More

    ಶಿಸ್ತು, ಸಂಸ್ಕಾರ ಕಲಿವುದೇ ಶಿಕ್ಷಣ; ಶಾಸಕ ಅಮರೇಗೌಡ ಪಾಟೀಲ ಬಯ್ಯಪುರ ವ್ಯಾಖ್ಯಾನ

    ಅನ್ನದಾನೇಶ್ವರ ಶಾಲೆಯ 35ನೇ ವಾರ್ಷಿಕೋತ್ಸವ

    ಹನುಮಸಾಗರ: ಅಕ್ಷರ ಕಲಿಯುವುದು ಮಾತ್ರ ಶಿಕ್ಷಣವಲ್ಲ. ಶಿಸ್ತು ಮತ್ತು ಸಂಸ್ಕಾರ ಕಲಿಯುವುದು ನಿಜವಾದ ಶಿಕ್ಷಣ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಪುರ ಹೇಳಿದರು.

    ಪಟ್ಟಣದ ಶ್ರೀ ಅನ್ನದಾನೇಶ್ವರ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ 35 ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಅಕ್ಷರ ಕಲಿತವರು ಭವಿಷ್ಯ ರೂಪಿಸಿಕೊಳ್ಳಬಹುದು. ಆದರೆ, ಶಿಸ್ತು ಮತ್ತು ಸಂಸ್ಕಾರ ಕಲಿತವರು ತಮ್ಮ ಭವಿಷ್ಯದ ಜತೆ ಇತರರಿಗೆ ಆದರ್ಶರಾಗುತ್ತಾರೆ. ನಾವು ಕಲಿತ ವಿದ್ಯೆ ಮತ್ತು ಸಂಸ್ಕಾರ ಮಾತ್ರ ಜೀವನದಲ್ಲಿ ಉಪಯೋಗಕ್ಕೆ ಬರುತ್ತದೆ. ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅಕ್ಷರ ಜ್ಞಾನದ ಜೊತೆಗೆ ಶಿಸ್ತು, ಸಂಸ್ಕಾರವನ್ನು ಕಲಿಸುತ್ತಿರುವ ಅನ್ನದಾನ ಸ್ವಾಮೀಜಿ ಕಾರ್ಯ ಶ್ಲಾಘನೀಯ ಎಂದರು.

    ಗವಿಮಠದ ಸಿದ್ದಲಿಂಗ ದೇವರು ಮಾತನಾಡಿ, ನಿರ್ದಿಷ್ಟ ಗುರಿ ಇದ್ದರೆ ಮಾತ್ರ ಸಾಧನೆ ಸಾಧ್ಯ. ಇಂದು ತಂದೆ, ತಾಯಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುತ್ತಿಲ್ಲ. ಬದಲಾಗಿ ಮೊಬೈಲ್ ನೀಡುತ್ತಿದ್ದಾರೆ. ಇದರಿಂದ ಮಕ್ಕಳು ಹಾಳಾಗುತ್ತಿದ್ದಾರೆ. ಇಂದು ನಾಡಿನಲ್ಲಿ ಸಂಗೀತ ಮಹತ್ವ ಪಡೆದುಕೊಂಡಿರುವುದಕ್ಕೆ ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳು ಕಾರಣ. ಅವರನ್ನು ನಾವು ಆದರ್ಶವಾಗಿಟ್ಟುಕೊಂಡು ಸಾಧನೆ ಮಾಡಬೇಕು ಎಂದರು.

    ಹಾಳಕೇರಿ ಸಂಸ್ಥಾನಮಠದ ಡಾ. ಅಭಿನವ ಅನ್ನದಾನ ಸ್ವಾಮೀಜಿ, ಮುಪ್ಪಿನ ಬಸವಲಿಂಗ ಸ್ವಾಮೀಜಿ, ಸಂಸ್ಥೆ ಅಧ್ಯಕ್ಷ ಸಂಗಯ್ಯ ವಸ್ತ್ರದ, ಜಿಪಂ ಸದಸ್ಯ ಭೀಮಣ್ಣ ಅಗಸಿಮುಂದಿನ, ತಾಪಂ ಸದಸ್ಯೆ ಶಕೀಲಾ ಆಸೀಫ್ ಡಾಲಾಯತ್, ಪ್ರಾಚಾರ್ಯ, ವೈ.ಎಸ್.ಪಾಟೀಲ್, ಮಾಜಿ ಸೈನಿಕ ಸಂಗಮೇಶ ಕೊಪ್ಪದ, ಗ್ರಾಪಂ ಉಪಾಧ್ಯಕ್ಷೆ ನೂರುಜಹಾನ್ ಬೇಗಂ ಮೊಟಗಿ, ನಿವೃತ್ತ ಮುಖ್ಯ ಶಿಕ್ಷಕಿ ಪ್ರಭಾ ಪಂತ, ಮುಖಂಡರಾದ ಶರಣಪ್ಪ ಅಗಸಿಮುಂದಿನ, ಸೂಚಪ್ಪ ದೇವರಮನಿ, ಶ್ರೀನಿವಾಸ ಜಹಗೀರದಾರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts