More

    ಹರಿಹರದಲ್ಲಿ ತಹಸೀಲ್ದಾರರಿಂದ ಅಂಬು ಛೇದನ

    ಹರಿಹರ: ವಿಜಯದಶಮಿ ನಿಮಿತ್ತ ನಗರದಲ್ಲಿ ಸೋಮವಾರ ನಾಡಹಬ್ಬ ದಸರಾ ಮಹೋತ್ಸವವನ್ನು ತಾಲೂಕು ಆಡಳಿತ ಮತ್ತು ಸಾಮೂಹಿಕ ದಸರಾ ಸಮಿತಿ ನೇತೃತ್ವದಲ್ಲಿ ಸರಳವಾಗಿ ಆಚರಿಸಲಾಯಿತು.

    ತಹಸೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಜೋಡು ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಸಂಪ್ರದಾಯದಂತೆ ಅಂಬು ಛೇದಗೊಳಿಸುವ ಮೂಲಕ ವಿಜಯ ದಶಮಿ ಆಚರಿಸಿದರು.

    ಪ್ರತಿವರ್ಷ ದೇವಿ ಮೂರ್ತಿಯ ಅಂಬಾರಿ ಹೊತ್ತ ಆನೆ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳ ನೃತ್ಯ ಪ್ರದರ್ಶನ, ಸಾಂಸ್ಕೃತಿಕ ಮೇಳಗಳು ಮೆರುಗು ನೀಡುತ್ತಿದ್ದವು. ಈ ಬಾರಿ ಇದ್ಯಾವುದಕ್ಕೂ ಆಸ್ಪದ ನೀಡಿರಲಿಲ್ಲ.

    ಪ್ರಾರಂಭದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನ ಆವರಣದಲ್ಲಿ ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್ ಮಹೋತ್ಸವಕ್ಕೆ ಚಾಲನೆ ನೀಡಿದರು.

    ನಂತರ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆೆಯಲ್ಲಿ ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಶಂಕರ್ ಖಟಾವಕರ್, ಎಪಿಎಂಸಿ ಅಧ್ಯಕ್ಷ ಹನುಮಂತರೆಡ್ಡಿ, ಅಮರಾವತಿ ರೇವಣಸಿದ್ದಪ್ಪ, ಹಲಸಬಾಳು ಬಸವರಾಜಪ್ಪ, ನಾಗೇಂದ್ರಪ್ಪ, ಪ್ರಕಾಶ್ ಶ್ರೇಷ್ಠಿ, ಪ್ರಶಾಂತ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts