More

    ಹೆಚ್ಚುವರಿ ಶುಲ್ಕ ವಸೂಲಿ ಆರೋಪ, ಪ್ರತಿಭಟನೆ ಸ್ಥಳಕ್ಕೆ ಶಾಸಕ ರೆಡ್ಡಿ ಭೇಟಿ

    ಹರಪನಹಳ್ಳಿ: ಅಧಿಕ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಎಸ್‌ಎಸ್‌ಎಚ್‌ಜೈನ್ ಪಿಯು ಕಾಲೇಜು ಆವರಣಕ್ಕೆ ಶಾಸಕ ಜಿ.ಕರುಣಾಕರರೆಡ್ಡಿ ಶುಕ್ರವಾರ ಭೇಟಿ ನೀಡಿ, ಆಡಳಿತ ಮಂಡಳಿ ಜತೆ ಚರ್ಚೆ ನಡೆಸಿದರು.

    ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು, ವಿದ್ಯಾರ್ಥಿ ಸಂಘಟನೆಯ ಮುಖಂಡರು, ವಿದ್ಯಾರ್ಥಿಗಳು, ಪಾಲಕಲರು ಕಾಲೇಜು ಆಡಳಿತ ಮಂಡಳಿ ವಿರುದ್ಧ ಶಾಸಕರ ಬಳಿ ಅಳಲು ತೊಡಿಕೊಂಡರು. ಸಮಸ್ಯೆಗಳನ್ನು ಅಲಿಸಿದ ಶಾಸಕ, ಪ್ರಾಚಾರ್ಯರರ ಕೊಠಡಿಗೆ ಆಗಮಿಸಿ, ಶುಲ್ಕ, ರಸೀದಿ, ಮತ್ತು ಉಪನ್ಯಾಸಕರ ವೇತನ ಪಟ್ಟಿ, ಸಿಬ್ಬಂಧಿ ಹಾಜರಾತಿ ಮೊದಲಾದ ದಾಖಲೆಗಳನ್ನು ಪರಿಶೀಲಿಸಿದರು.

    ಪ್ರಾಚಾರ್ಯರು ನಿರಂತರ ಗೈರಾಗಿರುವು ಪತ್ತೆಯಾಗಿದ್ದರಿಂದ ಕಾಲೇಜು ಶಿಕ್ಷಣ ಇಲಾಖೆಯ ಉಪನಿದೇರ್ಶಕರಿಗೆ ದೂರವಾಣಿ ಕರೆ ಮಾಡಿದ ಶಾಸಕ, ಮಧ್ಯ ಪ್ರವೇಶಿಸುವಂತೆ ಮಾಡಬೇಕು ಎಂದು ಹೇಳಿದರು. ಕಾಲೇಜಿನಲ್ಲಿ ಸರ್ಕಾರದ ಮಾನದಂಡಗಳನ್ನು ಮೀರಿ ಹೆಚ್ಚುವರಿ ಶುಲ್ಕ ಪಡೆಯಲಾಗುತ್ತಿದೆ. ಸರ್ಕಾರ ಮತ್ತು ಕಾಲೇಜು ಆಡಳಿತ ಮಂಡಳಿ ನಡುವೆ ಸಮನ್ವಯ ಸಾಧಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

    ಬಳಿಕ ಕಾಲೇಜು ಶುಲ್ಕದ ನ್ಯೂನತೆ ಬಗ್ಗೆ ಉಪನಿರ್ದೇಶಕರ ಆದೇಶದ ಮೇರೆಗೆ ತನಿಖೆ ನಡೆಸಿ ವರದಿ ಮಾಡಿಕೊಳ್ಳಲು ನೇಮಿಸಲಾಗಿದ್ದ, ಲಕ್ಷ್ಮೀಪುರ ಕಾಲೇಜು ಪ್ರಾಚಾರ್ಯ ರಾಮಚಂದ್ರಪ್ಪ ಅವರಿಂದ ಮಾಹಿತಿ ಪಡೆದರು. ಅಲ್ಲೆ ಗೈರಾದ ಕಾಲೇಜಿನ ಪ್ರಾಚಾರ್ಯರು ವಿರುದ್ಧ, ಶುಲ್ಕ ಸಂಗ್ರಹದ ವರದಿಯನ್ನು ಡಿಡಿಪಿಯುಗೆ ಸಲ್ಲಿಸಲು ಸೂಚಿಸಿದರು.

    ಕಾಲೇಜು ಪ್ರಾಚಾರ್ಯ ಬಸವರಾಜಪ್ಪಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಶಾಸಕ, ಯಾವ ಕಾರಣಕ್ಕೆ ಗೈರಾಗಿದ್ದೀರಿ ಎಂದು ಪ್ರಶ್ನಿಸಿ, ಇನ್ನೊಬ್ಬರಿಗೆ ಪ್ರಭಾರ ವಹಿಸಿ ತೆರಳಬೇಕಾಗಿತ್ತು ಎಂದರು. ತಾಲೂಕಿನ ಗ್ರಾಮೀಣ ಭಾಗದಿಂದ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸಕ್ಕೆ ಬರುತ್ತಾರೆ. ಕೂಡಲೇ ಆಡಳಿತ ಮಂಡಳಿ ಜತೆ ಮಾತನಾಡಿ, ಸರ್ಕಾರದ ನಿಯಮಾನುಸಾರ ಶುಲ್ಕ ಸಂಗ್ರಹಿಸಿ. ಪಾಲಕರಿಗೆ ಅನುಕೂಲವಾಗುವಂತೆ ಹಂತ ಹಂತವಾಗಿ ಶುಲ್ಕ ಪಾವತಿಗೆ ಅನುಕೂಲ ಮಾಡಿಕೊಡಿ ಎಂದು ಸೂಚಿಸಿದರು. ಪ್ರಮುಖರಾದ ಬಾಗಳಿ ಕೊಟ್ರೇಶಪ್ಪ, ವಕೀಲರಾದ ಕೆ.ಪ್ರಕಾಶ್, ಪ್ರಾಣೇಶ್, ರೇವಣಸಿದ್ದಪ್ಪ, ಬಿ.ಮೆಹಬೂಬ್‌ಸಾಬ್, ಕಣಿವಿಹಳ್ಳಿ ಮಂಜುನಾಥ್, ಎಂ.ಮಲ್ಲೇಶ್, ಶಿವಾನಂದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts