More

    ಮಕ್ಕಳಿಗೆ ಶಿಕ್ಷಣ ಕೊಡಿಸಿ

    ಹರಪನಹಳ್ಳಿ: ಮೇದಾರ ಸಮಾಜದವರು ಸಂಘಟಿತರಾಗಬೇಕು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಹೇಳಿದರು.

    ಪಟ್ಟಣದ ನಟರಾಜ ಕಲಾಭವನದಲ್ಲಿ ಶನಿವಾರ ಶ್ರೀ ಮೇದಾರ ಕೇತೇಶ್ವರ ಜ್ಯೋತಿಯಾತ್ರೆ ಸಮಾರೋಪದ ಸಾನ್ನಿಧ್ಯವಹಿಸಿ ಮಾತನಾಡಿದರು.

    ಮೇದಾರ ಸಮಾಜದ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಗುರುಪೀಠದಲ್ಲಿ ನಿತ್ಯ ದಾಸೋಹ ಹಾಗೂ ಗುರುಪೀಠದ ಅಭಿವೃದ್ಧಿಗೆ ಸಮಾಜದವರ ಸಹಕಾರ ಅಗತ್ಯ ಎಂದರು.

    ಮೇದಾರ ಕುಲಕಸುಬಾದ ಬಿದರಿನ ಮರ, ಬುಟ್ಟಿ, ಚಿಬ್ಬಲಿ, ಚಾಪೆ, ಮಂಟಪ ತಯಾರಿಸಿ ತೆರೆದ ವಾಹನದಲ್ಲಿ ಸಕಲ ವಾದ್ಯಗಳೊಂದಿಗೆ ಶ್ರೀ ಮೇದಾರ ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿಗಳ ಮೆರವಣಿಗೆ ನಟರಾಜ ಕಲಾಭವನದವರೆಗೆ ತೆರಳಿತು.

    ಮೇದಾರ ಸಮಾಜದ ಅಧ್ಯಕ್ಷ ಕೃಷ್ಣ ಅಧ್ಯಕ್ಷತೆವಹಿಸಿದ್ದರು. ದಾವಣಗೆರೆ ಮೇದಾರ ಸಮಾಜದ ಅಧ್ಯಕ್ಷ ಬಸವರಾಜ, ಮೇದಾರ ಜ್ಯೋತಿಯ ಅಧ್ಯಕ್ಷ ಸಿ.ಪಿ.ಪಾಟೀಲ್, ಪ್ರಧಾನ ಕಾರ್ಯದರ್ಶಿ ಎಂ.ಮಾರುತಿ, ಮೈಲಾರಪ್ಪ, ಪಾಂಡಪ್ಪ, ಬಸವರಾಜ, ಎಚ್.ರಮೇಶ್, ರಾಜಪ್ಪ ಮೇದಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts