More

    ಮಾ.4ಕ್ಕೆ ತುಂಗಭದ್ರಾ ನದಿ ದಡದಲ್ಲಿ ತುಂಗಾರತಿ

    ಹರಿಹರ: ಉತ್ತರ ಭಾರತದ ಗಂಗಾರತಿ ಮಾದರಿ ದಕ್ಷಿಣ ಭಾರತದಲ್ಲಿ ತುಂಗಾರತಿ ಧಾರ್ಮಿಕ ಸಮಾರಂಭವನ್ನು ಮಾ.4ರಂದು ತುಂಗಭದ್ರಾ ನದಿದಡದಲ್ಲಿ ಆಯೋಜಿಸಲಾಗಿದೆ ಎಂದು ಕೋಡಿಯಾಲ- ಹೊಸಪೇಟೆಯ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಹೇಳಿದರು.

    ಪುಣ್ಯಕೋಟಿ ಮಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನಿಂದ ಆರಂಭವಾಗುತ್ತಿರುವ ತುಂಗಾರತಿ ಕಾರ್ಯಕ್ರಮವನ್ನು ಇನ್ನು ಮುಂದೆ ಪ್ರತಿ ವರ್ಷವೂ ಆಚರಿಸಲಾಗುವುದು ಎಂದು ಮಾಹಿತಿ ನೀಡಿದರು.

    ಬುಧವಾರ ಸಂಜೆ 6ಕ್ಕೆ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಪಾದಪೂಜೆಯೊಂದಿಗೆ ನಾಡಿನ ಎಲ್ಲ ಹರ, ಗುರು, ಚರ ಮೂರ್ತಿಗಳ ಸಮ್ಮುಖದಲ್ಲಿ ಸಮಾರಂಭ ಶುರುವಾಗಲಿದೆ. ರಾಣೇಬೆನ್ನೂರಿನ ಹಿರೇಮಠದ ಶಿವಯೋಗಿ ಶಿವಾಚಾರ್ಯರು ನೇತೃತ್ವ ವಹಿಸುವರು ಎಂದು ಮಾಹಿತಿ ನೀಡಿದರು.

    ಸಂಜೆ 7 ಕ್ಕೆ ಧರ್ಮಸಭೆ ನಡೆಯಲಿದ್ದು, ಸಾನ್ನಿಧ್ಯವನ್ನು ಶ್ರೀಮದ್ ಉಜ್ಜಯಿನಿ ಜಗದ್ಗುರು ವಹಿಸುವರು. ನೊಣವಿನಕೆರೆ ಕಾಡಸಿದ್ದೇಶ್ವರ ಸಂಸ್ಥಾನ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಡಿ.ಕೆ. ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಬಿ.ವೈ. ವಿಜಯೇಂದ್ರ ದಿನದರ್ಶಿಕೆ ಬಿಡುಗಡೆ ಮಾಡುವರು ಎಂದು ಹೇಳಿದರು.

    ರಾಣೇಬೆನ್ನೂರಿನ ಶಾಸಕ ಅರುಣ್‌ಕುಮಾರ್ ಪೂಜಾರನ್ನು ಸನ್ಮಾನಿಸಲಾಗುವುದು. ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಶ್ರೀ ಕ್ಷೇತ್ರದ ಪ್ರಪ್ರಥಮ ವಿಶ್ವಮಾತೆ ಪುಣ್ಯಕೋಟಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

    ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ.ಪಾಟೀಲ್, ಸಂಸದ ಜಿ.ಎಂ.ಸಿದ್ದೇಶ್ವರ್, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಸಿ.ಎಂ.ಉದಾಸಿ, ಶಾಸಕರಾದ ಎಸ್.ರಾಮಪ್ಪ, ಎಂ.ಪಿ.ರೇಣುಕಾಚಾರ್ಯ, ವಿರೂಪಾಕ್ಷಪ್ಪ ಬಳ್ಳಾರಿ, ನೆಹರೂ ಓಲೇಕಾರ್ ಭಾಗವಹಿಸುವರು ಎಂದು ತಿಳಿಸಿದರು.

    ದೊಡ್ಡಬಾತಿ ತಪೋವನ ಡಾ.ಶಶಿಕುಮಾರ್ ಮೆಹರ‌್ವಾಡೆ ಮಾತನಾಡಿ, ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಅವರು ಸಾಮಾಜಿಕ ಕಳಕಳಿಯಿಂದ ಕಾರ್ಯಕ್ರಮ ಆಯೋಜಿಸಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.

    ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಮಾತನಾಡಿದರು. ಮುಖಂಡರಾದ ಡಾ.ಎಚ್.ವಿಶ್ವನಾಥ್, ನಂದಿಗಾವಿ ಎನ್.ಎಚ್.ಶ್ರೀನಿವಾಸ್, ರವೀಂದ್ರ ಗೌಡ ಪಾಟೀಲ್, ನಾಗರಾಜ್ ಹಳಳೆಪ್ಪನವರ್, ರುಕ್ಮಿಣಿ ಸಾವಕಾರ್, ಗಿರಿಜಾ ದೇವಿ ದುರ್ಗದಮಠ, ಭಾರತಿ ಜಂಬಗಿ, ಕೃಷ್ಣಮೂರ್ತಿ ಲಮಾಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts