More

    ನಿಮ್ಮ ಕಣ್ಣಿಗೊಂದು ಸವಾಲ್: ಈ ಚಿತ್ರದಲ್ಲಿರೋ ಹಲ್ಲಿಯನ್ನು ಗುರುತಿಸಿದ್ರೆ ನಿಮಗೆ ಹ್ಯಾಟ್ಸ್ಆಫ್​!

    ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್:​ ಚಿತ್ರದಲ್ಲಿರೋ ಭಾರಿ ಗಾತ್ರದ ಹೆಬ್ಬಾವು ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್!

    ಹೌದು, ಹರ್ಪೆಟೊಲೊಜಿಸ್ಟ್​ ಆಗಿರುವ ಎರಿನ್ ಮೆಕ್‌ಗೀ ಕೆಲ ವರ್ಷಗಳ ಹಿಂದೆ “ಫೈಂಡ್​ ದಿ ಲಿಜಾರ್ಡ್​” (ಹಲ್ಲಿಯನ್ನು ಗುರುತಿಸಿ) ಪಜಲ್​ ಹೊರತರುವ ಮೂಲಕ ತನ್ನ ಟ್ವಿಟರ್​ ಫಾಲೋವರ್ಸ್​ಗಳಿಗೆ ಹೊಸ ಬಗೆಯ ಅನುಭವವನ್ನು ನೀಡಿದ್ದರು. ಪ್ರತಿವಾರ ಮೆಕ್‌ಗೀ ಅವರು ಲಿಜಾರ್ಡ್​ ಗುರುತಿಸುವ ಸಂಬಂಧ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

    ಕೆಲವು ಚಿತ್ರಗಳಲ್ಲಿರುವ ವಸ್ತು ಅಥವಾ ಪ್ರಾಣಿಗಳನ್ನು ಕೆಲವೊಮ್ಮೆ ಸುಲಭವಾಗಿ ಗುರುತಿಸಬಹುದು. ಇನ್ನು ಕೆಲವೊಮ್ಮೆ ಗುರುತಿಸಲು ಪರದಾಡಿ ತಲೆ ಕೆರೆದುಕೊಳ್ಳುವ ಪರಿಸ್ಥಿತಿಯು ಎದುರಾಗಬಹುದು. ಆದರೂ ಪಜಲ್​ ಮಾತ್ರ ಒಳ್ಳೆಯ ಟೈಂಪಾಸ್​ ಗೇಮ್​ ಎನ್ನುವುದರಲ್ಲಿ ಸಂಶಯವೇ ಇಲ್ಲ.

    ಎಂದಿನಂತೆ ಮೆಕ್‌ಗೀ ಅವರು ಈ ಬಾರಿಯು ಒಂದು ಚಿತ್ರವನ್ನು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ನೆಟ್ಟಿಗರ ತಲೆಗೆ ಹುಳ ಬಿಟ್ಟಿದೆ. ಕಂದು ಬಣ್ಣದಿಂದ ಕೂಡಿರುವ ಭೂದೃಶ್ಯದಲ್ಲಿ ತುಂಬಾ ಜಾಣ್ಮೆಯಿಂದ ಅಡಗಿ ಕುಳಿತಿರುವ ಹಲ್ಲಿಯನ್ನು ಗುರುತಿಸುವಿರಾ ನೋಡಿ ಎಂದು ಮೆಕ್​ಗೀ ಟ್ವೀಟ್​ ಮೂಲಕ ಸವಾಲು ಎಸೆದಿದ್ದಾರೆ.

    ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್​: ಈ ಚಿತ್ರಗಳಲ್ಲಿರುವ ಪ್ರಾಣಿಗಳನ್ನು ಗುರುತಿಸಿದ್ರೆ ನಿಮಗೆ ಫುಲ್​ ಮಾರ್ಕ್ಸ್​!

    ಫೋಟೋ ಪೋಸ್ಟ್​ ಮಾಡಿದಾಗಿನಿಂದ ವೈರಲ್​ ಆಗಿದ್ದು, ಈಗಾಗಲೇ 1300 ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಿಟ್ಟಿಸಿಕೊಂಡಿದೆ. ಫೋಟೋ ಕುರಿತು ಸಾಕಷ್ಟು ಫನ್ನಿ ಕಮೆಂಟ್​ಗಳು ಹರಿದುಬಂದಿದ್ದು, ಅದನ್ನೂ ನೀವಿಲ್ಲಿ ಕಾಣಬಹುದಾಗಿದೆ. ಚಿತ್ರ ನೋಡಿ ನಿಮಗೆ ಏನು ಅನಿಸುತ್ತದೆಯೋ ಅದನ್ನು ಸಹ ಕಾಮೆಂಟ್​ ಮೂಲಕ ಹಂಚಿಕೊಳ್ಳಬಹುದು. (ಏಜೆನ್ಸೀಸ್​)

    ನಿಮ್ಮ ಕಣ್ಣಿಗೊಂದು ಸವಾಲ್: ಈ ಚಿತ್ರದಲ್ಲಿ ಅಡಗಿ ಕುಳಿತಿರೋ ಬೆಕ್ಕನ್ನು ಗುರುತಿಸಿದ್ರೆ ನೀವೇ ಗ್ರೇಟ್​!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts