More

    ಕಾಡುಹಂದಿಗಳಿಂದ ಬೆಳೆ ಹಾನಿ; ಪರಿಹಾರ ನೀಡಲು ಕಣಿವಿಹಳ್ಳಿ ರೈತರ ಆಗ್ರಹ

    ಹರಪನಹಳ್ಳಿ: ಕಾಡು ಹಂದಿಗಳಿಂದ ಬೆಳೆ ನಷ್ಟವಾಗಿದ್ದು, ಕೂಡಲೇ ಪರಿಹಾರ ನೀಡುವಂತೆ ಒತ್ತಾಯಿಸಿ ತಾಲೂಕಿನ ಕಣಿವಿಹಳ್ಳಿ ರೈತರು ಪಟ್ಟಣದ ವಲಯ ಅರಣ್ಯಾಧಿಕಾರಿ ಕೆ.ಮಲ್ಲಪ್ಪಗೆ ಸೋಮುವಾರ ಮನವಿ ಸಲ್ಲಿಸಿದರು.

    ಇದನ್ನೂ ಓದಿರಿ: ಬೆಳೆಹಾನಿದ ರೈತರಿಗೆ ಸೂಕ್ತ ಪರಿಹಾರ ಒದಗಿಸಿ; ಜೆಡಿಎಸ್‌ನಿಂದ ಮನವಿ ಸಲ್ಲಿಕೆ

    ಗ್ರಾಮದಿಂದ 50ಕ್ಕೂ ಹೆಚ್ಚು ರೈತರು ಅರಣ್ಯ ಇಲಾಖೆ ಕಚೇರಿಗೆ ಆಗಮಿಸಿದ ರೈತರು, ಕಳೆದ ಒಂದು ತಿಂಗಳಿನಿಂದ ಗ್ರಾಮದ ನೂರಾರು ಎಕರೆ ಜಮೀನುಗಳಲ್ಲಿ ಮೆಕ್ಕೆಜೋಳ, ಶೇಂಗಾ ಇತರ ಬೆಳೆಗಳನ್ನು ಸಾವಿರಾರು ರೂ.ಖರ್ಚು ಮಾಡಿ ಬಿತ್ತನೆ ಮಾಡಲಾಗಿದೆ.

    ಆದರೆ ಗ್ರಾಮ ಗುಡ್ಡಗಾಡು ಪ್ರದೇಶ ಹೊಂದಿದ್ದರಿಂದ ರಾತ್ರಿ ವೇಳೆ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದ್ದು, ಬೆಳೆ ನಾಶವಾಗುತ್ತಿವೆ. ಬಗ್ಗೆ ತಮ್ಮ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲವೆಂದು ಅಳಲು ತೋಡಿಕೊಂಡರು.

    ತಾವುಗಳು ಅರಣ್ಯ ಇಲಾಖೆಯಿಂದ ರೈತರಿಗಾದ ನಷ್ಟ ವನ್ನು ಪರಿಹಾರದ ರೂಪದಲ್ಲಿ ನೀಡಬೇಕು ಮತ್ತು ರೈತರ ಬೆಳೆಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

    ರೈತರಿಂದ ಮನವಿ ಸ್ವೀಕರಿಸಿದ ವಲಯ ಅರಣ್ಯಾಧಿಕಾರಿ ಕೆ.ಮಲ್ಲಪ್ಪ, ಜಮೀನುಗಳಿಗೆ ಕಾಡು ಪ್ರಾಣಿಗಳು ಬರದಂತೆ ರಾತ್ರಿ ಪಾಳ್ಯದಲ್ಲಿ ಅರಣ್ಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಬೆಳೆ ಹಾನಿಯಾದ ರೈತರಿಗೆ ಪರಿಹಾರಕ್ಕೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಈ ವೇಳೆ ರೈತರಾದ ಕೆ.ರಾಮಪ್ಪ, ಪಿ.ಭೀಮಪ್ಪ, ಪರಶುಪ್ಪ, ಮಲ್ಲಪ್ಪ, ರಾಜಪ್ಪ, ಮಂಜುನಾಥ ಪಿ, ವೀರಣ್ಣ, ಹುಚ್ಚಪ್ಪ, ನಾಗರಾಜ, ಹಾಲೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts