More

    ಬಿಎಸ್​ವೈ ಆ್ಯಕ್ಟೀವ್​ಗೆ ಹ್ಯಾಟ್ಸಾಫ್ ಎಂದ ಸಚಿವ

    ಬೆಂಗಳೂರು: ಕೋವಿಡ್-19 ಸವಾಲನ್ನು ಕರ್ನಾಟಕ ಸರ್ಕಾರ ಎದುರಿಸುತ್ತಿರುವ ರೀತಿ ಇಡೀ ರಾಷ್ಟ್ರದ ಗಮನ ಸೆಳೆದಿದೆ. ಸಂಕಷ್ಟದ ಪರಿಸ್ಥಿತಿಯಲ್ಲೂ ಇಲ್ಲಿ ಪರಿಹಾರ ಕಾರ್ಯಗಳು ಭರದಿಂದ‌ ಸಾಗಿವೆ. ಕರೊನಾ ಸೋಂಕಿನಲ್ಲಿ ದೇಶಕ್ಕೆ 3ನೇ ಸ್ಥಾನದಲ್ಲಿದ್ದ ಕರ್ನಾಟಕವೀಗ 13ಕ್ಕೆ ಇಳಿದಿದೆ. ಕರೊನಾ ಮಣಿಸುವ ಹೋರಾಟದಲ್ಲಿ ಖುದ್ದು ಸಿಎಂ ಬಿ.ಎಸ್.​ ಯಡಿಯೂರಪ್ಪ ಅವರೇ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ವಯಸ್ಸನ್ನೂ ಲೆಕ್ಕಿಸದೆ ಆರೋಗ್ಯ ತುರ್ತು ಪರಿಸ್ಥಿತಿ ನಿಭಾಯಿಸುತ್ತಿರುವ ಇವರ ಕಾರ್ಯವೈಖರಿಗೆ ಸಚಿವ ಸುರೇಶ್​ ಕುಮಾರ್​ ಹ್ಯಾಟ್ಸಾಫ್ ಹೇಳಿದ್ದಾರೆ. ಸಿಎಂ ಆ್ಯಕ್ಟೀವ್​ ಗುಟ್ಟೇನು? ಎಂದು ಸ್ವತಃ ಬಿಎಸ್​ವೈ ಅವರನ್ನೇ ಕೇಳಿ ಉತ್ತರ ಪಡೆದಿದ್ದಾರೆ.

    ಇದನ್ನೂ ಓದಿರಿ ತಬ್ಲಿಘಿಗಳಿಂದ ಹಿಂದು ಯುವಕ ಮತಾಂತರ

    ಎಂದೂ ಕೇಳರಿಯದ ಸಾಮಾಜಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ನಾವೀಗ ಇದ್ದೇವೆ. ಇಂತಹ ಸಂದರ್ಭದಲ್ಲಿ ಸಂಪನ್ಮೂಲಗಳ ಸದ್ಬಳಕೆಗೆ ನಿರ್ದೇಶನ ನೀಡುತ್ತ, ರಾಷ್ಟ್ರದಲ್ಲೇ ಮೊದಲಾಗಿ ದುರ್ಬಲ‌ ವರ್ಗದ ಹಿತಕಾಯುವ ಸಾವಿರಾರು ಕೋಟಿ ರೂ. ಮೌಲ್ಯದ ವಿಶೇಷ ಪ್ಯಾಕೇಜ್​ಗೆ ಚಾಲನೆ ನೀಡಿ, ತಮ್ಮ ಬಳಿ ಬಂದವರ ಮಾತುಗಳನ್ನು ಸಹನೆಯಿಂದ ಆಲಿಸುತ್ತ, ಇಡೀ ಆಡಳಿತ ವ್ಯವಸ್ಥೆಯ ಸ್ಫೂರ್ತಿಸೆಲೆಯಾಗಿದ್ದಾರೆ ಬಿಎಸ್​ವೈ. ವಯಸ್ಸನ್ನೂ ಲೆಕ್ಕಿಸದೆ ರಾಜ್ಯದ ಅಭಿವೃದ್ಧಿಗೆ ಹೊಸದಿಶೆ ಕಲ್ಪಿಸಿದ್ದಾರೆ.

    ಮುಖ್ಯಮಂತ್ರಿಗಳ ಗೃಹ ಕಚೇರಿ‌ ಕೃಷ್ಣಾ ಮಹತ್ವದ ಸಭೆಗಳ ಅಧಿಕೇಂದ್ರವಾಗಿ ಪರಿವರ್ತನೆಯಾಗಿದೆ. ಜನಪ್ರತಿನಿಧಿಗಳು ಅಲ್ಲಿಗೇ ಬಂದು ಸಲಹೆ ನೀಡುತ್ತಿದ್ದಾರೆ. ಉದ್ಯಮಿಗಳು ತಮ್ಮ ಯೋಜನೆಗಳನ್ನು ಮಂಡಿಸುತ್ತಿದ್ದಾರೆ. ಅಧಿಕಾರಿಗಳು ಸಭೆ ನಡೆಸಿ ಯೋಜನೆ ರೂಪಿಸಲು ನಿರ್ದೇಶನ ನಿರೀಕ್ಷಿಸುತ್ತಿದ್ದಾರೆ. ಹಲವು ಸಭೆಗಳಲ್ಲಿ ಸಿಎಂ ಜತೆಯಲ್ಲೇ ಇರುವ ಸಚಿವ ಸುರೇಶ್‌ ಕುಮಾರ್ ಅವರಿಗೂ ಬಿಎಸ್​ವೈ ಕ್ರಿಯಾಶೀಲತೆ ಕುತೂಹಲ ಮೂಡಿಸಿತ್ತು.

    ಇದನ್ನೂ ಓದಿರಿ ಹೆಚ್ಚುತ್ತಲೇ ಇದೆ ಕರೊನಾ ವೈರಸ್​ ಅಬ್ಬರ; 24 ಗಂಟೆಯಲ್ಲಿ ಸಾವನ್ನಪ್ಪಿದ್ದು 95 ಮಂದಿ, ಮಹಾರಾಷ್ಟ್ರದ್ದೇ ಮೇಲುಗೈ…

    ಆ ಬಗ್ಗೆ ಗುರುವಾರ ನಡೆದ ಸಭೆಯಲ್ಲೇ, ‘ಸಾರ್ ಹೇಗೆ ಸಾಧ್ಯ ಇದೆಲ್ಲ?’ ಎಂದು ಯಡಿಯೂರಪ್ಪರನ್ನೇ ಸುರೇಶ್​ ಕುಮಾರ್​ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ‘ಇಲ್ಲ ಸುರೇಶ್ ಕುಮಾರ್, ‌ಇದೊಂದು (ಕರೊನಾ) ಸವಾಲು. ಇದನ್ನು ಎದುರಿಸಲೇಬೇಕೆಂದು ಮೊದಲ ದಿನವೇ ತೀರ್ಮಾನಿಸಿದ್ದೆ. ರಾಜ್ಯದ ಜನರ ಹಿತಕ್ಕಾಗಿ ಸವಾಲು ಎದುರಿಸಲೇಬೇಕಲ್ಲವೆ?’ ಎಂದಿದ್ದಾರೆ.
    ಈ ಬಗ್ಗೆ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರದುಕೊಂಡಿರುವ ಸುರೇಶ್ ಕುಮಾರ್, ಯಡಿಯೂರಪ್ಪರ ನೇತೃತ್ವ, ಕಾರ್ಯಶೈಲಿ ನಮ್ಮ ರಾಜ್ಯವನ್ನು ಬಹುತೇಕ ರಾಜ್ಯಗಳಿಗೆ ಹೋಲಿಸಿದರೆ ಸಮಾಧಾನಕರ ಸ್ಥಿತಿಯಲ್ಲಿಡುವಂತೆ ಮಾಡಿದೆ ಎಂದು ಅಭಿನಂದಿಸಿದ್ದಾರೆ.

    ಇದನ್ನೂ ಓದಿರಿ ಕಿಲ್ಲರ್​ ಕರೊನಾಗೆ ರಾಮಬಾಣವಾಯ್ತಾ ಪಾಚಿ ಕಡಲೆ ಮಿಠಾಯಿ…?

    ಕೆಳಗೆ ಪೋಸ್ಟ್ ಮಾಡಿರುವ ಎರಡು ಫೋಟೋಗಳು ಎರಡು ಬೇರೆ ಸಂದರ್ಭಕ್ಕೆ ಸಂಬಂಧಿಸಿದ್ದು. ಆದರೆ ಎರಡೂ ನಮ್ಮ‌ ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ್ದು. …

    Suresh Kumar S ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಮೇ 8, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts