಿಯಂತೆ ನಿರ್ಮಿಸಬೇಕಿತ್ತು. ಆದರೆ, ಲೋಕೋಪಯೋಗಿ ಇಲಾಖೆ ಬ್ರಿಡ್ಜ್ ಅನ್ನು ನೆಲಸಮಗೊಳಿಸಿದ್ದರಿಂದ ಉಳಿದ ತ್ಯಾಜ್ಯವನ್ನೇ ಸೇತುವೆ ಪಕ್ಕ ಸುರಿಯಲಾಗಿದೆ. ತ್ಯಾಜ್ಯದಿಂದ ಹಾಕಿರುವ ರಸ್ತೆ ಕುಸಿಯುತ್ತಿದೆ. ಅಲ್ಲದೆ, ಬೈಕ್ ಹೋಗಲು ಮಾತ್ರ ಅವಕಾಶ ಕಲ್ಪಿಸಿದ್ದು, ಆಟೋಗಳು, ಪಾದಚಾರಿಗಳು ಇದೆ ಮಾರ್ಗದಲ್ಲಿ ಸಂಚರಿಸಲು ಸಮಸ್ಯೆಯಾಗಿದೆ. ರಿಂದ ಶುಕ್ರವಾರ ಕುಸಿದ ಪರಿಣಾಮ ಕೆಲ ಬೈಕ್‌ಗಳು ಹಳ್ಳಕ್ಕುರುಳಿ ಸವಾರರಿಗೆ ಸಣ್ಣ ಗಾಯಗಳಾಗಿವೆ.

    ಸೇತುವೆ ಕಾಮಗಾರಿಯ ಎರಡೂ ಬದಿ ಲೈಟ್‌ಗಳನ್ನು ಅಳವಡಿಸಬೇಕು. ನೀರು ಹರಿಯಲು ಬೇರೆ ಮಾರ್ಗ ಕಲ್ಪಿಸಬೇಕು ಇಲ್ಲವಾದರೆ ಕಾಮಗಾರಿಗೆ ತಡೆಯೊಡ್ಡಲಾಗುವುದು ಎಂದು ನಿವಾಸಿಗಳಾದ ವಿನೋದ್, ಮಲ್ಲಿಕಾರ್ಜುನ್, ರಮೇಶ್, ಮುಸ್ತಫಾ ತಿಳಿಸಿದ್ದಾರೆ.

    4.30 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗುತ್ತಿದ್ದರೂ ಸರಿಯಾದ ಬೈಪಾಸ್ ರಸ್ತೆ ಕಲ್ಪಿಸದೆ ಪಿಡಬ್ಲ್ಯುಡಿ ಹಾಗೂ ಹಟ್ಟಿ ಪಪಂ ಆಡಳಿತ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡಿದೆ. ಕಳೆದ 15 ದಿನಗಳಲ್ಲಿ ಹಳ್ಳದಲ್ಲಿ ಐದಾರು ಜನ ಬಿದ್ದಿದ್ದು, ವಾಹನಗಳು ಕೂಡ ಉರುಳಿವೆ. ಬೇಜವಾಬ್ದಾರಿಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು.
    | ಯಲ್ಲಪ್ಪ, ಸ್ಥಳೀಯ ನಿವಾಸಿ, ಹಟ್ಟಿ

    ಸೇತುವೆ ನಿರ್ಮಾಣ ಕಾಮಗಾರಿ ವೇಳೆ ಬೈಪಾಸ್ ನಿರ್ಮಿಸದಿದ್ದರೆ ಅದಕ್ಕೆ ಮೀಸಲಿಟ್ಟ ಅನುದಾನ ಸರ್ಕಾರಕ್ಕೆ ವಾಪಸ್ ಆಗುತ್ತದೆ. ಸೇತುವೆ ಕಾಮಗಾರಿಯಲ್ಲಿ ಯಾವುದೆ ಅಕ್ರಮ ನಡೆದಿಲ್ಲ. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ನಿಗಾ ವಹಿಸಲಾಗುವುದು.
    | ಗೋಪಾಲರೆಡ್ಡಿ, ಎಇಇ ಪಿಡಬ್ಲ್ಯುಡಿ ಲಿಂಗಸುಗೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts