More

    ನಾಯಕತ್ವ ಜನರ ಪ್ರೀತಿಯಿಂದ ಬರಬೇಕು, ಹಣದಿಂದಲ್ಲ

    ಹರಿಹರ: ನಾಯಕತ್ವ ಜನರ ಪ್ರೀತಿ, ಹೃದಯದಿಂದ ಬರಬೇಕೆ ಹೊರತು ಹಣ ಕೊಟ್ಟು ಪಡೆಯುವುದಲ್ಲ ಎಂದು ಜೆಡಿಎಸ್ ಅಭ್ಯರ್ಥಿ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹೇಳಿದರು.

    ನಗರದ ಎಚ್.ಕೆ.ವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ತಾಲೂಕು ಜೆಡಿಎಸ್ ಪಕ್ಷದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ ಕೆಲವರು ಪ್ಲೆಕ್ಸ್‌ಗಳಲ್ಲೇ ಎಂಎಲ್‌ಎಗಳಾಗಿ, ಹಣ ಹಂಚಿ ಹಾರ ತುರಾಯಿ ಹಾಕಿಸಿಕೊಂಡು ಜೈಕಾರ, ಮೆರವಣಿಗೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದರು.

    ಶಾಸಕ ರಾಮಪ್ಪ ಗೆದ್ದ ನಂತರ ಕ್ಷೇತ್ರದ ಅಭಿವೃದ್ಧಿಗಿಂತ ತಮ್ಮ ಸ್ವಂತ ಅಭಿವೃದ್ಧಿಗೆ ಆದ್ಯತೆ ನೀಡಿದರು. ಎಲ್ಲೆಡೆ ಆಸ್ತಿ ಮಾಡಿದ್ದಾರೆ. ಇವರ ಭ್ರಷ್ಟಾಚಾರವನ್ನು ಶೀಘ್ರ ಬಯಲಿಗೆಳೆಯುತ್ತೇನೆ ಎಂದರು.

    ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ಕೆಲವು ಸಮುದಾಯಗಳಿಗೆ ನಮ್ಮ ಪಕ್ಷದ ಬಗ್ಗೆ ಇಲ್ಲದ ಸುಳ್ಳು ಹೇಳಿದ್ದರು. ಈ ಸಲ ಮಾಜಿ ಸಚಿವ ಜಮೀರ್ ಅಹಮದ್ ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ ಎಂದು ಹೇಳಿದ್ದಾರೆ. ಆದರೆ, ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಸಮಸ್ಯೆಯಾದಾಗ ಇವರು ಬರುವುದಿಲ್ಲ ಎಂದರು.

    ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡು ರಾಜಕಾರಣ ಮಾಡುತ್ತಿವೆ. ಒಬ್ಬರ ಮೇಲೊಬ್ಬರು ಆರೋಪಿಸುತ್ತಾ ದರ್ಗಾ ಮುಂಭಾಗದ ಹಾಳಾದ ರಸ್ತೆ ಹಾಗೆ ಉಳಿಯುವಂತೆ ನೋಡಿಕೊಂಡರು. ಆರೋಪ ಪ್ರತ್ಯಾರೋಪ ಕೇವಲ ನಾಟಕ ಎಂದರು.

    ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ ಮಾತನಾಡಿ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ ಜೆಡಿಎಸ್ ಪಕ್ಷದ ಸಾಧನೆ ಹಾಗೂ ತಾಲೂಕಿನಲ್ಲಿ ನಮ್ಮ ನಾಯಕರ ಸಾಧನೆ ತಿಳಿಸುವ ಮೂಲಕ ಮತಯಾಚನೆ ಮಾಡಬೇಕು ಎಂದರು.

    ನಗರಸಭೆ ಸದಸ್ಯ ಆರ್.ಸಿ. ಜಾವೇದ್, ಜಂಬಣ್ಣ ಗುತ್ತೂರು, ನಿಂಬಕ್ಕ ಚಂದಾಪೂರ್, ಉಷಾ ಮಂಜುನಾಥ್, ವಿರೂಪಾಕ್ಷಪ್ಪ, ದಿನೇಶ್ ಬಾಬು, ಬಿ. ಅಲ್ತಾಫ್, ಮಲೆಬೆನ್ನೂರು ಪುರಸಭಾ ಸದಸ್ಯ ಜಿಯಾವುಲ್ಲಾ, ಯೂಸೂಫ್, ತಾಪಂ ಮಾಜಿ ಸದಸ್ಯ ಕೊಟ್ರೇಶ್, ನಗರ ಜೆಡಿಎಸ್ ಪಕ್ಷದ ಅಧ್ಯಕ್ಷ ಹಬೀಬ್ ಉಲ್ಲಾ, ಎಚ್.ಎಸ್. ಅರವಿಂದ್, ಮಿಟ್ಲಕಟ್ಟೆ ಚಂದ್ರಪ್ಪ, ಕಾಳೇರ್ ಮಂಜುನಾಥ್, ಶೀಲಾಕುಮಾರಿ, ಲಕ್ಷ್ಮೀ ರಾಜಾಚಾರ್, ನಗಿನಾ ಸುಭಾನ್, ಲತಾ ಕೊಟ್ರೇಶ್, ಕಮಲನಾಯ್ಕ ಯಲವಟ್ಟಿ, ಅಡಕೆ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts