More

    ಮೀಸಲು ಅನುದಾನ ಮಾಹಿತಿ ನೀಡಿ

    ಹನುಮಸಾಗರ: ಇಲ್ಲಿನ ಗ್ರಾಪಂ ಕಚೇರಿಗೆ ಕಳೆದ ಮೂರು ವರ್ಷಗಳಿಂದ ಅಂಗವಿಕಲರಿಗೆ ಯಾವುದೇ ರೀತಿಯ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ಅಂಗವಿಕಲರು ಪಂಚಾಯಿತಿಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.

    ಕಳೆದ ಒಂದು ತಿಂಗಳಿಂದ ಅನುದಾನಕ್ಕಾಗಿ ಅಲೆದಾಡುತ್ತಿದ್ದೇವೆ. ಅಗತ್ಯ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸುಮ್ಮನಿದ್ದಾರೆ. ಗ್ರಾಪಂಗೆ ಆಗಮಿಸಿದ ವೇಳೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಈ ಹಿಂದೆ 2020ರಲ್ಲಿ ಹೊಲಿಗೆ ಂತ್ರಗಳನ್ನು ನೀಡಲಾಗಿತ್ತು. ನಂತರದ ದಿನಗಳಲ್ಲಿ ಅಂಗವಿಕಲರ ಮೀಸಲು ಅನುದಾನದಲ್ಲಿ ಏನನ್ನೂ ನೀಡಿಲ್ಲ. ಕಳೆದ ವಾರ ಭೇಟಿ ನೀಡಿದ ವೇಳೆ ಕಾಮಗಾರಿ ನಡೆಸಿ ಕೊಡುವ ಭರವಸೆ ನೀಡಿದ್ದರು. ಆದರೆ, ಈವರೆಗೆ ಕ್ರಮ ಕೈಗೊಂಡಿರುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಅಂಗವಿಕಲರ ಮೂರು ವರ್ಷದ ಅನುದಾನ ಎಷ್ಟಿದೆ ಎಂಬುದವನ್ನು ಲಿಖಿತ ರೂಪದಲ್ಲಿ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

    ಗ್ರಾಪಂ ದ್ವಿತೀಯ ದರ್ಜೆ ಸಹಾಯಕ ವೀರನಗೌಡ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ, ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಒ ಕಚೇರಿ ಕೆಲಸದ ಮೇಲೆ ಬೇರೆಕಡೆ ಹೋಗಿದ್ದಾರೆ. ತಾವುಗಳು ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದರೆ, ಅವರು ಆಗಮಿಸಿದ ನಂತರ ಗಮನಕ್ಕೆ ತರಲಾಗುವುದು ಎಂದರು.

    ಇದಕ್ಕೆ ಪ್ರತಿಕ್ರಿಯಿಸಿದ ಅಂಗವಿಕಲರು, ಈ ಹಿಂದೆ ಅನೇಕ ಬಾರಿ ಲಿಖಿತ ರೂದಪಲ್ಲಿ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಕ್ರಮವಾಗಿಲ್ಲ. ಈ ಬಗ್ಗೆ ತಾಪಂ ಇಒ ಹಾಗೂ ಜಿಪಂ ಸಿಇಒ ಮೂರು ವರ್ಷದ ಅನುದಾನದ ಮಾಹಿತಿ ಪಡೆದು ನಮಗೆ ನೀಡಬೇಕೆಂದು ಒತ್ತಾಯಿಸಿದರು.

    ಪ್ರತಿಭಟನೆಯಲ್ಲಿ ಅಂಗವಿಕಲರಾದ ಮಂಜುನಾಥ ಕೊಪ್ಪಳ, ಭಾಗ್ಯ ಬೆನಕಟ್ಟಿ, ಹುಲಿಗೆಮ್ಮ ಗೊಲ್ಲರ, ಜಗನ್ನಾಥ ಕಟುವ, ಪ್ರಭು ಅಂಗಡಿ, ಲಕ್ಷ್ಮೀ ದಾಸರ, ಹುಲ್ಲಪ್ಪ ಅಕ್ಕಿ, ಮುತ್ತಣ್ಣ ಮಳಗಿ, ಹನುಮಂತ ಕುದುರಿ, ಮರಿಯಪ್ಪ ಅಕ್ಕಿ, ಮಂಜುಳಾ ಹೂಗಾರ, ಪೀರ್‌ಸಾಬ್ ಹೊಸಮನಿ, ಆಸಿನ್‌ಸಾಬ್, ಶರಣಪ್ಪ, ಅಹಮದ್‌ಸಾಬ್, ಹನುಮಂತ ಶಿರಗುಂಪಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts