More

    ಲಾಕ್​ಡೌನ್​ನಲ್ಲಿ ಶ್ವಾನ ಪ್ರೇಮ; ಸಾಕು ನಾಯಿಗಳಿಗೆ ಸ್ನಾನ ಮಾಡಿಸಿ ನಲಿದ ಹಾರ್ದಿಕ್​ ಮತ್ತು ಕೃಣಾಲ್​ ಪಾಂಡ್ಯ

    ನವದೆಹಲಿ: ಭಾರತ ಕ್ರಿಕೆಟ್​​ ತಂಡ ಹಾಗೂ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡವನ್ನು ಪ್ರತಿನಿಧಿಸುವ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಲಾಕ್​ಡೌನ್​ನಲ್ಲಿ ಭರ್ಜರಿ ಮೋಜು ಮಸ್ತಿ ಮಾಡುತ್ತಿದ್ದಾರೆ.

    ಭಾವಿ ಪತ್ನಿ ಸೆರ್ಬಿಯಾ ಮೂಲದ ನಟಿ ನತಾಷಾ ಸ್ಟ್ಯಾಂಕೋವಿಕ್​ ಹಾಗೂ ಸಹೋದರ ಕೃಣಾಲ್​ ಪಾಂಡ್ಯ ಮತ್ತು ಅವರ ಪತ್ನಿ ಪಂಕುಡಿ ಜತೆಗೂಡಿ ಬೆಳಗ್ಗೆ ಜಿಮ್​ನಲ್ಲಿ ಬೆವರಿಳಿಸುವ ಅವರು, ನತಾಷಾ ತಯಾರಿಸುವ ಪ್ಯಾನ್​ಕೇಕ್​ ಅನ್ನು ಬೆಳಗಿನ ಉಪಾಹಾರವಾಗಿ ಸೇವಿಸುತ್ತಾರೆ.

    ಬಳಿಕ ತಮ್ಮ ಭಾವಿ ಪತ್ನಿ, ಸಹೋದರ ಹಾಗೂ ನಾದಿನಿ ಜತೆಗೂಡಿ ಸಾಕುನಾಯಿಗಳಿಗೆ ಸ್ನಾನ ಮಾಡಿಸಿ ನಲಿಯುತ್ತಾರೆ. ಭಾನುವಾರದ ತಮ್ಮ ಈ ಚಟುವಟಿಕೆಯ ಕುರಿತ ವಿಡಿಯೋವನ್ನು ನತಾಷಾ ಸ್ಟ್ಯಾಂಕೋವಿಕ್​ ಇನ್​ಸ್ಟಾಗ್ರಾಂನಲ್ಲಿ ಹಾಕಿದ್ದು, ಭಾರಿ ವೈರಲ್​ ಆಗಿದೆ.
    ಪೈಪ್​ ಹಿಡಿದ ಹಾರ್ದಿಕ್​ ನಾಯಿಗಳಿಗೆ ನೀರು ಹಾಕುತ್ತಿದ್ದರೆ, ಕೃಣಾಲ್​ ಮತ್ತು ನತಾಷಾ ಅವುಗಳಿಗೆ ಸೋಪು ಹಾಕಿ, ಮೈ ತಿಕ್ಕಿ ಸ್ನಾನ ಮಾಡಿಸುತ್ತಿದ್ದಾರೆ.

    ಅಕ್ರಮ ಮದ್ಯ ಸಾಗಣೆ ಆರೋಪ; ಸಂಬಿತ್​ ಪಾತ್ರಾ ಮತ್ತು ಅಮಿತ್​ ಮಾಳ್ವೀಯಗೆ ನೋಟಿಸ್​ ರವಾನಿಸಿದ ಬಿ.ವಿ. ಶ್ರೀನಿವಾಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts