More

    ಉಪವಿಭಾಗಾಧಿಕಾರಿ ಅಮಾನತಿಗೆ ಆಗ್ರಹ

    ಹರಪನಹಳ್ಳಿ: ಕರ್ತವ್ಯ ಲೋಪ ಆರೋಪದಡಿ ಸರ್ಕಾರದಿಂದ ವರ್ಗಾವಣೆಗೊಂಡಿದ್ದನ್ನು ಪ್ರಶ್ನಿಸಿ, ಕೋರ್ಟ್‌ನಿಂದ ತಡೆಯಾಜ್ಞೆ ತಂದು ಸೇವೆಯಲ್ಲಿ ಮುಂದುವರಿದ ಉಪ ವಿಭಾಗಾಧಿಕಾರಿ ಅವರ ಅಮಾನತಿಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

    ಸಿಪಿಐ(ಎಂಎಲ್) ಸಂಘಟನೆ ಮುಖಂಡ ಇದ್ಲಿ ರಾಮಪ್ಪ ಮಾತನಾಡಿ, ಈ ಹಿಂದೆ ಪ್ರಗತಿಪರ ಸಂಘಟನೆಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳು ಹೋರಾಟ ಮಾಡಿದ್ದರ ಪರಿಣಾಮ ರಾಜ್ಯಸರ್ಕಾರ ಎಸಿ ಅವರನ್ನು ವರ್ಗಾವಣೆಗೊಳಿಸಿತ್ತು. ಇದಾದ ಬಳಿಕ ಮತ್ತೆ ಕೋರ್ಟ್‌ನಿಂದ ತಡೆಯಾಜ್ಞೆ ತಂದು ಸೇವೆಯಲ್ಲಿ ಮುಂದುವರಿದಿದ್ದಾರೆ. ಇವರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗಿದೆ ಎಂದು ದೂರಿದರು.

    ಪ್ರಸನ್ನಕುಮಾರ ಅವರು ಹರಪನಹಳ್ಳಿ ಉಪ ವಿಭಾಗಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ನಂತರ ಉಪವಿಭಾಗದ ಕಂದಾಯ ಆಡಳಿತ ಸಂಪೂರ್ಣ ನೆಲಕಚ್ಚಿದೆ. ಸಾರ್ವಜನಿಕ ಅಹವಾಲು ಕೇಳುವವರೇ ಇಲ್ಲವಾಗಿದೆ. ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿದರು.

    ಸ್ಥಳೀಯ ಕಂದಾಯ ಅಪೀಲು ಪ್ರಕರಣಗಳಲ್ಲಿನ ಕಾನೂನುಬಾಹಿರ ಆದೇಶಗಳನ್ನು ತನಿಖೆಗೆ ಒಳಪಡಿಸಬೇಕು. ನೆರೆ ಸಂತ್ರಸ್ತರ ಪರಿಹಾರದಲ್ಲೂ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಪುರಸಭೆ ಆಡಳಿತಾಧಿಕಾರಿಯಾಗಿಯೂ ಭ್ರಷ್ಟಾಚಾರ ನಡೆಸಿದ್ದಾರೆ. ಇವರ ಆಡಳಿತಾವಧಿಯ ಎಲ್ಲ ಹಗರಣ ಮತ್ತು ಆರೋಪಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು. ಇಲ್ಲವಾದರೆ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಎಸ್.ಆರ್.ತಿಮ್ಮಣ್ಣ, ಬಾಲಗಂಗಾಧರ, ಅಜ್ಜಪ್ಪ, ಮಹಾಂತೇಶ್, ನಾಗರಾಜ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts