More

    ಕೀಟಬಾಧೆ ಪತ್ತೆಗೆ ಕಣ್ಗಾವಲು ಸಮೀಕ್ಷೆ

    ಹರಪನಹಳ್ಳಿ: ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹೂವಿನಹಡಗಲಿ ಹಾಗೂ ಹರಪನಹಳ್ಳಿಯ ಕೃಷಿ ಇಲಾಖೆ ಸಹಯೋಗದಲ್ಲಿ ತಾಲೂಕಿನ ವಿವಿಧ ಹಳ್ಳಿಗಳ ಮುಂಗಾರು ಹಂಗಾಮಿನ ಬೆಳೆಗಳಿಗೆ ತಗುಲಿರುವ ಕೀಟ ಮತ್ತು ರೋಗ ಬಾಧೆ ಬಗ್ಗೆ ಕಣ್ಗಾವಲು ಸಮೀಕ್ಷೆ ನಡೆಸಲಾಯಿತು.

    ತಾಲೂಕಿನ ಕಸಬಾ ಹೋಬಳಿಯ ಬಾವಿಹಳ್ಳಿ, ಕಣಿವಿಹಳ್ಳಿ, ನಂದಿಬೇವೂರು, ಚಿಗಟೇರಿ ಹಾಗೂ ತೆಲಿಗಿ ಹೋಬಳಿಯ ಕುಂಚೂರು, ಕೆ. ಕಲ್ಲಹಳ್ಳಿ, ಹಲುವಾಗಲು, ಚಿರಸ್ತಹಳ್ಳಿ ಪ್ರದೇಶದ ಮೆಕ್ಕೆಜೋಳ ಬೆಳೆಯಲ್ಲಿ ಕೀಟಗಳ ಸಮೀಕ್ಷೆ ನಡೆಸಲಾಗಿದ್ದು, ಪ್ರಸ್ತುತ ಯಾವ ಬೆಳೆಯಲ್ಲೂ ಕೀಟ ಬಾಧೆ ಕಾಣಿಸಿಲ್ಲ. ಮುಂದಿನ ಹಂತಗಳಲ್ಲಿ ಕೀಟಗಳ ಚಟುವಟಿಕೆ ಹಾಗೂ ಬಾಧೆಯನ್ನು ನೋಡಿಕೊಂಡು ರೈತರು ನಿರ್ವಹಣೆ ಕೈಗೊಳ್ಳಬಹುದು ಎಂದು ಸಮೀಕ್ಷಾ ತಂಡದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ತಾತ್ಕಾಲಿಕ ನಿರ್ವಹಣೆ: ತಾಲೂಕಿನಲ್ಲಿ ಶೇ.25-30ರಷ್ಟು ಮೆಕ್ಕೆಜೋಳಕ್ಕೆ ಲದ್ದಿಹುಳು ಬಾಧಿಸಿದ್ದು, ಶೇ.10-15ರಷ್ಟು ಬೆಳೆ ಹಾನಿಯಾಗಿದೆ. ಇದಕ್ಕೆ ರೈತ ಸಂಪರ್ಕಕ್ಕೆ ಭೇಟಿ ನೀಡಿ ಔಷಧ ಸಿಂಪಡಣೆ ಬಗ್ಗೆ ಮಾಹಿತಿ ಪಡೆಯಬಹುದು ಎಂದರು.

    ಸಮೀಕ್ಷೆ ವೇಳೆ ವಿಸ್ತರಣಾ ಮುಂದಾಳು, ಬೇಸಾಯ ತಜ್ಞ ಡಾ.ಸಿ.ಎಂ.ಕಾಲಿಬಾವಿ, ಕೀಟತಜ್ಞ ಹನುಮಂತಪ್ಪ, ಶ್ರೀಹರಿ, ಸಹಾಯಕ ಕೃಷಿ ನಿರ್ದೇಶಕ ಕಚೇರಿ ತಾಂತ್ರಿಕ ಅಧಿಕಾರಿ ಮಹಮದ್‌ರಫಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts