More

    ಸಂಸ್ಕಾರಯುತ ವಿದ್ಯೆಯಿಂದ ಸಿಗಲಿದೆ ಗೌರವ

    ಹಾಸನ: ಸಂಸ್ಕಾರಯುತ ವಿದ್ಯೆಯು ವ್ಯಕ್ತಿಯೊಬ್ಬ ಗೌರವದಿಂದ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
    ನಗರದ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಜ್ಞಾನ ವಿಷಯದ ಪ್ರಾಯೋಗಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡದೆ ವಿದ್ಯಾಭ್ಯಾಸದ ಕಡೆಗೆ ಶ್ರದ್ಧೆ ಹಾಗೂ ಆಸಕ್ತಿ ತೋರಿಸಬೇಕು. ಹಾಗಾದರೆ ಮಾತ್ರ ಬದುಕಿನಲ್ಲಿ ಉನ್ನತ ಗುರಿಯೆಡೆಗೆ ಸಾಗಲು ಸಾಧ್ಯವಾಗುತ್ತದೆ. ಪವಿತ್ರ ಮನೋಭಾವನೆಯಿಂದ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಮನಸ್ಸಿನಲ್ಲಿರುವ ಕೆಟ್ಟ ವಿಷಯಗಳನ್ನು ಹೊರ ಹಾಕಿದರೆ ಒಳಿತು ತುಂಬಿಕೊಳ್ಳಲು ನೆರ ವಾಗುತ್ತದೆ ಎಂದರು.
    ಹೊಸ ವಿಷಯಗಳ ಕಲಿಕೆಗೆ ವಿದ್ಯಾರ್ಥಿಗಳು ಉತ್ಸುಕರಾಗಿರಬೇಕು. ಕಲಿಸುವವರಿಗೆ ಇರುವ ಶ್ರದ್ಧೆ ಕಲಿಯುವವರಿಗೆ ಇದ್ದರೆ ಮಾತ್ರ ಸಾರ್ಥಕ ಎನಿಸಿಕೊಳ್ಳುತ್ತದೆ. ನಮ್ಮ ಜ್ಞಾನ ಗ್ರಂಥಾಲಯಕ್ಕೆ ಸದಾ ಹೊಸ ವಿಷಯಗಳನ್ನು ತುಂಬುವ ಕೆಲಸ ಆಗಬೇಕು. ಆಗ ಮಾತ್ರ ಪರಿಪೂರ್ಣ ಮನುಷ್ಯ ಎನಿಸಿಕೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
    ಅಕ್ಷರ ದಾಸೋಹ ಯೋಜನೆಯ ಹೊಳೆನರಸೀಪುರ ತಾಲೂಕಿನ ಸಹಾಯಕ ನಿರ್ದೇಶಕ ಹರೀಶ್ ಮಾತನಾಡಿ, ಯಾವುದೇ ಕೆಲಸದಲ್ಲಿ ಒಂದೆರಡು ಬಾರಿ ವಿಫಲರಾದರೆ ನಿರಾಶೆ ಆಗಬೇಕಿಲ್ಲ. ಸತತ ಪರಿಶ್ರಮದಿಂದ ಮುಂದೆ ಸಾಧನೆ ಸಾಧ್ಯವಿದೆ ಎಂದು ತಿಳಿಸಿದರು.
    ಆದಿಚುಂಚನಗಿರಿ ಪಿಯು ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್, ಮಠದ ವ್ಯವಸ್ಥಾಪಕ ಚಂದ್ರಶೇಖರ್, ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಿಕ್ರಮ್ ದೇವ್ ಪ್ರಭು, ನಿವೃತ್ತ ಉಪಪ್ರಾಂಶುಪಾಲ ಪಾರ್ಥಸಾರಥಿ, ಶಿಕ್ಷಕ ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts