More

    ದೇಶದ ಸಂವಿಧಾನದಲ್ಲಿದೆ ಮೌಲ್ಯಗಳು

    ಹರಿಹರ: ಬುದ್ಧನ ದಯೆ, ಶರಣರ ಕಾಯಕ, ಅಂಬೇಡ್ಕರ್ ಅವರ ಸ್ವಾಭಿಮಾನದ ಮೌಲ್ಯಗಳು ದೇಶದ ಸಂವಿಧಾನದಲ್ಲಿವೆ ಎಂದು ಹೈಕೋರ್ಟ್ ವಕೀಲ ಅನಂತನಾಯಕ್ ಹೇಳಿದರು.

    ನಗರದ ಬೈಪಾಸ್ ಬಳಿಯ ಪ್ರೊ.ಬಿ.ಕೃಷ್ಣಪ್ಪ ಸಾಂಸ್ಕೃತಿಕ ಭವನದಲ್ಲಿ ಶನಿವಾರ ವಿದ್ಯಾರ್ಥಿ ಬಂಧುತ್ವ ವೇದಿಕೆಯ ರಾಜ್ಯ ಮಟ್ಟದ ಶಿಬಿರದಲ್ಲಿ ಭಾರತದ ಸಂವಿಧಾನ ಮತ್ತು ಸವಾಲುಗಳು ಕುರಿತು ಮಾತನಾಡಿ, ದಮನಿತರ ಧ್ವನಿ ಸಂವಿಧಾನವಾಗಿದೆ. ಸಂವಿಧಾನದ ಹೊರತು ದೇಶದ ಅಭಿವೃದ್ಧಿ ಊಹಿಸಲು ಸಾಧ್ಯವಿಲ್ಲ ಎಂದರು.

    ಸಂವಿಧಾನ ದೇಶದ ಸಮಗ್ರತೆ ಮತ್ತು ಐಕ್ಯವನ್ನು ಪ್ರತಿಪಾದಿಸುತ್ತದೆ. ಸಮಾನತೆ ಮತ್ತು ವ್ಯಕ್ತಿ ಗೌರವ ಅದರ ಜೀವಾಳ, ದೇಶದ ಐಕ್ಯ, ಬಹು ಭಾಷೆ, ಸಂಸ್ಕೃತಿಯ ಉಳಿವು ಸಂವಿಧಾನದಿಂದ ಮಾತ್ರ ಸಾಧ್ಯ. ನಂಬಿಕೆ, ಧರ್ಮ, ಸೌಹಾರ್ದ ಪರಂಪರೆಯ ಸಂರಕ್ಷಣೆ ಸಂವಿಧಾನದಿಂದ ಮಾತ್ರ ಸಾಧ್ಯ. ನೈಸರ್ಗಿಕ ಮತ್ತು ಪ್ರಾಕೃತಿಕ ಸಂಪತ್ತಿನ ಸದ್ಬಳಕೆ ಆಗಬೇಕೆಂದರು.

    ನಮ್ಮ ಪರಂಪರೆ ಮತ್ತು ವರ್ತಮಾನವನ್ನು ಸರಿಯಾಗಿ ಅರ್ಥೈಸುವ ಅಧ್ಯಯನ ಇಂದಿನ ಅಗತ್ಯ. ತೀವ್ರಗೊಳ್ಳುತ್ತಿರುವ ಮತಾಂಧತೆ ಮತ್ತು ಕೋಮುವಾದ ಈ ದೇಶಕ್ಕೆ ಅಂಟಿದ ಶಾಪ. ಇದನ್ನು ತೊಡೆದು ಹಾಕಲು ಸಶಕ್ತ ಕಾರ್ಯಕರ್ತರ ಪಡೆ ತಯಾರಾಗಬೇಕು. ನಮ್ಮ ಭೂಮಿ, ನೀರು, ಆಹಾರ, ಸಂಸ್ಕೃತಿಯನ್ನು ರಕ್ಷಿಸಿಕೊಳ್ಳಬೇಕು. ಶಿಕ್ಷಣ, ಉದ್ಯೋಗ ಮೂಲಭೂತ ಹಕ್ಕಾಗಬೇಕು ಎಂದರು.

    ಚಿಂತನೆ ಇಲ್ಲದೆ ಚಳವಳಿ ಸಾಧ್ಯವಿಲ್ಲ. ಚಳವಳಿಗಳಿಲ್ಲದೆ ಜನಪರ ರಾಜಕೀಯ ಸಾಧ್ಯವಿಲ್ಲ. ಜನಪರ ರಾಜಕಾರಣವನ್ನು ಬಲಪಡಿಸಲು ಈ ಶಿಬಿರ ಸಹಕಾರಿಯಾಗಿದೆ. ಕ್ಯಾಂಪಸ್‌ಗಳಲ್ಲಿ ಪ್ರಜಾಸತ್ತಾತ್ಮಕ ವಾತಾವರಣ ನಿರ್ಮಾಣವಾಗಲು ಹೋರಾಟ ರೂಪಿಸಬೇಕಿದೆ ಎಂದರು.

    ಲೇಖಕ ಹನುಮಂತ ಹಲಗೇರಿ, ಶಿವಕುಮಾರ್ ಮಾಡಾಳು, ಉಕ್ಕಡಗಾತ್ರಿ ಮಂಜುನಾಥ, ತೋಳಿ ಭರಮಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts