More

    ಅಜೇಯವಾಗಿ ಸೆಮಿಫೈನಲ್‌ಗೇರಿದ ಭಾರತ ಹಾಕಿ ತಂಡ: ಮಹಿಳಾ ಕಬಡ್ಡಿ ತಂಡ ಡ್ರಾಗೆ ತೃಪ್ತಿ

    ಹಾಂಗ್‌ರೆೌ: ನಾಯಕ ಹರ್ಮಾನ್‌ಪ್ರೀತ್ ಸಿಂಗ್ (2, 4, 32ನೇ ನಿಮಿಷ) ಹಾಗೂ ಮಂದೀಪ್ ಸಿಂಗ್ (18, 24, 46) ಸಿಡಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ಪುರುಷರ ಹಾಕಿ ತಂಡ ಏಷ್ಯಾಡ್‌ನಲ್ಲಿ ತನ್ನ 5ನೇ ಹಾಗೂ ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 12-0 ಅಂತರದಿಂದ ಮಣಿಸಿ ಅಜೇಯವಾಗಿ ಸೆಮಿೈನಲ್‌ಗೇರಿದೆ. ಕೂಟದಲ್ಲಿ ಸತತ 4ನೇ ಬಾರಿಗೆ ಉಪಾಂತ್ಯಕ್ಕೇರಿದ ಸಾಧನೆ ಮಾಡಿರುವ ಹರ್ಮಾನ್‌ಪ್ರೀತ್ ಪಡೆ ಚಿನ್ನ ಗೆದ್ದು, ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಪಡೆಯುವ ಅವಕಾಶ ವೃದ್ಧಿಸಿಕೊಂಡಿದೆ.
    ಸೋಮವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಸಂಪೂರ್ಣವಾಗಿ ಹಿಡಿತ ಸಾಧಿಸಿದ ಭಾರತ 11 ಪೆನಾಲ್ಟಿ ಅವಕಾಶಗಳಲ್ಲಿ 5ರಲ್ಲಿ ಯಶಸ್ವಿ ಗೋಲುಗಳಿಸುವ ಮೂಲಕ ಸುಧಾರಿತ ಪ್ರದರ್ಶನ ನೀಡಿತು. 7 ಫೀಲ್ಡ್ ಗೋಲು ಗಳಿಸಿತು. ಮೊದಲಾರ್ಧದಲ್ಲಿ ಭಾರತ 6-0 ಮುನ್ನಡೆ ಸಾಧಿಸಿತು. ಭಾರತ ಪರ ಅಭಿಷೇಕ್ (41, 57) ಎರಡು, ಲಲಿತ್ ಉಪಾಧ್ಯಾಯ (23), ಅಮಿತ್ ರೋಹಿದಾಸ್ (28), ನೀಲಕಂಠ ಶರ್ಮ (47) ಹಾಗೂ ಗುರ್ಜಾಂತ್ ಸಿಂಗ್ (56) ತಲಾ ಗೋಲು ಸಿಡಿಸಿದರು. ಬುಧವಾರ ನಡೆಯಲಿರುವ ಸೆಮಿೈನಲ್‌ನಲ್ಲಿ ಬಿ ಗುಂಪಿನ 2ನೇ ಸ್ಥಾನಿ ಕೊರಿಯಾ ಭಾರತ ಎದುರಿಸಲಿದೆ.

    58: ಭಾರತದ ಪುರುಷರ ಹಾಕಿ ತಂಡ ಏಷ್ಯಾಡ್‌ನಲ್ಲಿ ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ ಬರೋಬ್ಬರಿ 58 ಗೋಲು ಸಿಡಿಸಿದ್ದು, ಕೇವಲ 5 ಗೋಲು ಬಿಟ್ಟುಕೊಟ್ಟಿದೆ.

    ಮಹಿಳಾ ಕಬಡ್ಡಿ ತಂಡ ಡ್ರಾಗೆ ತೃಪ್ತಿ: ಭಾರತ ಮಹಿಳೆಯರ ಕಬಡ್ಡಿ ತಂಡ ತನ್ನ ಮೊದಲ ಪಂದ್ಯದಲ್ಲಿ ಅನಿರೀಕ್ಷಿತ ಲಿತಾಂಶದೊಂದಿಗೆ ಅಭಿಯಾನ ಆರಂಭಿಸಿದೆ. ಸೋಮವಾರ ಆರಂಭಗೊಂಡ ಸ್ಪರ್ಧೆಯ ಮೊದಲ ಪಂದ್ಯದಲ್ಲಿ ಚೀನಾ ತೈಪೆ ಎದುರು 34-34 ಅಂಕಗಳಿಂದ ಡ್ರಾಗೆ ತೃಪ್ತಿಪಟ್ಟಿದೆ. ನಿರೀಕ್ಷಿತ ಆರಂಭ ಪಡೆಯದ ಭಾರತ ತಂಡ ಪಂದ್ಯದ ಕೊನೆಯ ರೈಡ್‌ನಲ್ಲಿ ಬೋನಸ್ ಅಂಕ ಪಡೆದು ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಮೊದಲಾರ್ಧದಲ್ಲಿ ಭಾರತ 17-15ರಿಂದ ಮುನ್ನಡೆಯಲ್ಲಿತ್ತು. ಅಚ್ಚರಿಯ ಪ್ರದರ್ಶನ ಮೂಲಕ ಪಂದ್ಯದಲ್ಲಿ ಭಾರತ ತಂಡಕ್ಕೆ ಆಘಾತ ನೀಡಿದ ಚೀನಾ ತೈಪೆ ಸಮಬಲ ಸಾಧಿಸಿತು. ಮಂಗಳವಾರ ದಕ್ಷಿಣ ಕೊರಿಯಾ ಸವಾಲು ಎದುರಿಸಲಿದೆ. ಪುರುಷರ ತಂಡ ಬಾಂಗ್ಲಾದೇಶ ವಿರುದ್ಧ ಪಂದ್ಯದ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts