More

    ತೇವಾಂಶ ಕೊರತೆಗೆ ಒಣಗುತ್ತಿದೆ ಬೆಳೆ: ಹತ್ತು ದಿನಗಳಿಂದ ಮರೆಯಾದ ಮಳೆ, ರೈತರು ಕಂಗಾಲು

    ಹನುಮಸಾಗರ: ಹನುಮಸಾಗರ ಹಾಗೂ ಹನುಮನಾಳ ಹೋಬಳಿ ವ್ಯಾಪ್ತಿಯಲ್ಲಿ ಕಳೆದ 10 ದಿನಗಳಿಂದ ಮಳೆಯಾಗಿಲ್ಲ. ಹೀಗಾಗಿ ವಿವಿಧ ಬೀಜಗಳನ್ನು ಬಿತ್ತನೆ ಮಾಡಿರುವ ರೈತರು ಕಂಗಾಲಾಗಿದ್ದಾರೆ.

    ಕೃತ್ತಿಕಾ ಹಾಗೂ ರೋಹಿಣಿ ಮಳೆಯಲ್ಲಿ ಹೆಸರು ಬಿತ್ತನೆ ಮಾಡಿದರೆ ಉತ್ತಮ ಫಸಲು ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ದಿಕ್ಕು ತೋಚದಂತಾಗಿದೆ. ಹೆಸರು, ಅಲಸಂದಿ, ಮೆಕ್ಕೆಜೋಳ ಸೇರಿ ವಿವಿಧ ಬೆಳೆಗಳು ಎರಡು ಎಲೆ ಬಿಟ್ಟಿವೆ. ಆದರೆ, ಮಳೆ ಮರೆಯಾದ ಕಾರಣ ತೇವಾಂಶ ಕೊರತೆಯಿಂದ ಒಣಗುತ್ತಿವೆ. ಮೇ ಮೂರನೇ ವಾರದಲ್ಲಿ ಎರಡ್ಮೂರು ದಿನ ಮುಂಗಾರು ಪೂರ್ವ ಮಳೆ ಸುರಿದಿದ್ದರಿಂದ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಭೂಮಿ ಹದಗೊಳಿಸಿ, ಸಾಲ ಮಾಡಿ ಬೀಜ ಖರೀದಿಸಿ ಬಿತ್ತನೆ ಮಾಡಿದ್ದರು. ಆದರೆ, ಮಳೆ ಕೈಕೊಟ್ಟಿದ್ದರಿಂದ ಮೊಳಕೆಯಲ್ಲೆ ಬೆಳೆ ಒಣಗುತ್ತಿದ್ದು, ರೈತರನ್ನು ಆತಂಕಕ್ಕೆ ದೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts