More

    ಹಾಸನಾಂಬೆಯನ್ನು ಬಡವರಿಂದ ದೂರವಿರಿಸಿದ ಜಿಲ್ಲಾಡಳಿತ: ಕಾಂಗ್ರೆಸ್ ಆರೋಪ

    ಹಾಸನ: ಹಾಸನಾಂಬೆ ಜಾತ್ರಾ ಮಹೋತ್ಸವ ವಿಚಾರದಲ್ಲಿ ಜನಸಾಮಾನ್ಯರು ಹಾಗೂ ಪ್ರತಿನಿಧಿಗಳ ನಡುವೆ ಜಿಲ್ಲಾಡಳಿತ ತಾರತಮ್ಯ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ ಆರೋಪಿಸಿದರು.

    ಹರಕೆ ಹೊತ್ತವರು, ನೊಂದವರು ದೇವಸ್ಥಾನಕ್ಕೆ ಬರಬೇಕೆಂಬ ಆಸೆ ಹೊಂದಿರುತ್ತಾರೆ. ಕರೊನಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಎಲ್ಲರಿಗೂ ಅವಕಾಶ ನೀಡಬೇಕಿತ್ತು. ಕೋವಿಡ್-19 ನೆಪದಲ್ಲಿ ಜನರನ್ನು ದೇವರಿಂದ ದೂರವಿಡುವ ಮೂಲಕ ಜಿಲ್ಲಾಡಳಿತ ತಾನು ಅಸಹಾಯಕ ಎಂದು ಸಾಬೀತುಪಡಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಆರೋಪಿಸಿದರು.

    ಸ್ಯಾನಿಟೈಸರ್, ಮಾಸ್ಕ್ ಹಾಗೂ ಪರಸ್ಪರ ಅಂತರ ಪಾಲನೆ ಮೂಲಕ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಮಾಡಬಹುದಿತ್ತು. ಈ ಕೆಲಸ ಅಧಿಕಾರಿಗಳಿಂದ ಸಾಧ್ಯವಾಗದೆ ಇದ್ದರೆ ಸಮಾಜ ಸೇವಕರಿಗೆ ವಹಿಸಿಕೊಡಲಿ ಎಂದು ಸಲಹೆ ನೀಡಿದರು.

    ಕಾಂಗ್ರೆಸ್ ಮುಖಂಡರಾದ ಕೆಲವತ್ತಿ ಸೋಮಶೇಖರ್, ಬಸವರಾಜ್, ನವೀದ್, ಕಿರಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts