More

    ಅಪ್ಪನಾದ ಖುಷಿಯಲ್ಲಿ ಮಗುವಿನ ಫೋಟೋ ರಿವೀಲ್​ ಮಾಡಿ ಹಾರ್ದಿಕ್​ ಪಾಂಡ್ಯ ಹೇಳಿದ್ದು ಹೀಗೆ…

    ನವದೆಹಲಿ: ಟೀಮ್​ ಇಂಡಿಯಾ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಅಪ್ಪನಾಗಿ ಬಡ್ತಿ ಪಡೆದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಮೊನ್ನೆ (ಗುರುವಾರ) ತಾನೇ ಹಂಚಿಕೊಂಡಿದ್ದರು. ಪತ್ನಿ ಹಾಗೂ ನಟಿ ನತಾಶಾ ಸ್ಟಾಂಕೋವಿಕ್​ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಕೈ ಹಿಡಿದಿರುವ ಫೋಟೋ ಮಾತ್ರ ಹಾರ್ದಿಕ್​ ಹಂಚಿಕೊಂಡಿದ್ದರು.

    ಇದೀಗ ಹಾರ್ದಿಕ್​ ಮಗುವಿನ ಪೂರ್ಣ ಫೋಟೋವನ್ನು ಬಹಿರಂಗಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ತಮ್ಮ ಎರಡು ಕೈಗಳಲ್ಲಿ ಮಗು ಹಿಡಿದುಕೊಂಡು ನಗುತ್ತಿರುವ ಫೋಟೋವನ್ನು ಹಾರ್ದಿಕ್​ ಶೇರ್​ ಮಾಡಿಕೊಂಡಿದ್ದಾರೆ. ಇನ್​​ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು ದೇವರ ಆಶೀರ್ವಾದ ಎಂದು ಅಡಿಬರಹ ಬರೆದಿದ್ದಾರೆ.

    ಇದನ್ನೂ ಓದಿ: ಏನೂ ಮಾಡ್ದೇ 19 ಲಕ್ಷಕ್ಕೂ ಹೆಚ್ಚು ವೀವ್ಸ್​ ಪಡೆದ ಯೂಟ್ಯೂಬರ್: ಈ ವಿಡಿಯೋ ನೋಡ್ಬೇಡಿ, ಶಾಕ್​ ಆಗ್ಬೋದು!

    ಫೋಟೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಪೋಸ್ಟ್​ ಮಾಡಿದ ಎರಡೇ ಗಂಟೆಯಲ್ಲಿ 16 ಲಕ್ಷಕ್ಕೂ ಹೆಚ್ಚು ಲೈಕ್ಸ್​ ಬಂದಿವೆ. ಸಾಕಷ್ಟು ನೆಟ್ಟಿಗರು ಹಾರ್ದಿಕ್​ಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಗುರುವಾರವಷ್ಟೇ ‘ನಮಗೆ ಗಂಡು ಮಗು ಜನಿಸಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ಹಾರ್ದಿಕ್​, ಮಗುವಿನ ಕೈ ಹಿಡಿದುಕೊಂಡಿರುವ ಚಿತ್ರವನ್ನೂ ಪ್ರಕಟಿಸಿದ್ದರು. ಅದರ ಬೆನ್ನಲ್ಲೇ ಅವರಿಗೆ ಅಭಿನಂದನೆಗಳ ಸುರಿಮಳೆ ಹರಿದಿತ್ತು. ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​, ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ಬ್ಯಾಟ್ಸ್​ಮನ್​ ಕೆಎಲ್​ ರಾಹುಲ್​, ಸ್ಪಿನ್ನರ್​ ಯಜುವೇಂದ್ರ ಚಾಹಲ್​, ಕುಲದೀಪ್​ ಯಾದವ್​, ಸುರೇಶ್ ರೈನಾ, ಆಸ್ಟ್ರೇಲಿಯಾದ ಕ್ರಿಸ್​ ಲ್ಯಾನ್​ ಮತ್ತು ಟೆನಿಸ್​ ತಾರೆ ಸಾನಿಯಾ ಮಿರ್ಜಾ ಮುಂತಾದವರು ಹಾರ್ದಿಕ್​ಗೆ ಅಭಿನಂದನೆ ತಿಳಿಸಿದ್ದರು. ಬಿಸಿಸಿಐ ಮತ್ತು ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಕೂಡ ಟ್ವಿಟರ್​ನಲ್ಲಿ ಅಭಿನಂದನೆ ಸಲ್ಲಿಸಿತ್ತು.

    ಇದನ್ನೂ ಓದಿ: ತಂದೆಯಾದ ಬೆನ್ನಲ್ಲೇ ಭಾರಿ ಟ್ರೋಲ್​ ಆದ ಹಾರ್ದಿಕ್​ ಪಾಂಡ್ಯ

    ಅಂದಹಾಗೆ ಈ ವರ್ಷದ ಮೊದಲ ದಿನ ಸ್ಟಾಂಕೋವಿಕ್​ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹಾರ್ದಿಕ್​ ಪಾಂಡ್ಯ, ಬಳಿಕ ಮೇನಲ್ಲಿ ಲಾಕ್​ಡೌನ್​ ಸಮಯದಲ್ಲಿ ತಂದೆಯಾಗುತ್ತಿರುವ ವಿಷಯವನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದ್ದರು. ಈ ನಡುವೆ ಅವರು ಸರಳವಾಗಿ ವಿವಾಹವಾಗಿದ್ದಾರೆ ಎನ್ನಲಾಗಿದೆ. ಸೆರ್ಬಿಯಾ ಮೂಲದ ರೂಪದರ್ಶಿ ನತಾಶಾ ಸ್ಟಾಂಕೋವಿಕ್​, ಕನ್ನಡದ ದನ ಕಾಯೋನು ಸಿನಿಮಾದಲ್ಲೂ ನಟಿಸಿದ್ದಾರೆ. ಹಾರ್ದಿಕ್​ ಮುಂಬರುವ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಕಣಕ್ಕಿಳಿಯಲಿದ್ದಾರೆ. (ಏಜೆನ್ಸೀಸ್​)

    ಟೀಮ್​ ಇಂಡಿಯಾ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯಗೆ ಗಂಡು ಮಗು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts