More

    ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿ

    ಹಾಸನ: ವೈದ್ಯರು ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಒತ್ತಡ ನಿವಾರಣೆ ಜತೆಗೆ, ಸಕಾರಾತ್ಮಕ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ.ಕೆ.ಬಿ.ಲಿಂಗೇಗೌಡ ಹೇಳಿದರು.
    ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ 28ನೇ ವಾರ್ಷಿಕೋತ್ಸವ ‘ಎಸ್.ಡಿ.ಎಂ. ಪರ್ವ’ ಉದ್ಘಾಟಿಸಿ ಮಾತನಾಡಿದರು.
    ವೈದ್ಯ ವಿಜ್ಞಾನ ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಿಂದಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕಾಲೇಜುಗಳ ವಾರ್ಷಿಕೋತ್ಸವಗಳು ಸಹಕಾರಿಯಾಗಿವೆ ಎಂದರು.
    ಭಾರತೀಯ ವೈದ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ವೇದ್ ಪ್ರಕಾಶ್‌ತ್ಯಾಗಿ ಮಾತನಾಡಿ, ಆಯುರ್ವೇದ ಶಿಕ್ಷಣ, ಸಂಶೋಧನೆ, ಚಿಕಿತ್ಸೆ ಪ್ರಸಾರ ಕಾರ್ಯದಲ್ಲಿ ಮಹತ್ವದ ಪಾತ್ರವನ್ನು ಸಂಸ್ಥೆ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ನಿವೃತ್ತ ಐಎಎಸ್ ಅಧಿಕಾರಿ ಅಜಿತ್‌ಮೋಹನ್ ಶರಣ್, ಭಾರತೀಯ ವೈದ್ಯ ಪರಿಷತ್ತಿನ ಸದಸ್ಯ ಡಾ.ಸಂಜೀವ್ ಗೋಯಲ್, ಆಯುರ್ವೇದ ತಜ್ಞ ಡಾ.ರಮೇಶ್ ದೇಶಮುಖ್, ಪ್ರಾಧ್ಯಾಪಕ ಡಾ.ಮುಖೇಶ್ ಶರ್ಮಾ, ತಜ್ಞ ವೈದ್ಯ ಡಾ.ನಾರಾಯಣ್ ನಂಬೂದರಿ ಭಾಗವಹಿಸಿದ್ದರು.
    2019ನೇ ಸಾಲಿನಲ್ಲಿ ಅತ್ಯುತ್ತಮ ಸೇವೆಗೈದ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಕೆ.ಜೆ. ಗಿರೀಶ್ (ಶ್ರೇಷ್ಠ ವೈದ್ಯ) , ಡಾ.ಅಜಂತಾ, (ಶ್ರೇಷ್ಠ ಶಿಕ್ಷಕ), ಡಾ.ನಾರಾಯಣ್ ನಂಬೂದರಿ ಅಶ್ವಿನಿ ಪ್ರಶಸ್ತಿ, ಅರುಣೋದಯ ಕದಮ್ಮನವರ್, ಎಚ್.ಜಿ. ಜ್ಞಾನೇಶ್ ಹಾಗೂ ಅಂಕಿತಾ ಅವರಿಗೆ ಎಸ್.ಡಿ.ಎಂ. ಪರಿಚಾರಕ ಪ್ರಶಸ್ತಿ ಹಾಗೂ ಎಚ್.ಕೆ. ಕೃಷ್ಣಮೂರ್ತಿ ಅವರಿಗೆ ಎಸ್.ಡಿ.ಎಂ. ಕಾರ್ಯಪಟು ಪ್ರಶಸ್ತಿ ನೀಡಲಾಯಿತು.
    ವಿದ್ಯಾರ್ಥಿಗಳಾದ ಡಾ.ಅರ್ಪಿತಾ ವಾರಿಯರ್(ಎಸ್.ಡಿ.ಎಂ. ಅಗ್ನಿವೇಷ), ಡಾ.ಮೇಧಾ ಭಟ್ (ಎಸ್.ಡಿ.ಎಂ. ಹೇಮಾವತಿ), ಡಾ.ಎ.ಎಂ.ನವೀನ್ (ಎಸ್.ಡಿ.ಎಂ. ಹರ್ಷ), ಡಾ.ಅನಿಮೇಶ್ ಮೋಹನ್ (ಎಸ್.ಡಿ.ಎಂ. ಅನ್ವೇಷಕ), ಜಿ.ಎಸ್.ಶ್ರದ್ಧಾ ಅವರಿಗೆ (ಎಸ್.ಡಿ.ಎಂ. ಸ್ನಾತಕ) ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಯುರ್ವೇದದ ಸಾರ, ಪೌರಾಣಿಕ ಪ್ರಸಂಗಗಳು, ದೇಶಭಕ್ತಿ ಹಾಗೂ ಜನಪದ ಸಂಸ್ಕೃತಿ ಬಿಂಬಿಸುವ ಪ್ರದರ್ಶನಗಳು ಕಣ್ಮನ ಸೆಳೆದವು. ಪ್ರಾಂಶುಪಾಲ ಡಾ.ಪ್ರಸನ್ನ ನರಸಿಂಹರಾವ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಡಾ.ಗುರುಬಸವರಾಜ್ ಯಲಗಚ್ಚಿನ ಕಾರ್ಯಕ್ರಮ ನಿರೂಪಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts