More

    ಕರೊನಾ ಹಿನ್ನಲೆ ಹಳೇಬೀಡಿನಲ್ಲಿ ಸರಳ ಕಾರ್ತಿಕ ಪೂಜೆ

    ಹಾಸನ (ಹಳೇಬೀಡು): ಅನಿವಾರ್ಯ ಕಾರಣದಿಂದ ರಥೋತ್ಸವ ಸಂಪ್ರದಾಯವನ್ನು ಸರಳವಾಗಿ ಆಚರಿಸಬೇಕಾದ ಪರಿಸ್ಥಿತಿ ಬಂದಿದೆ. ಆದರೂ ಪೂಜಾದಿಗಳನ್ನು ಸಾಂಗವಾಗಿ ನೆರವೇರಿಸಿರುವುದು ತೃಪ್ತಿ ತಂದಿದೆ. ಆಡಂಬರಕ್ಕಿಂತಲೂ ಸರಳತೆ ಹಾಗೂ ಸತ್ಯಕ್ಕೆ ಭಗವಂತ ಒಲಿಯುತ್ತಾನೆ ಎಂದು ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಇಲ್ಲಿನ ಐತಿಹಾಸಿಕ ಹೊಯ್ಸಳೇಶ್ವರ ದೇಗುಲದಲ್ಲಿ ಶನಿವಾರ ಜರುಗಿದ ಕಾರ್ತಿಕ ಮಾಸದ ಪೂಜಾ ಕಾರ್ಯದಲ್ಲಿ ಮಾತನಾಡುತ್ತಾ, ಇಂದು ವಾರ್ಷಿಕ‌ ರಥೋತ್ಸವ ನಡೆಯಬೇಕಿತ್ತು. ಕೋವಿಡ್ ನಿಯಮಗಳ ಪ್ರಕಾರ ಉತ್ಸವ ರದ್ದುಗೊಂಡಿರುವುದರಿಂದ ದೇಗುಲದಲ್ಲಿ ಸಾಂಪ್ರದಾಯಿಕ ಪೂಜಾದಿಗಳನ್ನು ಎಂದಿನಂತೆ ನಡೆಸಲಾಗಿದೆ. ಸರಳ ಕಾರ್ಯಕ್ರಮವಾದರೂ ಧಾರ್ಮಿಕ ಆಚರಣೆಗಳನ್ನು ಕೈಬಿಟ್ಟಿಲ್ಲ. ಅರ್ಚಕ‌ ವೃಂದ ಹಾಗೂ ಸಮಿತಿಯ ಪದಾಧಿಕಾರಿಗಳು ಅಭಿನಂದಾನಾರ್ಹರು ಎಂದು ಹೇಳಿದರು.

    ಮುಂಜಾನೆ ಹೊಯ್ಸಳೇಶ್ವರ ದೇವರಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನೆರವೇರಿದ ಬಳಿಕ‌ ವಿಪ್ರವೃಂದದಿಂದ ಉತ್ಸವಮೂರ್ತಿಗಳ ಪ್ರಾಕಾರೋತ್ಸವ ಜರುಗಿತು. ಬಳಿಕ ಮಹಾಮಂಗಳಾರತಿ ನೆರವೇರಿಸಲಾಯಿತು. ಶಾಸಕ ಕೆ.ಎಸ್. ಲಿಂಗೇಶ್, ತಾಪಂ‌ ಅಧ್ಯಕ್ಷೆ ಸುಮಾ ಪರಮೇಶ್, ಮುಖಂಡ ಡಿ.ಎ.ಸೋಮಶೇಖರ್, ದೇಗುಲ‌ ಸಮಿತಿ ಕಾರ್ಯದರ್ಶಿ ಎಂ.ಸಿ. ಕುಮಾರ್ ಮತ್ತಿತರರಿದ್ದರು. ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್, ಅರ್ಚಕ ಉದಯಕುಮಾರ್ ಪೂಜಾ ಕಾರ್ಯ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts