More

    ಅಲೆದಾಟ ತಪ್ಪಿಸಲು ಕಂದಾಯ ಅದಾಲತ್, ತಹಸೀಲ್ದಾರ್ ಎಂ.ಸಿದ್ದೇಶ ಮಾಹಿತಿ

    ಹನುಮಸಾಗರ: ನಾನಾ ಯೋಜನೆಗಳ ಸಲುವಾಗಿ ಫಲಾನುಭವಿಗಳ ಅಲೆದಾಟ ತಪ್ಪಿಸಲು ಕಂದಾಯ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಎಂ.ಸಿದ್ದೇಶ ಹೇಳಿದರು.

    ಬಿಳೇಕಲ್‌ನಲ್ಲಿ ಪಿಂಚಣಿ, ಕಂದಾಯ ಹಾಗೂ ಪೌತಿ ಖಾತಾ ಆಂದೋಲನ ಅದಾಲತ್ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಪಿಂಚಣಿ, ಗ್ರಾಮವಾರು ಪಹಣಿಯಲ್ಲಿರುವ ಲೋಪದೋಷಗಳನ್ನು ತ್ವರಿತಗತಿಯಲ್ಲಿ ಸರಿಪಡಿಸುವ ಉದ್ದೇಶದಿಂದ ಸ್ಥಳದಲ್ಲೇ ಪಹಣಿ ತಿದ್ದುಪಡಿ ಒದಗಿಸಲಾಗುವುದು. ಜಮೀನಿನ ಮಾಲಿಕರು ಮರಣ ಹೊಂದಿದ ನಂತರ ಮೂಲ ಖಾತಾದಾರದಿಂದ ಅವರ ಕುಟುಂಬಗಳ ವಾರಸುದಾರರಿಗೆ ಸರ್ಕಾರದ ಯೋಜನೆಗಳ ಪರಿಹಾರದ ವಿಮೆ ಪಡೆಯಲು ಅನುಕೂಲವಾಗುವಂತೆ ಪೌತಿ ಖಾತಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು. ಎರಡು ಅಂಗವಿಕಲ, ಮೂರು ವಿಧವಾ ವೇತನ, ಏಳು ಸಂಧ್ಯಾ ಸುರಕ್ಷಾ ಸೇರಿ ಕೆಲ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಯಿತು.

    ಗ್ರಾಮಲೆಕ್ಕಾಧಿಕಾರಿಗಳಾದ ಪ್ರಸನ್ನ ಕುಲಕರ್ಣಿ, ರವಿ ಮಧನ್, ಹನುಮಂತಪ್ಪ ಸಂಶಿ, ಎಸ್ಡಿಎಂಸಿ ಅಧ್ಯಕ್ಷ ಪಂಪನಗೌಡ ಸಾಂತಗೌಡರ, ಶಿವಾನಂದ ರಾಮಸ್ವಾಮಿ, ಗ್ರಾಪಂ ಸದಸ್ಯರಾದ ಪರಮೇಶ ಕರಡಿ, ದೇವಕ್ಕ ಮಾರಸನಬಸರಿ, ಶೇಖಪ್ಪ ಕಂಬಳಿ, ಮಲ್ಲಿಕಾರ್ಜುನ ಮೇಗಲಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts