More

    ಸಾಲ ಮರು ಪಾವತಿಸುವಂತೆ ಕಿರುಕುಳ

    ಕಾರವಾರ: ಜನರಿಗೆ ಯಾವುದೇ ದಾಖಲೆ ಇಲ್ಲದೇ ಸಾಲ ನೀಡಿದ ಹಣಕಾಸು ಸಂಸ್ಥೆಗಳು ಅದರ ವಸೂಲಿಗೆ ಈಗ ಸಾಲಗಾರರ ಮನೆ ಬಾಗಿಲಿಗೆ ತೆರಳುತ್ತಿವೆ. ಕರೊನಾ ಆತಂಕ, ಲಾಕ್​ಡೌನ್ ಸಂಕಷ್ಟದಲ್ಲಿದ್ದ ಜನ ಹಣಕಾಸು ಸಂಸ್ಥೆಗಳ ವಸೂಲಿ ಪದ್ಧತಿಯಿಂದ ಕಂಗಾಲಾಗಿದ್ದಾರೆ.
    ಸ್ಪಂದನ, ಎಲ್​ಆಂಡ್​ಟಿ, ಎಸ್​ಕೆಎಸ್, ಬಿಎಸ್​ಎಸ್ ಮುಂತಾ ಹೆಸರಿನ ಕೆಲವು ಕಂಪೆನಿಗಳು ತಾಲೂಕಿನ ವಿವಿಧೆಡೆ ಕಾರ್ಯನಿರ್ವಹಿಸುತ್ತಿವೆ. ತಾಲೂಕಿನ ಸಾವಿರಾರು ಮಹಿಳೆಯರಿಗೆ ಲಕ್ಷಾಂತರ ರೂ. ಸಾಲ ನೀಡಿವೆ. ಎರಡು ಫೋಟೊ, ಆಧಾರ ಕಾರ್ಡ್ ಪ್ರತಿ ಹಾಗೂ 10 ಜನ ಸ್ಥಳೀಯ ರಹವಾಸಿಗಳ ಜಾಮೀನು ಸಹಿ ಸಿಕ್ಕರೆ 1 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಶೇ. 19 ರಷ್ಟು ಬಗ್ಗೆ ಪಡೆಯುತ್ತವೆ. ಪ್ರತಿ ವಾರ ಬಡ್ಡಿ ಹಾಗೂ ಅಸಲನ್ನು ವಸೂಲಿ ಮಾಡುವುದು ರೂಢಿ ಎಂಬುದು ಸಾಲ ಪಡೆದ ಮಹಿಳೆಯರು ನೀಡುವ ಮಾಹಿತಿ.
    ಈಗ ಕರೊನಾ ಲಾಕ್​ಡೌನ್​ನಿಂದ, ಹಲವರು ದುಡಿಮೆ ಇಲ್ಲದೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಊಟ ಮಾಡಿಕೊಂಡು ಹೋದರೆ ಸಾಕಪ್ಪ ಎಂಬ ಪರಿಸ್ಥಿತಿಗೆ ಬಂದಿದ್ದಾರೆ. ಆದರೂ ಸಂಸ್ಥೆಗಳ ಪ್ರತಿನಿಧಿಗಳು ಸಾಲ ವಸೂಲಿಗಾಗಿ ಮನೆಗಳಿಗೆ ಬಂದು ಕಿರುಕುಳ ನೀಡುತ್ತಿದ್ದಾರೆ ಎಂಬುದು ಹಲವು ಮಹಿಳೆಯರ ದೂರು.
    ‘ಕಷ್ಟದಲ್ಲಿ ಸಂಸ್ಥೆಗಳು ಈ ಹಣಕಾಸು ಸಂಸ್ಥೆಗಳು ನಮಗೆ ಸಾಲ ಕೊಟ್ಟಿವೆ. ನಾವು ಹಣ ಮರುಪಾವತಿ ಮಾಡಲು ನಿರಾಕರಿಸುತ್ತಿಲ್ಲ. ಆದರೆ, ಸಮಯಾವಕಾಶ ನೀಡಬೇಕು. ಕರೊನಾ ಸಮಯದಲ್ಲಿ ಯಾರಿಗೂ ಓಡಾಡಲು ಅವಕಾಶವಿಲ್ಲದಿದ್ದರೂ ಇವರು ದಿನ ಬೆಳಗ್ಗೆ ವಸೂಲಿಗಾಗಿ ಮನೆ ಬಾಗಿಲಿಗೆ ಬರುವುದು ಸರಿಯಾಗದು’ ಎನ್ನುತ್ತಾರೆ ವಾಜಂತ್ರಿವಾಡದ ಮಹಿಳೆ ರೇಷ್ಮಾ.
    ವಾಜಂತ್ರಿವಾಡದಲ್ಲಿ ಆಕ್ಷೇಪ
    ಹಣ ವಸೂಲಿಗೆ ನಗರದ ನಂದನಗದ್ದಾ ವಾಜಂತ್ರಿವಾಡಕ್ಕೆ ಸೋಮವಾರ ಬೆಳಗ್ಗೆ ಹಣಕಾಸು ಸಂಸ್ಥೆಯ ಪ್ರತಿನಿಧಿ ಆಗಮಿಸಿದ ಬಗ್ಗೆ ಸ್ಥಳೀಯ ಹತ್ತಾರು ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ ಅವರ ನೇತೃತ್ವದಲ್ಲಿ ಸಂಸ್ಥೆ ಜತೆ ರ್ಚಚಿಸಿ ಸಾಲ ತುಂಬಲು ಕಾಲಾವಕಾಶ ಕೊಡುವಂತೆ ಮನವಿ ಮಾಡಿದರು.


    ನೋಂದಣಿಯಾಗದ ಹಣಕಾಸು ಸಂಸ್ಥೆಗಳು ಬ್ಯಾಂಕ್​ಗಳಂತೆ ಸಾಲ ಕೊಟ್ಟು, ಹಣಕಾಸಿನ ವ್ಯವಹಾರ ನಡೆಸುವುದು ಅಪರಾಧ. ಇದನ್ನು ತಡೆಯಲು ಕಾಯ್ದೆಯೊಂದು ಇತ್ತೀಚೆಗೆ ಜಾರಿಯಾಗಿದೆ. ಯಾರಾದರೂ ಅಧಿಕೃತವಾಗಿ ದೂರು ನೀಡಿದಲ್ಲಿ ಅಂಥ ಸಂಸ್ಥೆಗಳ ವಿರುದ್ಧ ಕ್ರಮ ವಹಿಸಲಾಗುವುದು.
    ಶಿವಪ್ರಕಾಶ ದೇವರಾಜು
    ಎಸ್​ಪಿ, ಉತ್ತರ ಕನ್ನಡ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts