More

    ಗ್ರಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಮಂಡನೆ

    ಹರಪನಹಳ್ಳಿ: ನಂದಿಬೇವೂರು ಗ್ರಾಪಂ ಅಧ್ಯಕ್ಷೆ ಆವಿನ ಸುಜಾತಾ ವಿರುದ್ಧ ಸದಸ್ಯರು ಶುಕ್ರವಾರ ಅವಿಶ್ವಾಸ ಮಂಡಿಸಿದ್ದಾರೆ.

    ಗ್ರಾಪಂ 23 ಸದಸ್ಯರ ಬಲ ಹೊಂದಿದೆ. ಸದಸ್ಯರು-ಅಧ್ಯಕ್ಷೆ ವಿರುದ್ಧ ಹೊಂದಾಣಿಕೆ ಕೊರತೆ ಘಟನೆಗೆ ಕಾರಣವಾಗಿದೆ. ಹೀಗಾಗಿ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಸಮ್ಮುಖದಲ್ಲಿ ಕೈಎತ್ತುವ ಮೂಲಕ ಅಧ್ಯಕ್ಷೆ ವಿರುದ್ಧ ಸದಸ್ಯರು ಅವಿಶ್ವಾಸ ಮಂಡಿಸಿದರು. ಈ ಸಂದರ್ಭ ಹಾಜರಿದ್ದ 17 ಸದಸ್ಯರಲ್ಲಿ 16 ಜನ ಅಧ್ಯಕ್ಷೆ ವಿರುದ್ಧ ಕೈಎತ್ತಿದರೆ, ಒಬ್ಬರು ಪರ ಬೆಂಬಲಿಸಿದರು. ಆರು ಜನ ಗೈರಾಗಿದ್ದರು. ಗ್ರಾಪಂ ಸುತ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಗ್ರಾಪಂ ಹೊರಗೆ ಸಾಕಷ್ಟು ಸಂಖ್ಯೆ ಜನ ಜಮಾಯಿಸಿದ್ದರು. ಈ ಸಂದರ್ಭ ಉಪಾಧ್ಯಕ್ಷೆ ಕೆ.ಲಕ್ಷ್ಮೀ ಚಂದ್ರಶೇಖರ, ಸದಸ್ಯರಾದ ಅಕ್ಕಮ್ಮ, ಬೃಂದಮ್ಮ, ಬಿ.ರತ್ನಮ್ಮ, ಬಿ.ವೀರಣ್ಣ, ಭರಮಪ್ಪ, ಜಯಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts