More

    ಸಾಮಾಜಿಕ ಪಿಂಚಣಿಗಾಗಿ ಕಚೇರಿ ಅಲೆದಾಟ

    ಹರಪನಹಳ್ಳಿ: ತಾಲೂಕಿನ ಹಿರಿಯ ನಾಗರಿಕರು ಸಾಮಾಜಿಕ ಪಿಂಚಣಿಗಾಗಿ ಸರ್ಕಾರಿ ಕಚೇರಿಗೆ ಅಲೆಯುತ್ತಿದ್ದಾರೆ.
    ಲಾಕ್‌ಡೌನ್‌ನಂತಹ ಸಂಕಷ್ಟ ಕಾಲದಲ್ಲಿ ತಾಲೂಕಿನ ವಿವಿಧ ಹಳ್ಳಿಗಳ ವಯೋವೃದ್ಧರು ತಾಲೂಕು ಕಚೇರಿ, ಅಂಚೆ ಕಚೇರಿಗೆ ನಿತ್ಯ ಪಿಂಚಣಿ ಅಲೆದಾಡುತ್ತಿದ್ದಾರೆ. ಕೆಲವರಿಗೆ 3,4 ತಿಂಗಳಾದರೂ ಖಾತೆಗೆ ಹಣ ಬಂದಿಲ್ಲ ಎಂದು ಅಂಚೆ ಕಚೇರಿಗೆ ಎಡತಾಕುತ್ತಿದ್ದಾರೆ.

    ಸರ್ಕಾರ ಮಾಸಿಕ ಸಾಮಾಜಿಕ ಪಿಂಚಣಿ ಮೂಲಕ ವಯೋವೃದ್ಧರು, ವಿಧವೆಯರು, ಅಂಗವಿಕಲರಿಗೆ ನೆರವಾಗುತ್ತಿದೆ. ಆದರೆ, ಇದು, ಕೆಲವು ತಿಂಗಳಿಂದ ಬಂದಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಂಬಂಧಿತ ಇಲಾಖಾಧಿಕಾರಿಗಳು ಗಮನ ಹರಿಸಿ ಸೌಲಭ್ಯ ಒದಗಿಸಬೇಕಿದೆ.

    ತಾಲೂಕಿನಲ್ಲಿ ಎಷ್ಟಿದ್ದಾರೆ:ವೃದ್ಧಾಪ್ಯ ವೇತನ – 5042, ಸಂಧ್ಯಾ ಸುರಕ್ಷಾ- 17424, ವಿಧವೆಯರು- 10143, ಅಂಗವಿಕಲರು- 5943, ಮೈತ್ರಿ-21, ಮನಸ್ವಿನಿ-972 ಸೇರಿ 40 ಸಾವಿರದಷ್ಟು ಪಿಂಚಣಿದಾರರು ಇದ್ದಾರೆ. ಇದರಲ್ಲಿ ಬಹುತೇಕರಿಗೆ ಮಾಸಿಕ ಪಿಂಚಣಿ ಬಂದಿಲ್ಲ.
    ಮಾಹಿತಿ ಮೈಗ್ರೇಟ್ ಆಗ್ತಾ ಇದೆ: ಹರಪನಹಳ್ಳಿ ತಾಲೂಕು ದಾವಣಗೆರೆಯಿಂದ ಬಳ್ಳಾರಿ ಜಿಲ್ಲೆಗೆ ಸೇರಿದ್ದು, ಸರ್ಕಾರ (ಕೆ-1) ಖಜಾನೆ-1ರಿಂದ ಖಜಾನೆ-2 (ಕೆ-2) ತಂತ್ರಾಂಶದಲ್ಲಿ ಬದಲಾವಣೆಯಾಗಿದೆ. ಹಾಗಾಗಿ, ಈ ಮಾಹಿತಿ ಅದರಲ್ಲಿ ಅಳವಡಿಸಬೇಕಾಗಿದೆ. ಈ ಕೆಲಸ ಈಗಾಗಲೇ ತಾಲೂಕು ಕಚೇರಿಯ ಕಂದಾಯ ಸಿಬ್ಬಂದಿ ನಿತ್ಯ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ ಶಿರಸ್ತೇದಾರರು.
    ಈ ವಯಸ್ಸಿನಲ್ಲಿ ನಮಗೆ ದುಡಿಯಲು ಆಗುವುದಿಲ್ಲ. ಜೀವನ ನಡೆಸುವುದು ಕಷ್ಟ. 4 ತಿಂಗಳಿಂದ ಸಂಬಳ ಬಂದಿಲ್ಲ. ಕೇಳಲಿಕ್ಕೆ ಅಂಚೆ ಕಚೇರಿಗೆ ಬಂದ್ದೇವೆ ಎಂದು ಅಡಿವಿಹಳ್ಳಿಯ ಬಸಮ್ಮ, ಭಾಗ್ಯಮ್ಮ, ಬಾಪೂಜಿನಗರದ ಹುಲಿಗೆಮ್ಮ, ಅಂಜುಮ್ ಅಳಲು ತೋಡಿಕೊಂಡರು.

    ಈಗಾಗಲೇ 17886 ಪಿಂಚಣಿದಾರರ ಮಾಹಿತಿಯನ್ನು ಭೌತಿಕವಾಗಿ ಪರಿಶೀಲಿಸಿದ್ದು, ಉಳಿದಂತೆ 14 ಸಾವಿರದಲ್ಲಿ 3 ಸಾವಿರ ಪಿಂಚಣಿದಾರರ ಆಧಾರ್, ಜಾತಿ, ಆದಾಯ, ಬ್ಯಾಂಕ್ ಪಾಸ್‌ಬುಕ್‌ನ ಮೂಲಕ ಪರಿಶೀಲನೆ ಪ್ರಕ್ರಿಯೆಯಲ್ಲಿದ್ದು, ಪೂರ್ಣಗೊಂಡು ಅವರ ಖಾತೆಗೆ ನಗದು ಜಮಾ ಆಗಲಿದೆ. ಪಿಂಚಣಿ ಬಾರದಿದ್ದರೆ ಕೂಡಲೇ ಗ್ರಾಮದ ಲೆಕ್ಕಾಧಿಕಾರಿಗೆ ಸಂಬಂಧಿತ ದಾಖಲೆ ಸಲ್ಲಿಸಿ ಎಂದು ತಹಸೀಲ್ದಾರ್ ಡಾ.ನಾಗವೇಣಿ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts