More

    ಹತ್ತು ಲಕ್ಷ ರೂ.ಗೆ ಸಹಾಯ ಧನ ಹೆಚ್ಚಿಸಿ

    ಹರಪನಹಳ್ಳಿ: ಪುರಸಭೆ ವ್ಯಾಪ್ತಿಯ ನಿವೇಶನ ಮತ್ತು ವಸತಿ ರಹಿತ ಕುಟುಂಬಗಳಿಗೆ ನೀಡುತ್ತಿರುವ ಸಹಾಯ ಧನವನ್ನು 10 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಎಐಎಸ್‌ಎಫ್ ಹಾಗೂ ಸಿಪಿಐ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

    ಆಶ್ರಯ ಮನೆಗಳನ್ನು ನಿರ್ಗತಿಕರಿಗಿಂತ ಕೆಲ ಸ್ಥಿತಿವಂತರಿಗೆ ಕಲ್ಪಿಸಲಾಗಿದೆ. ಬಡಜನರಿಗೆ ಸೂರು ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಪಟ್ಟಣದ ಎಲ್ಲ ಬಡವರಿಗೆ ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

    ಎಐವೈಎಫ್ ಸಂಚಾಲಕ ಎಚ್.ಎಂ.ಸಂತೋಷ ಮಾತನಾಡಿ, ಮನೆ ನಿರ್ಮಿಸಿಕೊಳ್ಳಲು ನೀಡುವ ಸಹಾಯ ಧನವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

    ಸಿಪಿಐ ತಾಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಸತಿ ರಹಿತರಿಗೆ 2022 ರೊಳಗೆ ಮನೆ ನೀಡುತ್ತೇವೆ ಎಂದು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿವೆ. ಆದರೆ, ಇಲ್ಲಿಯವರೆಗೂ ಸಮೀಕ್ಷೆ ಮಾಡಿಲ್ಲ. ಇಂದಿನಿಂದಲೇ ವಸತಿ ರಹಿತರು ಮಾದರಿ ಅರ್ಜಿ ನೀಡಲಿದ್ದೇವೆ. ಸ್ವೀಕರಿಸಿ ಹಿಂಬರಹ ನೀಡಬೇಕು ಎಂದು ಆಗ್ರಹಿಸಿದರು.

    ಪುರಸಭೆ ಮುಖ್ಯಾಧಿಕಾರಿ ನಾಗರಾಜನಾಯ್ಕ ಮಾತನಾಡಿ, ನಿವೇಶನ ಇದ್ದವರಿಗೆ ಅರ್ಜಿ ಸಲ್ಲಿಸಿದ ಕೂಡಲೇ ಪರಿಶೀಲಿಸಿ ಹಣ ಮಂಜೂರು ಮಾಡುತ್ತೇವೆ. ಇದಕ್ಕೆ ಜಾತಿಮಿತಿ ಇಲ್ಲ. ಸರ್ಕಾರದ ಆದೇಶಗಳನ್ನು ಪಾಲಿಸಲಾಗುವುದು ಎಂದರು. 

    ಮುಖಂಡರಾದ ಪಿ. ನಾಗರಾಜ್, ಮುಜೀಬುರ್ ರೆಹಮಾನ್, ರಮೇಶ್ ನಾಯ್ಕ, ಕೊಟ್ರೇಶ್, ಇಸ್ಮಾಯಿಲ್, ಜಬೀವುಲ್ಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts