More

    ಹುಳು ಬಾಧೆ ನಿಯಂತ್ರಣಕ್ಕೆ ಔಷಧ ಸಿಂಪಡಿಸಿ

    ಸಹಾಯಕ ಕೃಷಿ ನಿರ್ದೇಶಕ ರಾಜೇಶ್ ಸಲಹೆ

    ಅರಕಲಗೂಡು:ತಾಲೂಕಿನಲ್ಲಿ ಮುಸುಕಿನ ಜೋಳದ ಬೆಳೆಗೆ ಹುಳುಗಳ ಬಾಧೆ ಕಾಣಿಸಿಕೊಂಡಿದ್ದು, ನಿಯಂತ್ರಣಕ್ಕೆ ಔಷಧ ಸಿಂಪಡಣಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ರಾಜೇಶ್ ಸಲಹೆ ನೀಡಿದರು.
    ಮಗ್ಗೆ ಹೋಬಳಿಯಲ್ಲಿ ಬೆಳೆಗೆ ತಗುಲಿರುವ ಹುಳುಗಳನ್ನು ವೀಕ್ಷಿಸಿ ಮಾತನಾಡಿದ ಅವರು, ಪ್ರಸ್ತುತ ಮುಂಗಾರಿನಲ್ಲಿ ತಾಲೂಕಿನಲ್ಲಿ 10,060 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆಯಾಗಿದೆ. 60 ದಿನದ ಬೆಳೆಗಳಿಗೆ ಹೆಚ್ಚಿನ ರೀತಿಯಲ್ಲಿ ಹುಳು ಬಾಧೆ ಕಂಡುಬಂದಿದೆ ಎಂದರು.
    ಹುಳುವಿನ ಜೀವನ ಚಕ್ರ ನಾಲ್ಕು ಹಂತದಲ್ಲಿ ಮೊಟ್ಟೆಯೊಡೆದು ಮರಿಯಾಗಿ ಗಿಡಗಳಿಗೆ ಬಾಧಿಸಲಾರಂಭಿಸುತ್ತದೆ. ಇದರ ನಿಯಂತ್ರಣಕ್ಕೆ ಜೂನ್ ತಿಂಗಳಲ್ಲಿ ಆಳವಾದ ಉಳುಮೆ ಮಾಡಿ ತಿಂಗಳ ಅಂತ್ಯದೊಳಗೆ ಬಿತ್ತನೆ ಕಾರ್ಯ ಮುಗಿಸಬೇಕು. ಅಂತರ ಬೆಳೆಯಾಗಿ ತೊಗರಿ ಬಿತ್ತಬೇಕು. ರಸಗೊಬ್ಬರಗಳ ಸಮತೋಲನ ಬಳಕೆ ಮತ್ತು ಕಳೆ ರಹಿತ ಬೇಸಾಯ ಕೈಗೊಂಡು 9 ಭಾಗ ಮರಳಿಗೆ 1 ಭಾಗ ಸುಣ್ಣದ ಮಿಶ್ರಣವನ್ನು ಬಿತ್ತನೆಯಾದ 30 ದಿನದೊಳಗೆ ಬೆಳೆಯ ಸುಳಿಯಲ್ಲಿ ಹಾಕಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts