More

    ಮೊಬೈಲ್‌ನಲ್ಲೇ ಭೇಟಿ ಮಾಡುವ ಸ್ಥಿತಿ ನಿರ್ಮಾಣ

    ನಿವೃತ್ತ ಪ್ರಾಚಾರ್ಯ ಎಸ್.ಬಸವರಾಜ ಖೇದ

    ಗುರುವಂದನೆ ಆಯೋಜನೆಗೆ ಸಂತಸ ವ್ಯಕ್ತ

    ಹರಪನಹಳ್ಳಿ: ಮೊಬೈಲ್, ಇಂಟರನೆಟ್ ಹಾವಳಿಯಲ್ಲಿ ಪರಸ್ಪರ ಭೇಟಿ ಮಾಡುವುದೂ ಕಷ್ಟಸಾಧ್ಯವಾಗುತ್ತಿದ್ದು, ಮೊಬೈಲ್‌ನಲ್ಲಿಯೇ ಪರಸ್ಪರ ಸಮಾಲೋಚನೆ ನಡೆಸುವಂತಾಗಿದೆ. ಈ ಸ್ಥಿತಿಯಲ್ಲೂ ಎಲ್ಲರನ್ನೂ ಒಂದು ಕಡೆ ಸೇರಿಸಿ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದು ಸಂತಸ ತಂದಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಬಸವರಾಜ ಹೇಳಿದರು.

    ಪಟ್ಟಣದ ಎಸ್‌ಯುಜೆಎಂ ಪದವಿ ಪೂರ್ವ ಕಾಲೇಜಿನಲ್ಲಿ 1998-99ನೇ ಸಾಲಿನ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದ ವಿದ್ಯಾರ್ಥಿ ಬಳಗ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಕಾಲೇಜಿನ ಬಹಳಷ್ಟು ವಿದ್ಯಾರ್ಥಿಗಳು ಶಿಕ್ಷಣ ಮತ್ತು ರಕ್ಷಣಾ ಇಲಾಖೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇವರು ತಮ್ಮಂತೆ ತಮ್ಮ ಮಕ್ಕಳನ್ನೂ ಸುಸಂಸ್ಕೃತರನ್ನಾಗಿ ಮಾಡಬೇಕು ಎಂದರು.

    ಪೋಲೀಸ್ ವೃತ್ತ ನಿರೀಕ್ಷಕ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಡಿ.ದುರುಗಪ್ಪ ಮಾತನಾಡಿ, ಸುಸಂಸ್ಕೃತ ಮನುಷ್ಯತ್ವ ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ನನಗೂ ಶಿಕ್ಷಕನಾಗಬೇಕೆಂಬ ಆಸೆ ಇತ್ತು. ಆದರೆ, ಪೋಲೀಸ್ ಇಲಾಖೆಗೆ ಸೇರಬೇಕಾಯಿತು. ಯಾವುದೇ ವೃತ್ತಿ ಆಗಿರಲಿ ನಿಷ್ಠೆಯಿಂದ ಕೆಲಸ ಮಾಡಬೇಕು. ಗುರು-ಹಿರಿಯರು, ತಂದೆ-ತಾಯಿಗಳಿಗೆ ಗೌರವ ನೀಡಬೇಕು ಎಂದರು. ನಿವೃತ್ತ ಪ್ರಾಚಾರ್ಯ ಕೃಷ್ಣಸಿಂಗ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉದಾರ ಮನಸ್ಸು ಬಹಳ ಮುಖ್ಯ. ಅದನ್ನು ನಿಮ್ಮಲ್ಲಿ ಕಾಣುತ್ತಿದ್ದೇನೆ ಎಂದರು.

    ಇದೇ ವೇಳೆ ನಿವೃತ್ತ ಉಪನ್ಯಾಸಕರು, ಕರ್ತವ್ಯ ನಿರತ ಉಪನ್ಯಾಸಕರು ಹಾಗೂ ಮೃತ ಉಪನ್ಯಾಸಕರ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು. ಪ್ರೊ.ಉತ್ತಂಗಿ ಕೊಟ್ರೇಶ ಪ್ರಸ್ತಾವಿಕವಾಗಿ ಮಾತನಾಡಿದರು. ಗಿರಜ್ಜಿ ನಾಗರಾಜ ವರದಿ ಮಂಡಿಸಿದರು. ನಿವೃತ್ತ ಉಪನ್ಯಾಸಕರಾದ ಎಂ.ಪಿ.ಎಂ.ಶಾಂತವೀರಯ್ಯ, ಎಂ.ಪಿ.ಎಂ.ದಯಾನಂದಸ್ವಾಮಿ, ಎಸ್.ಎನ್.ಹೆಗಡೆ, ಆರ್.ಚೆನ್ನಬಸವನಗೌಡ, ಮಲ್ಲಪ್ಪಯ್ಯಶಾಸಿ, ಎ.ಮಾಲಾ, ಸೋಮರೆಡ್ಡಿ, ಭದ್ರಶೆಟ್ಟಿ, ಎಚ್.ಮಲ್ಲಿಕಾರ್ಜುನ, ಬಿ.ಕೃಷ್ಣಮೂರ್ತಿ, ಚಿಕ್ಕಪ್ರಸಾದ್, ಎಸ್.ಕೊಟ್ರೇಶ, ಶಿವಪ್ರಕಾಶ, ಕೊಟ್ಟೂರಸ್ವಾಮಿ, ಟಿ.ರಮೇಶ, ವೀರನಗೌಡ, ಇಸಿಒ ಗಿರಜ್ಜಿ ಮಂಜುನಾಥ, ಸಿದ್ದಬಸಪ್ಪ, ಸಲೀಂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts