More

    ಹೈಟೆನ್ಷನ್ ವೈರ್ ತೆರವುಗೊಳಿಸಿ: ಹನುಮಸಾಗರದಲ್ಲಿ ಜೆಸ್ಕಾಂ ಅಧಿಕಾರಿಗಳಿಗೆ 3ನೇ ವಾರ್ಡ್ ನಿವಾಸಿಗಳ ಮನವಿ

    ಹನುಮಸಾಗರ: ಪಟ್ಟಣದ 3ನೇ ವಾರ್ಡ್‌ನಲ್ಲಿ ಹಾದು ಹೋಗಿರುವ ಹೈಟೆನ್ಷನ್ ವೈರ್ ತೆರವುಗೊಳಿಸುವಂತೆ ಸ್ಥಳೀಯ ನಿವಾಸಿಗಳು ಸೋಮವಾರ ಜೆಸ್ಕಾಂ ಕಚೇರಿಯಲ್ಲಿ ಏರ್ಪಡಿಸಿದ್ದ ಗ್ರಾಹಕರ ಕುಂದಕೊರತೆ ಸಭೆಯಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ವಾರ್ಡ್‌ನ ಗೋವಿಂದರಾಜ ದೇವಸ್ಥಾನ ಹತ್ತಿರ ಹೈಟೆನ್ಷನ್ ವೈರ್ ಸಾರ್ವಜನಿಕರ ಮನೆಗಳ ಮೇಲೆಯೇ ಹಾದು ಹೋಗಿದ್ದು ಕೈಗೆಟುಕುವ ಎತ್ತರದಲ್ಲಿದೆ. ಇದರಿಂದ ಜೀವ ಭಯದಲ್ಲಿ ಮಾಳಿಗೆ ಹತ್ತಬೇಕಾಗಿದೆ. ಸಾರ್ವಜನಿಕರ ಮನೆಗಳಿಗೆ ಕಟ್ಟಿಗೆ ಕಂಬ ಹಾಕಿ ಸರ್ವೀಸ್ ವೈರ್ ಎಳೆಯಲಾಗಿದೆ. ಕಟ್ಟಿಗೆ ಕಂಬ ಮುರಿದು ಬಿದ್ದರೆ ಅನಾಹುತವಾಗಲಿದೆ. ಆದ್ದರಿಂದ ಹೈಟೆನ್ಷನ್ ವೈರ್‌ಗಳನ್ನು ತೆರವುಗೊಳಿಸಬೇಕು. ಎಲ್‌ಟಿ ಕಂಬಗಳನ್ನು ಹಾಕಿ ಮನೆಗಳಿಗೆ ಹೊಸದಾಗಿ ಸರ್ವೀಸ್ ವೈರ್ ಹಾಕಬೇಕು ಎಂದು ಒತ್ತಾಯಿಸಿದರು.

    ಕುಷ್ಟಗಿ ಎಇ ದೀಪಾ ಮಾತನಾಡಿ, ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿ ಈಗಾಗಲೇ ಶಾಖಾಧಿಕಾರಿಗಳಿಗೆ ಅಂದಾಜು ವೆಚ್ಚ ಸಿದ್ದಪಡಿಸಲು ಸೂಚಿಸಲಾಗಿದೆ. ಶೀಘ್ರವೇ ಬದಲಿಸಲಾಗುವುದು. ಎಲ್ಲರೂ ಕಡ್ಡಾಯವಾಗಿ ಆರ್‌ಆರ್ ನಂಬರ್ ಪಡೆಯಬೇಕು ಎಂದರು.

    ಶಾಖಾಧಿಕಾರಿ ಬಸವರಾಜ ಮುದಗಲ್ ಮಾತನಾಡಿ, ಮೂರನೇ ವಾರ್ಡ್‌ನ ಗೋವಿಂದರಾಜ ದೇವಸ್ಥಾನ ಏರಿಯಾ ಗುಡ್ಡಕ್ಕೆ ಹೊಂದಿಕೊಂಡಿದ್ದರಿಂದ ಕಂಬ ಹಾಕಲು ಅರಣ್ಯ ಇಲಾಖೆಯ ಪರವಾನಗಿ ಪಡೆಯಬೇಕು. ಅನುಮತಿ ಸಿಕ್ಕ ತಕ್ಷಣ ಕ್ರಮ ಕೈಗೊಳ್ಳತ್ತೇವೆ ಎಂದು ತಿಳಿಸಿದರು. ಹನುಮನಾಳ ಶಾಖಾಧಿಕಾರಿ ಕಳಕಪ್ಪ ಕೊರಡಕೇರ, ಅಧಿಕಾರಿಗಳಾದ ಜಯಮಾಲಾ, ರಾಮಪ್ಪ ಕೊನಸಾಗರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts