More

    ವಿದ್ವಾಂಸರಿಗೆ ಎಲ್ಲ ಕಡೆಯೂ ಗೌರವ ಪ್ರಾಪ್ತಿ

    ದಾವಣಗೆರೆ : ರಾಜನು ತನ್ನ ರಾಜ್ಯದಲ್ಲಿ, ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಮಾತ್ರ ಗೌರವವನ್ನು ಪಡೆಯುತ್ತಾರೆ, ಆದರೆ ವಿದ್ಯೆಯನ್ನು ಕಲಿತ ವಿದ್ವಾಂಸರಿಗೆ ಎಲ್ಲ ಕಡೆಯೂ ಗೌರವ, ಪ್ರಶಂಸೆ ಸಿಗುತ್ತದೆ ಎಂದು ಶ್ರೀಶೈಲ ಜಗದ್ಗುರುಗಳು ನುಡಿದರು.
     ಹರಿಹರದ ಎಸ್.ಜೆ.ವಿ.ಪಿ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
     ವಿದ್ಯೆಯನ್ನು ಕಲಿತವರು ವಿಶ್ವದಾದ್ಯಂತ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಜ್ಞಾನವನ್ನು ಸಂಪಾದನೆ ಮಾಡಿ ತಂದೆ, ತಾಯಿಗಳಿಗೆ ಮತ್ತು ಕಾಲೇಜಿಗೆ ಉತ್ತಮ ಹೆಸರು ತಂದು ಕೊಡಬೇಕು. ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳವುದರ ಮೂಲಕ ದೇಶಕ್ಕೆ ಆದರ್ಶ ಪ್ರಜೆಗಳಾಗಬೇಕೆಂದು ಕಿವಿಮಾತು ಹೇಳಿದರು.
     ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಸುಶೀಲಾ ದೇವಿ ರಾವ್ ವಿಶೇಷ ಉಪಾನ್ಯಾಸ ನೀಡಿದರು. ಸಂಸ್ಥೆಯ ಉಪಾಧ್ಯಕ್ಷ ಡಿ.ಎಂ. ಹಾಲಸ್ವಾಮಿ, ಕಾರ್ಯದರ್ಶಿ ಆರ್.ಟಿ. ಪ್ರಶಾಂತ್ ದುಗ್ಗತ್ತಿಮಠ್, ನಿರ್ದೇಶಕರಾದ ಎನ್.ಎಂ. ತಿಪ್ಪೇಸ್ವಾಮಿ, ಎನ್.ಎಚ್. ಪಾಟೀಲ್, ಕಾಲೇಜಿನ ಪ್ರಾಚಾರ್ಯೆ ಶಿವಗಂಗಮ್ಮ, ಉಪಾನ್ಯಾಸಕರು, ಪದವಿ ಕಾಲೇಜಿನ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts