More

    ಸಾಮಾಜಿಕ ಜಾಲತಾಣ ಬಳಕೆಗೆ ಜಾಗೃತಿ ಅವಶ್ಯ

    ಹಟ್ಟಿಚಿನ್ನದಗಣಿ: ದುಶ್ಚಟದಷ್ಟೆ ಭಯಂಕರವಾಗಿರುವ ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಜಾಗರೂಕರಾಗಿರಬೇಕಿದ್ದು, ಅಪರಿಚಿತ ವ್ಯಕ್ತಿಯೊಂದಿಗೆ ಯಾವುದೇ ಮಾಹಿತಿ ಹಂಚಿಕೊಳ್ಳಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಎಚ್ಚರಿಸಿದರು. ಹಟ್ಟಿಚಿನ್ನದಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ಗೆಜ್ಜಲಗಟ್ಟಾ ಗ್ರಾಮದಲ್ಲಿ ಆಯೋಜಿಸಿದ್ದ ಯುವಕರ ಸಭೆ-ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಶುಕ್ರವಾರ ಮಾತನಾಡಿದರು.

    ಸಾಮಾಜಿ ಜಾಲತಾಣ ಗೀಳಿಗೆ ಬಿದ್ದ ಯುವಕರು ದೈಹಿಕ-ಮಾನಸಿಕ ಸ್ವಸ್ಥತೆಯನ್ನು ಕಳೆದುಕೊಂಡು ವಿಕಾರವಾಗಿ ವರ್ತಿಸುತ್ತಾರೆ. ಅಲ್ಲದೆ ಸಮಾಜದಲ್ಲಿ ಅಪಕೃತ್ಯಗಳಲ್ಲಿ ತೊಡಗಿರುವುದು, ವೈಯಕ್ತಿಕವಾಗಿ ಭವಿಷ್ಯ ಹಾಳಾಗವುದರ ಜತೆಗೆ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ದುಷ್ಟ ಶಕ್ತಿಗಳಿಂದ ದೂರವಿರಬೇಕು. ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ಉನ್ನತ ಹುದ್ದೆ ಪಡೆದು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೇಕೆಂದು ಯುವ ಜನತೆಗೆ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts