More

    ಬೆಂಗಳೂರಿಗರಿಗೆ ಸಿಹಿ ಸುದ್ದಿ: ಇಂದಿರಾ ಕ್ಯಾಂಟೀನ್​ನಲ್ಲಿ ಸಿಗಲಿದೆ ಉಚಿತ ಊಟ ಉಪಾಹಾರ

    ಬೆಂಗಳೂರು: ಕರೊನಾ ಸೋಂಕು ವ್ಯಾಪಿಸುತ್ತಿರುವ ಕಾರಣ ಲಾಕ್​ಡೌನ್ ಘೋಷಣೆಯಾಗಿದ್ದು, ಬಡವರು ಮತ್ತು ಶ್ರಮಿಕ ವರ್ಗ ಹಸಿವಿನಿಂದ ಬಳಲಬಾರದು ಎಂದು ಸರ್ಕಾರ ಆರಂಭದಲ್ಲಿ ಇಂದಿರಾ ಕ್ಯಾಂಟೀನ್​ನಲ್ಲಿ ಉಚಿತ ತಿಂಡಿ ಮತ್ತು ಊಟವನ್ನು ಒದಗಿಸುವುದಾಗಿ ಘೋಷಿಸಿ ತತ್​ಕ್ಷಣವೇ ಅನುಷ್ಠಾನಗೊಳಿಸಿತ್ತು ಕೂಡ. ಆದರೆ, ಸೋಷಿಯಲ್ ಡಿಸ್ಟೆನ್ಸಿಂಗ್ ಬಗ್ಗೆ ಜನ ಗಮನಹರಿಸದ ಕಾರಣ ಸರ್ಕಾರ ಇದನ್ನು ರದ್ದುಗೊಳಿಸಿತು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ ಗುರುವಾರ ಬೆಳಿಗ್ಗೆಯಿಂದಲೇ ಇಂದಿರಾ ಕ್ಯಾಂಟೀನ್’ನಲ್ಲಿ ಉಚಿತ ಊಟ ತಿಂಡಿ ವಿತರಣೆ ಮತ್ತೆ ಶುರುವಾಗಿದೆ.

    ಸಾರ್ವಜನಿಕರಿಗೆ ಉಚಿತವಾಗಿ ಫುಡ್ ಸಪ್ಲೈ ಮಾಡಲಾಗುತ್ತಿದ್ದು, ಲಾಕ್ ಡೌನ್ ಆದೇಶ ಹಿನ್ನೆಲೆ ಜನರಿಗೆ ಊಟದ ಪರ್ಯಾಯ ವ್ಯವಸ್ಥೆಯಾಗಿ ಇದನ್ನು ನಿರ್ವಹಿಸಲಾಗುತ್ತಿದೆ ಎಂದು ಆಹಾರ ಪೂರೈಕೆ ಮಾಡುವ ಚೆಫ್ ಟಾಕ್ (Cheftalk Food & Hospitality Services) ಕಂಪೆನಿಯ ಮುಖ್ಯಸ್ಥ ಗೋವಿಂದ ಪೂಜಾರಿ ಹೇಳಿಕೆ ನೀಡಿದ್ದಾರೆ.

    ಮೆನು ಬದಲಾವಣೆ ಆಗಿದ್ದು, ಅದರ ವಿವರವನ್ನೂ ಅವರು ಕೊಟ್ಟಿದ್ದಾರೆ. ಇದುವರೆಗೆ ಪ್ರತಿದಿನ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ಸಂಜೆ ಊಟ ಪೂರೈಕೆ ಮಾಡಲಾಗುತ್ತಿತ್ತು. ಪ್ರತಿ ಹೊತ್ತಿನಲ್ಲೂ ತಲಾ 70,000 ಮಂದಿಗೆ ಊಟ ತಿಂಡಿ ವಿತರಣೆ ಮಾಡಲಾಗುತ್ತಿತ್ತು. ಆದರೆ ಗುರುವಾರದಿಂದ ಮೂರೂ ಹೊತ್ತು ತಲಾ 11 ಸಾವಿರ ರೈಸ್ ಬಾತ್ ಹಾಗೂ ಪಲಾವ್ ಪೂರೈಕೆ ಮಾಡಲಾಗುತ್ತದೆ. ರೈಸ್ ಬಾತ್ ಜೊತೆ ಚಟ್ನಿ ಹಾಗೂ ಪಲಾವ್ ಜೊತೆ ಗ್ರೇವಿ ಮತ್ತು ಸೂಕ್ತ ಡಿಶ್ ಇರಲಿದೆ. ಬೆಂಗಳೂರಿನ 33 ವಾರ್ಡ್’ಗಳಲ್ಲಿ ತಲಾ 200 ಪ್ಯಾಕೆಟ್ ಆಹಾರ ವಿತರಣೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಬೆಳಿಗ್ಗೆ 8 ಗಂಟೆ, ಮಧ್ಯಾಹ್ನ 12.30 ಹಾಗೂ ರಾತ್ರಿ 7.30ಕ್ಕೆ ಆಯ್ದ ಇಂದಿರಾ ಕ್ಯಾಂಟೀನ್’ಗಳಲ್ಲಿ ಈ ಆಹಾರ ವಿತರಣೆಗೆ ವ್ಯವಸ್ಥೆ ಆಗಿದೆ ಎಂದು ಅವರು ತಿಳಿಸಿದ್ದಾರೆ.

    ಹಸಿದವರ ಹೊಟ್ಟೆ ತುಂಬಿಸಲು ತುರ್ತುಕಾರ್ಯಕ್ರಮ ಘೋಷಣೆಗೆ ಆಗ್ರಹಿಸಿದ ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರಿಂದ ಮುಖ್ಯಮಂತ್ರಿ ಅವರಿಗೆ ಬಹಿರಂಗ ಪತ್ರ: ಬರೆದವರಾರು ಇಲ್ಲಿದೆ ವಿವರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts