More

    ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: 200 ಕ್ವಿಂಟಾಲ್ ಜೋಳ ಸುಟ್ಟ ದುಷ್ಕರ್ಮಿಗಳು

    ಹಾಸನ (ಹಗರೆ): ಕಷ್ಟಪಟ್ಟು ಬೆಳೆದಿದ್ದ ಮುಸುಕಿನ ಜೋಳ ಅಪಾರ ಲಾಭ ತಂದುಕೊಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತನಿಗೆ ಆಘಾತ ಎದುರಾಗಿದ್ದು, ಅಂದಾಜು 200 ಕ್ವಿಂಟಾಲ್ ಜೋಳವನ್ನು ದುಷ್ಕರ್ಮಿಗಳು ಶನಿವಾರ ರಾತ್ರಿ ಸುಟ್ಟು ಹಾಕಿದ್ದಾರೆ.

    ಬೇಲೂರು ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಮಹದೇವಸ್ವಾಮಿ ಎಂಬ ರೈತನ ಜೋಳದ ರಾಶಿ ಬೆಂಕಿಗಾಹುತಿಯಾಗಿದ್ದು ಆತನ ರೋದನೆ ಮುಗಿಲು ಮುಟ್ಟಿದೆ. ಊರಿನಲ್ಲಿ ಯಾರಿಗೂ ಕೇಡು ಬಯಸದ ತಾನಾಯಿತು ತಮ್ಮ ಕೆಲಸವಾಯಿತು ಎಂಬಂತಿರುವ ರೈತನ ಬೆಳೆಯನ್ನು ಸುಟ್ಟು ಹಾಕಲು ಕಾರಣವೇನೆಂಬುದು ತಿಳಿದುಬಂದಿಲ್ಲ.

    ಎಂಟು ಎಕರೆಯಲ್ಲಿ ಸಮೃದ್ದವಾಗಿ ಬೆಳೆದ ಜೋಳವನ್ನ ಹೊಲದಲ್ಲೇ ಕಣ ಮಾಡಿ ರಾಶಿ ಹಾಕಿದ್ದರು. ಶನಿವಾರ ರಾತ್ರಿ ಎರಡು ಗಂಟೆ ಸಮಯದಲ್ಲಿ ಗ್ರಾಮದ ರೈತರೊಬ್ಬರು ಮಾರುಕಟ್ಟೆಗೆ ಹೊರಟಿದ್ದಾಗ ಬೆಂಕಿಯ ಜ್ವಾಲೆ ಕಂಡು ಇತರರನ್ನು ಎಬ್ಬಿಸಿದ್ದಾರೆ.

    ಗ್ರಾಮಸ್ಥರೊಂದಿಗೆ ತೆರಳಿ ಬೆಂಕಿ ನಂದಿಸುವ ಪ್ರಯತ್ನ ಮಾಡಲಾಯಿತಾದರೂ ಅಷ್ಟರಲ್ಲಿ ಎಲ್ಲವೂ ಸುಟ್ಟು ಕರಕಲಾಗಿತ್ತು. ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಪಟ್ಟರೂ ಪ್ರಯೋಜನವಾಗಲಿಲ್ಲ.

    ಜೋಳದ ರಾಶಿಯ ನಾಲ್ಕು ಮೂಲೆಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಟಾರ್ಪಲ್ ಸಮೇತ ನಾಲ್ಕು ಮೂಲೆಯಲ್ಲು ಒಂದೇ ಸಲ ಬೆಂಕಿ ಆವರಿಸಿದ್ದರಿಂದ ಜೋಳ ಸಂಪೂರ್ಣ ನಾಶವಾಗಿದೆ ಎಂದು ಮಹದೇವಸ್ವಾಮಿ ಮಗ ಚೇತನ್ ಅಳಲು ತೋಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts