More

    ಧಾರ್ಮಿಕತೆಯ ಶ್ರೇಯೋಭಿವೃದ್ಧಿಗೆ ದೇವಾಲಯ ಸಹಕಾರಿ

    ಹನೂರು: ತಾಲೂಕಿನ ಮಲೆ ಮಹದೇಶ್ವರಬೆಟ್ಟ ಸಮೀಪದ ಹಳೆಯೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ್ದ ಶಿವನವ್ವ ದೇಗುಲವನ್ನು ಸಾಲೂರು ಬೃಹನ್ಮಾಠಧ್ಯಕ್ಷ ಗುರುಸ್ವಾಮೀಜಿ ಶುಕ್ರವಾರ ಉದ್ಘಾಟಿಸಿದರು.

    ನಂತರ ಮಾತನಾಡಿ, ಬೇಡಗಂಪಣ್ಣ ಸಮುದಾಯದವರು ದೇವಸ್ಥಾನವನ್ನು ನಿರ್ಮಿಸಿರುವುದು ಧಾರ್ಮಿಕತೆಯ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗಲಿದೆ. ಜತೆಗೆ ಜನರಲ್ಲಿ ಭಕ್ತಿಭಾವ ಇನ್ನಷ್ಟು ಹೆಚ್ಚಾಗಲಿದೆ. ಇಲ್ಲಿಗೆ ಆಗಮಿಸುವ ಭಕ್ತರಿಗೆ ದೇವರು ಅನುಗ್ರಹ ಕರುಣಿಸಲಿ ಎಂದರು.

    ಜನಾಶ್ರಯ ಟ್ರಸ್ಟ್‌ನ ಗೌರವಾಧ್ಯಕ್ಷ ವೆಂಕಟೇಶ್ ಮಾತನಾಡಿ, ದೇವಸ್ಥಾನದಲ್ಲಿ ನಿತ್ಯ ವಿಶೇಷ ಪೂಜಾ ಕಾರ್ಯಗಳು ನಡೆಯಬೇಕು. ಅಲ್ಲದೆ, ಮುಂದಿನ ದಿನಗಳಲ್ಲಿ ತರಬೇತಿ ಹೊಂದಿದ್ದ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ಕೊಡಿಸುವುದರ ಜತೆಗೆ ಮಕ್ಕಳ ಶಿಕ್ಷಣಕ್ಕೆ ಸಹಾಯ ಹಸ್ತ ನೀಡಲಾಗುವುದು ಎಂದು ಭರವಸೆ ನೀಡಿದರು.

    ಜನಾಶ್ರಯ ಟ್ರಸ್ಟ್ ಕಾರ್ಯದರ್ಶಿ ಲೋಕೇಶ್, ಪದಾಧಿಕಾರಿಗಳಾದ ಹೆಬ್ಬಲುಗುಪ್ಪೆ ಶಿವಪ್ಪ, ಕಳಲೆ ಮಹದೇವಪ್ಪ, ಶಿವಲಿಂಗಯ್ಯ, ನರಸಿಂಹಮೂರ್ತಿ, ಯತೀಶ್, ಮುಖಂಡರಾದ ತಮ್ಮೇಗೌಡ, ಗಿರಿಯಪ್ಪ ಮಾದೇಶ, ನಾಗಪ್ಪತಂಬಡಿ, ಮಾದತಂಬಂಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts